AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi Session: 8 ಸಾವಿರ ಕೋಟಿ ರೂ. ಪೂರಕ ಅಂದಾಜು ಮಂಡನೆ, ಯಾವುದಕ್ಕೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಒಟ್ಟು 8,001.13 ಕೋಟಿ ರೂಪಾಯಿಗಳ ಪೂರಕ ಅಂದಾಜು ಮಂಡನೆ ಮಾಡಲಾಗಿದೆ. ಹಾಗಾದ್ರೆ, ಯಾವುದಕ್ಕೆ ಎಷ್ಟು ಹಣ ಒದಗಿಸಲಾಗಿದೆ ಎನ್ನುವ ಮಾಹಿತಿ ಈ ಕೆಳಗಿಂತಿದೆ.

Belagavi Session: 8 ಸಾವಿರ ಕೋಟಿ ರೂ. ಪೂರಕ ಅಂದಾಜು ಮಂಡನೆ, ಯಾವುದಕ್ಕೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್
ವಿಧಾನಸಭೆ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Dec 26, 2022 | 7:11 PM

Share

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ(Belagavi Winter Session) ಇಂದು(ಡಿಸೆಂಬರ್ 26) ವಿಧಾನಸಭೆಯಲ್ಲಿ ಪೂರಕ ಅಂದಾಜು ಮಂಡನೆ ಮಾಡಲಾಯಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳು, ಮೈಸೂರು ದಸರಾ, ವಿವಿಧ ಮಠಗಳಿಗೆ ಅನುದಾನ, ಸಿಎಂ ಹಾಗೂ ಸಚಿವರ ಪ್ರವಾಸ,  ಪಶುಗಳ ಚರ್ಮಗಂಟು ರೋಗ ನಿಯಂತ್ರಣ ಸೇರಿ ಒಟ್ಟು 8,001.13 ಕೋಟಿ ರೂಪಾಯಿಗಳ ಪೂರಕ ಅಂದಾಜು ಮಂಡನೆ ಮಾಡಲಾಗಿದೆ. ಹಾಗಾದ್ರೆ, ಯಾವುದಕ್ಕೆ ಎಷ್ಟು ಹಣ ಎನ್ನುವ ಮಾಹಿತಿ ಈ ಕೆಳಗಿಂತಿದೆ.

ಇದನ್ನೂ ಓದಿ: New Year Covid Guidelines: ಹೊಸ ವರ್ಷಾಚರಣೆಗೆ ಕೊರೊನಾ ರೂಲ್ಸ್​​; ಸೆಲೆಬ್ರೆಶನ್​ಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ, ಮಾಸ್ಕ್​, ಲಸಿಕೆ ಕಡ್ಡಾಯ

8001.13 ಕೋಟಿ ರೂ. ಗಳ ಪೂರಕ ಅಂದಾಜು ಮಂಡನೆಯಲ್ಲಿ ಚರ್ಮಗಂಟು ರೋಗದಿಂದ ಸಾವನ್ನಪ್ಪಿದ ಹಸುಗಳಿಗೆ ಪರಿಹಾರ ನೀಡಲು 30 ಕೋಟಿ ರೂ ನಿಗದಿ ಮಾಡಲಾಗಿದೆ. ಹಾಗೇ ವಿಧಾನಸಭಾ ಚುನಾವಣೆ ಪೂರ್ವ ಸಿದ್ಧತೆಗಾಗಿ 300 ಕೋಟಿ ರೂ. ಮೀಸಲು ಇಡಲಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವರ ಹೆಲಿಕಾಪ್ಟರ್ ಬಿಲ್ ಪಾವತಿಗಾಗಿ 6 ಕೋಟಿ ರೂ. ಒದಗಿಸಲಾಗಿದೆ.

ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ಪೀಠಾಧಿಪತಿಯಾಗಿರುವ ವಿಶ್ವ ಗಾಣಿಗರ ಸಮುದಾಯ ಚಾರಿಟೆಬಲ್ ಟ್ರಸ್ಟ್ ಗೆ 3.5 ಕೋಟಿ ರೂ ಅನುದಾನ ನೀಡಲಾಗಿದೆ.

ಯಾವುದಕ್ಕೆ ಎಷ್ಟು ಹಣ ?

  1.  ನ್ಯಾ.ಭಕ್ತವತ್ಸಲ ಆಯೋಗಕ್ಕೆ 62 ಲಕ್ಷ ರೂ ನಿಗದಿ
  2. ಚಿಕ್ಕನಲ್ಲೂರು ಹೊಸಮಠಕ್ಕೆ 2 ಕೋಟಿ ರೂ ಮೀಸಲು
  3. ಈಡಿಗ ಜನಾಂಗದ ವಿಶೇಷ ಕೋಶ ಸೃಷ್ಟಿಸಲು 10 ಕೋಟಿ ರೂ.
  4. ಕರ್ನಾಟಕದಲ್ಲಿ ಜಿ-20 ಕಾರ್ಯಕಲಾಪಗಳಿಗೆ 26 ಕೋಟಿ ರೂ ನಿಗದಿ
  5. ಬೆಳಗಾವಿಯಲ್ಲಿ ಜಗನ್ನಾಥ ಜೋಶಿ ಜನ್ಮಶತಾಬ್ಧಿ ಸ್ಮಾರಕ ಭವನ ನಿರ್ಮಾಣಕ್ಕೆ 1 ಕೋಟಿ ರೂ.
  6. ಗಿರೀಶ್ ಕಾರ್ನಾಡ್ ರಚಿತ ಕ್ರಾಸಿಂಗ್ ಟು ತಾಳಿಕೋಟಾ ನಾಟಕ ಪ್ರದರ್ಶನಕ್ಕೆ 15 ಲಕ್ಷ ಸಹಾಯಧನ
  7. ರಂಗಶಂಕರ ಸಂಸ್ಥೆಗೆ 1 ಕೋಟಿ ರೂ. ಆರ್ಥಿಕ ಸಹಾಯ
  8. ಚಿಕ್ಕಮಗಳೂರು ಉತ್ಸವ ಆಚರಣೆಗೆ 5 ಕೋಟಿ ರೂ.
  9. ಪುನೀತ್ ರಾಜಕುಮಾರ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ 5 ಕೋಟಿ ರೂ ಮೀಸಲು
  10. ಕರ್ನಾಟಕ ಜಿ -20 ಶೃಂಗಸಭೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ 82 ಲಕ್ಷ ರೂ.
  11. ಮೈಸೂರು ದಸರಾ ಉತ್ಸವ ಆಚರಣೆಗೆ 9 ಕೋಟಿ 50 ಲಕ್ಷ ರೂ.
  12. ವಿಧಾನಸಭೆ ಉಪಸಭಾಧ್ಯಕ್ಷರಾಗಿದ್ದ ದಿ. ಆನಂದ ಮಾಮನಿ ಅವರ ವೈದ್ಯಕೀಯ ವೆಚ್ಚಕ್ಕಾಗಿ 46 ಲಕ್ಷ ರೂ.

Published On - 7:06 pm, Mon, 26 December 22