ಫೆ. 21ರ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ನಾವು ಭಾಗಿಯಾಗಲ್ಲ: ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೆಲಮಂಗಲದ ಬಸವಣ್ಣದೇವರ ಮಠದಲ್ಲಿ ನಡೆಸಿದ ಸುದ್ದಿಗೋಷ್ಠಿ ನಡೆಸಿದ್ದಾರೆ.
ನೆಲಮಂಗಲ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ, ನಾವೆಲ್ಲರೂ ಪಂಚಮಸಾಲಿಗಳು ಅಲ್ಲವೇ ಅಲ್ಲ ನಾವೆಲ್ಲರೂ ಲಿಂಗಾಯತ ವೀರಶೈವರು ಎಂದು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೆಲಮಂಗಲದ ಬಸವಣ್ಣದೇವರ ಮಠದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 2ಎ ಮೀಸಲಾತಿಗೂ, ನಮ್ಮ ಸಮುದಾಯಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು ಬಸವ ತತ್ತ್ವ, ಸಿದ್ಧಾಂತ ಮೇಲೆ ನಮ್ಮ ಮಠಗಳು ನಡೆಯುತ್ತಿವೆ. 2ಎ ಮೀಸಲಾತಿಗೂ, ನಮ್ಮ ಸಮುದಾಯಕ್ಕೂ ಸಂಬಂಧವೇ ಇಲ್ಲ. 106 ಒಳಪಂಗಡಗಳಿವೆ. ಎಲ್ಲರಿಗೂ 2ಎ ಮೀಸಲಾತಿ ಅಸಾಧ್ಯ. ಹೀಗಾಗಿ ಒಳಪಂಗಡಗಳ ಒಳ ಮೀಸಲಾತಿ ನಾವು ಕೇಳುವುದಿಲ್ಲ. 106 ಒಳಪಂಗಡಗಳಿಗೆ ಒಳ ಮೀಸಲಾತಿ ಕೇಳುವುದಾದರೆ, ನಾವು ಅವರ ಜೊತೆ ಇರುತ್ತೇವೆ ಎಂದಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಯಾವುದೋ ಒಂದು ಒಳಪಂಗಡಕ್ಕೆ ಸಹಕಾರ ನೀಡುವುದಿಲ್ಲ. ಒಂದು ಒಳಪಂಗಡಕ್ಕೆ ಸುತ್ತೂರು ಶ್ರೀಗಳು ಸಹಕಾರ ನೀಡಲ್ಲ. ವಚನಾನಂದ ಶ್ರೀಗಳು ಮೈಸೂರು ಪ್ರಾಂತ್ಯದ ಲಿಂಗಾಯತ ಗೌಡರು ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದಾರೆ ಎಂದು ಹೇಳಿಕೆ ಕೊಟ್ಟ ಮೇಲೆ ಚರ್ಚಿಸಲು ಸಭೆ ಸೇರಿದ್ದೆವು. ಫೆ. 21ರ ಅರಮನೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ನಾವು ಯಾರೂ ಭಾಗಿಯಾಗಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ: ಫೆ. 21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾವೇಶ