ಗಣೇಶ ಚತುರ್ಥಿಗೆ ಬಿಬಿಎಂಪಿ‌ಯಿಂದ ಹಲವು ನಿಯಮಗಳು ಜಾರಿ; ಉಲ್ಲಂಘಿಸಿದವರ ವಿರುದ್ಧ ಕ್ರಮ: ಕಮಿಷನರ್ ತುಷಾರ್ ಗಿರಿನಾಥ್

ಗಣೇಶ ಚತುರ್ಥಿಗೆ ಬಿಬಿಎಂಪಿ‌ ಹಲವು ನಿಯಮಗಳನ್ನು ಜಾರಿ ಮಾಡಿದ್ದು, ಈ ಬಾರಿಯೂ ಬೆಂಗಳೂರಿನಲ್ಲಿ ವಾರ್ಡ್​​ಗೊಂದೇ ಗಣೇಶ ಕೂಡಿಸಬೇಕೆಂದು ಹೇಳಿದೆ.

ಗಣೇಶ ಚತುರ್ಥಿಗೆ ಬಿಬಿಎಂಪಿ‌ಯಿಂದ ಹಲವು ನಿಯಮಗಳು ಜಾರಿ; ಉಲ್ಲಂಘಿಸಿದವರ ವಿರುದ್ಧ ಕ್ರಮ: ಕಮಿಷನರ್ ತುಷಾರ್ ಗಿರಿನಾಥ್
ಬಿಬಿಎಂಪಿ
TV9kannada Web Team

| Edited By: Vivek Biradar

Aug 06, 2022 | 6:29 PM

ಬೆಂಗಳೂರು: ಗಣೇಶ ಚತುರ್ಥಿಗೆ (Ganesh chaturthi) ಬಿಬಿಎಂಪಿ‌ (BBMP) ಹಲವು ನಿಯಮಗಳನ್ನು ಜಾರಿ ಮಾಡಿದ್ದು, ಈ ಬಾರಿಯೂ ಬೆಂಗಳೂರಿನಲ್ಲಿ (Bengaluru) ವಾರ್ಡ್​​ಗೊಂದೇ ಗಣೇಶ ಕೂಡಿಸಬೇಕೆಂದು ಬಿಬಿಎಂಪಿ ಹೇಳಿದೆ. ಕಳೆದ ವರ್ಷದ ನಿಯಮಗಳೆ ಈ ಬಾರಿಯೂ ಜಾರಿಯಾಗಲಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.  ಪಿಒಪಿ ಗಣೇಶ ಮೂರ್ತಿ ತಯಾರಿಸಬಾರದೆಂಬ ನಿಯಮವಿದೆ. ಹೀಗಾಗಿ ಯಾರೂ ಪಿಒಪಿ ಗಣೇಶ ಮೂರ್ತಿ ತಯಾರಿಸಿ, ಮಾರಾಟ ಮಾಡಬಾರದು. ಒಂದು ವೇಳೆ ಪಿಒಪಿ ಮೂರ್ತಿಗಳನ್ನ ಮಾರಿದರೇ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಸೇರಿ ರೇಡ್ ಮಾಡಿ ಕ್ರಮ‌ ಕೈಗೊಳ್ಳಲಾಗುತ್ತದೆ ಎಂದು ಖಡಕ್​ ಸೂಚನೆ ನೀಡಿದ್ದಾರೆ.

ಒಂದು ವಾರ್ಡ್​ಗೆ ಒಂದೇ ಗಣೇಶಮೂರ್ತಿ ಪ್ರತಿಷ್ಠಾಪನೆ ಬಿಬಿಎಂಪಿ ನಿರ್ಧಾರದ ವಿರುದ್ಧ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಬಿಬಿಎಂಪಿ ತನ್ನ ನಿರ್ಧಾರ ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ. ಇದು ಏಕಮುಖಿಯ ನಿರ್ಧಾರವಾಗಿದ್ದು ಅತ್ಯಂತ ಖಂಡನೀಯ. ಹಿಂದೂರಪ‌ ಸಂಘಟನೆಗಳು, ಧಾರ್ಮಿಕ ಮುಖಂಡರು ಸೇರಿದಂತೆ ಗಣೇಶ ಮೂರ್ತಿ ತಯಾರಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಹಿಂದೂ ಜನಜಾಗೃತಿ ಸಮಿತಿ ವಕ್ತಾರ ಮೋಹನ್ ಗೌಡ ಹೇಳಿದ್ದಾರೆ.

ಒಂದು ವಾರ್ಡ್​ಗೆ ಒಂದೇ ಗಣೇಶಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟನೆ ನೀಡಿದ್ದು, ಹಿಂದಿನ ವರ್ಷದ ಆದೇಶವನ್ನು ಪರಿಶೀಲನೆ ಮಾಡುತ್ತೇವೆ. ಬಳಿಕ ಸರ್ಕಾರದ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ನಾವೊಬ್ಬರೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ. ಮೂರ್ತಿ ಪ್ರತಿಷ್ಠಾಪನೆ ಸಂಬಂಧ ರಾಜ್ಯ ಮಟ್ಟದಲ್ಲಿ ಸಭೆ ನಡೆಯುತ್ತೆ. ಸರ್ಕಾರ ಹೇಗೆ ನಿರ್ದೇಶನ ನೀಡುತ್ತೋ ಅದನ್ನು ಪಾಲಿಸುತ್ತೇವೆ. ಪಿಒಪಿ ಮೂರ್ತಿಯನ್ನ ತಯಾರಿಸುವಂತಿಲ್ಲ ಎಂಬ ನಿಯಮವಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಜತೆ ಜಂಟಿಯಾಗಿ ಕೆಲಸ ಮಾಡುತ್ತೇವೆ. ಇದರ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದರು.

ಬಿಬಿಎಂಪಿ ವಾರ್ಡ್​ವಾರು ಮೀಸಲಾತಿ ಪಟ್ಟಿ ಪ್ರಕಟ: 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್​ವಾರು ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ಹಲವು ವಾರ್ಡ್​ಗಳಲ್ಲಿ ಮೀಸಲಾತಿ ಬದಲಾವಣೆಯಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಆಘಾತ ಎದುರಾಗಿದೆ. ಹಲವು ಪ್ರಮುಖ ಕಾಂಗ್ರೆಸ್​​ ನಾಯಕರ ವಾರ್ಡ್​ಗಳಿಗೆ ಮಹಿಳಾ ಮೀಸಲಾತಿ ಬಂದಿದೆ.

ಬಿಬಿಎಂಪಿಯಲ್ಲಿ ಆಡಳಿತ ಪಕ್ಷದ ಮಾಜಿ ನಾಯಕರಾಗಿದ್ದ ಶಿವರಾಜ್ ಅವರ ವಾರ್ಡ್​ಗೆ ಎಸ್​ಸಿ ಮೀಸಲಾತಿ ಬಂದಿದೆ. ಈ ಹಿಂದೆ ಇಲ್ಲಿ ಬಿಸಿಎ ಮೀಸಲಾತಿ ಇತ್ತು. ಅಕ್ಕಪಕ್ಕದ ವಾರ್ಡ್​ಗಳಲ್ಲೂ ಇವರಿಗೆ ಸ್ಪರ್ಧಿಸಲು ಸಾಧ್ಯವಾಗದಂತೆ ಮಹಿಳಾ ಮೀಸಲಾತಿ ಘೋಷಿಸಲಾಗಿದೆ. ಮಾಜಿ ಮೇಯರ್ ಪದ್ಮಾವತಿ ವಾರ್ಡ್​ಗೆ ಬಿಸಿಎ ಮೀಸಲಾತಿ ಇತ್ತು. ಈ ಹಿಂದೆ ಇಲ್ಲಿ ಬಿಸಿಬಿ ಮೀಸಲಾತಿಯಿತ್ತು. ಪದ್ಮಾವತಿ ಸ್ಪರ್ಧಿಸಲು ಅವಕಾಶ ಸಿಗಬಾರದು ಎನ್ನುವ ಕಾರಣಕ್ಕೆ ಹೀಗೆ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಬಿಬಿಎಂಪಿಯಲ್ಲಿ ಆಡಳಿತ ಪಕ್ಷದ ಮಾಜಿ ನಾಯಕರಾಗಿದ್ದ ಶಿವರಾಜ್ ಅವರ ವಾರ್ಡ್​ಗೆ ಎಸ್​ಸಿ ಮೀಸಲಾತಿ ಬಂದಿದೆ. ಈ ಹಿಂದೆ ಇಲ್ಲಿ ಬಿಸಿಎ ಮೀಸಲಾತಿ ಇತ್ತು. ಅಕ್ಕಪಕ್ಕದ ವಾರ್ಡ್​ಗಳಲ್ಲೂ ಇವರಿಗೆ ಸ್ಪರ್ಧಿಸಲು ಸಾಧ್ಯವಾಗದಂತೆ ಮಹಿಳಾ ಮೀಸಲಾತಿ ಘೋಷಿಸಲಾಗಿದೆ. ಮಾಜಿ ಮೇಯರ್ ಪದ್ಮಾವತಿ ವಾರ್ಡ್​ಗೆ ಬಿಸಿಎ ಮೀಸಲಾತಿ ಇತ್ತು. ಈ ಹಿಂದೆ ಇಲ್ಲಿ ಬಿಸಿಬಿ ಮೀಸಲಾತಿಯಿತ್ತು. ಪದ್ಮಾವತಿ ಸ್ಪರ್ಧಿಸಲು ಅವಕಾಶ ಸಿಗಬಾರದು ಎನ್ನುವ ಕಾರಣಕ್ಕೆ ಹೀಗೆ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಶಂಕರಮಠ ವಾರ್ಡ್​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಎಂ.ಶಿವರಾಜು ಸ್ಪರ್ಧಿಸುವ ಸಾಧ್ಯತೆಯಿತ್ತು. ಅಲ್ಲಿ ಸಾಮಾನ್ಯ ವರ್ಗಕ್ಕಿದ್ದ ಮೀಸಲಾತಿಯನ್ನು ತೆಗೆದು ಎಸ್​ಸಿಗೆ ನಿಗದಿಪಡಿಸಲಾಗಿದೆ. ಇದು ಸಚಿವ ಹಾಗೂ ಕ್ಷೇತ್ರ ಶಾಸಕ ಕೆ.ಗೋಪಾಲಯ್ಯ ಅವರ ರಾಜಕೀಯ ಚಾಣಾಕ್ಷ ನಡೆ ಎಂದೇ ಹೇಳಲಾಗುತ್ತಿದೆ.

ಹೆಬ್ಬಾಳದ ಮನೋರಾಯನಪಾಳ್ಯ ವಾರ್ಡ್​ನ ಅಬ್ದುಲ್ ವಾಜೀದ್ ಅವರಿಗೂ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ. ಆ ವಾರ್ಡ್​ ಅನ್ನು ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಿರಿಸಲಾಗಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜಯಮಹಲ್ ವಾರ್ಡ್​ನಿಂದ ಸ್ಪರ್ಧಿಸುತ್ತಿದ್ದ ಗುಣಶೇಖರ್​ಗೆ ಸ್ಪರ್ಧಿಸುವ ಅವಕಾಶ ನಿರಾಕರಿಸಲಾಗಿದೆ. ಅವರ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪರಮಾಪ್ತ ಮಡಿವಾಳ ವಾರ್ಡ್​ನ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ರೆಡ್ಡಿ ವಾರ್ಡ್​ ಅನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶ್ ನಗರ ವಾರ್ಡ್​ನಿಂದ ಸ್ಪರ್ಧಿಸುತ್ತಿದ್ದ ಮಾಜಿ ಮೇಯರ್ ಪದ್ಮಾವತಿ ವಾರ್ಡ್​ನ ಮೀಸಲಾತಿಯನ್ನು ಹಿಂದುಳಿದ ವರ್ಗಕ್ಕೆ (ಎ) ಬದಲಿಸಲಾಗಿದೆ.

ಜಯನಗರ ವಿಧಾನಸಭಾ ಕ್ಷೇತ್ರದ ಜಯನಗರ ವಾರ್ಡ್​ನ ಮತ್ತೋರ್ವ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ವಾರ್ಡ್​ ಸಿಗದಂತೆ ಮಾಡಲಾಗಿದೆ. ಭೈರಸಂದ್ರ ವಾರ್ಡ್​ನಿಂದ ಸ್ಪರ್ಧಿಸುವ ಆಸೆ ಇರಿಸಿಕೊಂಡಿದ್ದ ನಾಗರಾಜ್ ಅವರಿಗೂ ಅವಕಾಶ ಇಲ್ಲವಾಗಿದೆ. ಗುರಪ್ಪನಪಾಳ್ಯ ವಾರ್ಡ್​ನಿಂದ ಆಯ್ಕೆಯಾಗುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಮಹಮದ್ ರಿಜ್ವಾನ್​ಗೂ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆಯೇ ಇಲ್ಲದಂತಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada