AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಪ್ರಕಾಶ್​ ರಾಜ್​ ಫೌಂಡೇಷನ್​ನಿಂದ ಅಪ್ಪು ಎಕ್ಸ್‌ಪ್ರೆಸ್‌ ಹೆಸರಲ್ಲಿ ಆ್ಯಂಬುಲೆನ್ಸ್ ಕೊಡುಗೆ

ನನಗೆ ಪ್ರತಿಯೊಬ್ಬರಲ್ಲೂ ಅಪ್ಪು ಅಗಲಿಕೆಯ ನೋವು ಅಸಹಾಯಕತೆ ಕಾಣುತ್ತದೆ. ಒಬ್ಬರಿಗೆ ನೋವಾದರೆ ಸಾಂತ್ವನ ಹೇಳಬಹುದು. ಆದರೆ ಅಪ್ಪು ಅಗಲಿಕೆ ರಾಜ್ಯದ ಜನರಿಗೆ ನೋವು ತಂದಿತ್ತು.

ನಟ ಪ್ರಕಾಶ್​ ರಾಜ್​ ಫೌಂಡೇಷನ್​ನಿಂದ ಅಪ್ಪು ಎಕ್ಸ್‌ಪ್ರೆಸ್‌ ಹೆಸರಲ್ಲಿ ಆ್ಯಂಬುಲೆನ್ಸ್ ಕೊಡುಗೆ
ಅಪ್ಪು ಎಕ್ಸ್​​ಪ್ರೆಸ್​ ಹೆಸರಿನಲ್ಲಿ ಮಿಷನ್ ಆಸ್ಪತ್ರೆಗೆ ಆ್ಯಂಬುಲೆನ್ಸ್​ ಕೊಡುಗೆ ನೀಡಿದ ಪ್ರಕಾಶ್​ ರಾಜ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 06, 2022 | 1:24 PM

ಮೈಸೂರು: ಅಪ್ಪು ಎಕ್ಸ್​​ಪ್ರೆಸ್​ ಹೆಸರಿನಲ್ಲಿ ಮಿಷನ್ ಆಸ್ಪತ್ರೆಗೆ ನಟ ಪ್ರಕಾಶ್​ ರಾಜ್​​ ತಮ್ಮ ಪ್ರಕಾಶ್ ರಾಜ್ (Prakash Raj) ಫೌಂಡೇಷನ್‌ನಿಂದ ಆ್ಯಂಬುಲೆನ್ಸ್​ ಕೊಡುಗೆ ನೀಡುತ್ತೇನೆ ಎಂದು ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನಾವು ಇಲ್ಲಿ ಸೇರಲು ಕಾರಣ ಅಪ್ಪು. ಆಗ ಆ್ಯಂಬುಲೆನ್ಸ್ ಇದ್ದಿದ್ದರೆ ಅಪ್ಪು ಉಳಿದು ಬಿಡುತ್ತಿದ್ದರು ಎಂದು ಅನಿಸಿತು. ಅದಕ್ಕಾಗಿ ಅಪ್ಪು ಹೆಸರಲ್ಲಿ ಆ್ಯಂಬುಲೆನ್ಸ್ ನೀಡಲು ನಿರ್ಧಾರ ಮಾಡಿದ್ದೇನೆ. ಇದು ಕೇವಲ ಆರಂಭ ಮುಂದೆ 32 ಆ್ಯಂಬುಲೆನ್ಸ್ ಎಲ್ಲಾ ಜಿಲ್ಲೆಗಳಿಗೆ ನೀಡುತ್ತೇನೆ. ಅಪ್ಪು ಹೆಸರಲ್ಲಿ ಸಹಾಯ ಕೇಳಲು ನನಗೆ ಯಾವುದೇ ಮುಜುಗರ ಇಲ್ಲ. ಮಿಷನ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಕೇಳಿದ್ದಾರೆ. ಅದಕ್ಕೆ ನಾನು ಒಪ್ಪಿದ್ದೇನೆ ಸದ್ಯದಲ್ಲೇ ಅಪ್ಪು ಹೆಸರಿನಲ್ಲಿ ಬ್ಲಡ್ ಬ್ಯಾಂಕ್ ಆರಂಭವಾಗುತ್ತದೆ. ಈ ಮೂಲಕ ಅಪ್ಪು ಕೆಲಸಗಳಿಗೆ ಧನ್ಯವಾದ ಹೇಳುವ ಕೆಲಸ ಅಷ್ಟೇ. ಜಾತಿ, ಭಾಷೆ, ಧರ್ಮವನ್ನು ಮೀರಿ ಕೆಲಸ ಮಾಡೋಣ ಎಂದು ಹೇಳಿದರು.

ಇದನ್ನೂ ಓದಿ: Karnataka Ratna: ಪುನೀತ್​ ರಾಜ್​ಕುಮಾರ್​ಗೆ ನವೆಂಬರ್​ 1ರಂದು ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಸಿಎಂ ಬೊಮ್ಮಾಯಿ ಘೋಷಣೆ

ನನಗೆ ಪ್ರತಿಯೊಬ್ಬರಲ್ಲೂ ಅಪ್ಪು ಅಗಲಿಕೆಯ ನೋವು ಅಸಹಾಯಕತೆ ಕಾಣುತ್ತದೆ. ಒಬ್ಬರಿಗೆ ನೋವಾದರೆ ಸಾಂತ್ವನ ಹೇಳಬಹುದು. ಆದರೆ ಅಪ್ಪು ಅಗಲಿಕೆ ರಾಜ್ಯದ ಜನರಿಗೆ ನೋವು ತಂದಿತ್ತು. ನಮ್ಮ ಸಮಾಜ ಸಮುದಾಯಕ್ಕೆ ಮತ್ತಷ್ಟು ಕೆಲಸ ಆಗಬೇಕಿತ್ತು. ಮತ್ತೊಮ್ಮೆ ಅಪ್ಪು ಹುಟ್ಟು ಬರಲು 40 ವರ್ಷ ಬೇಕು. ಎತ್ತರಕ್ಕೆ ಬಂದವನಿಂದ ಮತ್ತಷ್ಟು ಜನ ಎತ್ತರಕ್ಕೆ ಬೆಳೆಯಬೇಕು ಅಂತಾ ಹೇಳಿದ್ದರು. ಚಿಕ್ಕ ಚಿಕ್ಕ ಸಿನಿಮಾಗೆ ಸಲಹೆ ನೀಡಿದ್ದೆ ಅದನ್ನು ಕಾರ್ಯರೂಪಕ್ಕೆ ತಂದರು. ಕೊರೊನಾ ಕಾಲದಲ್ಲಿ ನಾವು ಹಲವು ಕಾರ್ಯ ಮಾಡುತ್ತಿದ್ದೆ. ನಾನು ನಿಮ್ಮ ಫೌಂಡೇಶನ್‌ಗೆ ಸಹಾಯ ಮಾಡಬೇಕು ಅಂತಾ 2 ಲಕ್ಷ ನೀಡಿದರು. ಸಿನಿಮಾದ ಲೈಟ್ ಬಾಯ್‌ನಿಂದ ಎಲ್ಲರಿಗೂ ಅಪ್ಪು ಸಹಾಯ ಮಾಡಿದ್ದಾರೆ. ಅವರ ಒಳ್ಳೆಯ ಕಾರ್ಯ ಮುಂದುವರಿಸಬೇಕು ಎಂದು ಹೇಳಿದರು.

ನಿರ್ದೇಶಕ ಆನಂದ ರಾಮ್ ಮಾತನಾಡಿದ್ದು, ಅಪ್ಪು ಮಾಡಿದ ಕೆಲಸ ಆಪ್ತ ವಲಯಕ್ಕೂ ಗೊತ್ತಿರಲಿಲ್ಲ. ನಾನು ತುಂಬಾ ಆಪ್ತ ವಲಯದಲ್ಲಿದ್ದೆ ಆದರೆ ನನಗೂ ಅವರ ಸೇವಾ ಕಾರ್ಯದ ಬಗ್ಗೆ ಗೊತ್ತಿರಲಿಲ್ಲ. ಜಾತಿ, ಧರ್ಮವನ್ನು ಮೀರಿ ಕೆಲಸ ಮಾಡಿದರು. ಅದನ್ನು ಉಳಿಸುವ ಆಶಯ ಪ್ರಕಾಶ್ ರಾಜ್ ಅವರದ್ದು. ರಾಜಕುಮಾರ ಹೆಸರಲ್ಲ ಅದು ಶಕ್ತಿ. ಒಳ್ಳೆ ಕೆಲಸ ಮಾಡುವವರ ಕಾಲೆಳೆಯುವ ಮನಸ್ಥಿತಿ ಜಾಸ್ತಿಯಾಗಿದೆ. ಅಂತಹ ಕಾಲಘಟ್ಟದಲ್ಲಿ ಪುನೀತ್ ಎಲ್ಲರಿಗೂ ಮಾದರಿ. 32 ಜಿಲ್ಲೆಗಳಲ್ಲೂ ಅಪ್ಪು ಹೆಸರಿನಲ್ಲಿ ಸೇವಾ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ವೇಗದ ಶತಕ ಸಿಡಿಸಿ ಹೆಡ್ ದಾಖಲೆ ಮುರಿದ ಕ್ಲಾಸೆನ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ