ನಾಳೆಯಿಂದ ಆನ್​ಲೈನ್, ಆಫ್​ಲೈನ್ ಕ್ಲಾಸ್​ ಸಂಪೂರ್ಣ ಬಂದ್ -ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್

ರಾಜ್ಯ ಸರ್ಕಾರಕ್ಕೆ ಒಟ್ಟು 15 ಬೇಡಿಕೆಗಳನ್ನು ಇಟ್ಟಿದ್ದೇವೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸತ್ಯಾಗ್ರಹ ಮಾಡುತ್ತೇವೆ. ನಾಳೆ ಶಿಕ್ಷಣ ಸಚಿವರಿಗೆ ನಮ್ಮ ಬೇಡಿಕೆಯನ್ನು ಇಡುತ್ತೇವೆ. ಇದಾದ ಬಳಿಕ ಎಲ್ಲ ಶೈಕ್ಷಣಿಕ ಚಟುವಟಿಕೆ ನಿಲ್ಲಿಸುತ್ತೇವೆ. ಆನ್​ಲೈನ್, ಆಫ್​ಲೈನ್​ ತರಗತಿಗಳನ್ನು ಸ್ಥಗಿತಗೊಳಿಸ್ತೇವೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮುಂದುವರಿಸುತ್ತೇವೆ ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಲೋಕೇಶ್ ಎಚ್ಚರಿಕೆ ಕೊಟ್ಟರು

ನಾಳೆಯಿಂದ ಆನ್​ಲೈನ್, ಆಫ್​ಲೈನ್ ಕ್ಲಾಸ್​ ಸಂಪೂರ್ಣ ಬಂದ್ -ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್
ನಾಳೆಯಿಂದ ಆನ್​ಲೈನ್, ಆಫ್​ಲೈನ್ ಕ್ಲಾಸ್​ ಸಂಪೂರ್ಣ ಬಂದ್ -ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್
Follow us
KUSHAL V
|

Updated on:Dec 20, 2020 | 2:50 PM

ಬೆಂಗಳೂರು: ನಾಳೆಯಿಂದ ನಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸುವ ನಿರ್ಧಾರ ಮಾಡಿದ್ದೇವೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸತ್ಯಾಗ್ರಹ ಮಾಡುತ್ತೇವೆ ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ರಾಜ್ಯಾಧ್ಯಕ್ಷ ಲೋಕೇಶ್ ಹೇಳಿದ್ದಾರೆ.

ರಾಜ್ಯ ಸರ್ಕಾರಕ್ಕೆ ಒಟ್ಟು 15 ಬೇಡಿಕೆಗಳನ್ನು ಇಟ್ಟಿದ್ದೇವೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸತ್ಯಾಗ್ರಹ ಮಾಡುತ್ತೇವೆ. ನಾಳೆ ಶಿಕ್ಷಣ ಸಚಿವರಿಗೆ ನಮ್ಮ ಬೇಡಿಕೆಯನ್ನು ಇಡುತ್ತೇವೆ. ಇದಾದ ಬಳಿಕ ಎಲ್ಲ ಶೈಕ್ಷಣಿಕ ಚಟುವಟಿಕೆ ನಿಲ್ಲಿಸುತ್ತೇವೆ. ಆನ್​ಲೈನ್, ಆಫ್​ಲೈನ್​ ತರಗತಿಗಳನ್ನು ಸ್ಥಗಿತಗೊಳಿಸ್ತೇವೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮುಂದುವರಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ಎಚ್ಚರಿಕೆ ಕೊಟ್ಟಿದ್ದಾರೆ.

‘ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿ ಇರಲು ಯೋಗ್ಯರಲ್ಲ’ ಶಿಕ್ಷಣ ಇಲಾಖೆ ವಿರುದ್ಧ ಹೋರಾಟಕ್ಕೆ ಮುಂದಾದ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ (ರುಪ್ಸಾ) ಇಂದು ಸುದ್ದಿಗೋಷ್ಠಿ ನಡೆಸಿದರು. ಶಿಕ್ಷಣ ಸಚಿವರ ಹೇಳಿಕೆಯಿಂದ ಸಂಘರ್ಷ ಸೃಷ್ಟಿಯಾಯಿತು. ನಮ್ಮ, ಪೋಷಕರ ಮಧ್ಯೆ ಸಂಘರ್ಷವನ್ನು ಹುಟ್ಟುಹಾಕಿತು. ರಾಜ್ಯ ಸರ್ಕಾರ ಪದೇ ಪದೆ ಸುತ್ತೋಲೆ ಹೊರಡಿಸುತ್ತಿತ್ತು. ಇದರಿಂದ ನಮ್ಮ ಮೇಲೆ ಚಪ್ಪಡಿ ಕಲ್ಲು ಎಳೆದಂತಾಯಿತು ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದರು.

ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿ ಇರಲು ಯೋಗ್ಯರಲ್ಲ. ಬೇರೆ ಯಾರಾದ್ರೂ ಬಂದು ಶಿಕ್ಷಣ ಇಲಾಖೆ ನಿರ್ವಹಿಸಲಿ. ರಾಜ್ಯದಲ್ಲಿ ಶಿಕ್ಷಣ ಇಲಾಖೆ ಹೀನಾಯ ಸ್ಥಿತಿಯಲ್ಲಿದೆ. ದೇಶದಲ್ಲಿ ಇಷ್ಟೊಂದು ಹೀನಾಯ ಸ್ಥಿತಿಯಲ್ಲಿ ಇರಲಿಲ್ಲ. ನಾಚಿಕೆಗೇಡುತನದ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. 124 ಶಾಲೆಗಳ ಮುಚ್ಚುವ ಬಗ್ಗೆ ಸದನದಲ್ಲಿ ವಿಜೃಂಭಣೆಯಿಂದ ಹೇಳ್ತೀರಾ. ಪದೆ ಪದೇ ಇಂಥ ತಪ್ಪನ್ನ ಶಿಕ್ಷಣ ಇಲಾಖೆ ಮಾಡ್ತ ಇದೆ. ಪ್ರಜ್ಞೆಯಿಲ್ಲದ ಶಿಕ್ಷಣ ಸಚಿವರು ನಮಗೆ ಬೇಕಾ ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಪ್ರಶ್ನಿಸಿದರು.

‘ಸಚಿವರು ನೀಡಿದ ಭರವಸೆಗಳನ್ನು ಅವರೇ ಸುಳ್ಳಾಗಿಸಿದರು’ ಪಠ್ಯಕ್ರಮದ ಬಗ್ಗೆ ಘೋಷಿಸುವಂತೆ ಕೇಳಿದೆವು. ಆದರೆ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಖಾಸಗಿ ಶಾಲೆಗಳಿಗೆ ಪರಿಹಾರ ನೀಡುವಂತೆ ಕೇಳಿದೆವು. ಈ ಬಗ್ಗೆ ರಾಜ್ಯ ಸರ್ಕಾರ ಯೋಚನೆ ಮಾಡಲೇ ಇಲ್ಲ. ನಮ್ಮಲ್ಲಿ 5 ಲಕ್ಷ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ. ಸಚಿವರು ಅವರ ಬಳಿ ಹೋಗಿ ಮನವಿ ಸ್ವೀಕರಿಸಿ ಬಂದರು. ಸಚಿವರು ನೀಡಿದ ಭರವಸೆಗಳನ್ನು ಅವರೇ ಸುಳ್ಳಾಗಿಸಿದರು. ಶಿಕ್ಷಣ ಸಚಿವರು ನೀಡಿದ ಭರವಸೆ ಒಂದೇ ದಿನಕ್ಕೆ ಮರೆತರು ಎಂದು ತಾಳಿಕೋಟೆ ಹೇಳಿದರು.

ನವೆಂಬರ್ 10ರಂದು ಒಂದು ಸುತ್ತೋಲೆ ಹೊರಡಿಸಿದ್ದರು. ಅದನ್ನು ಕೇಳಿದರೆ ತಾತ್ಕಾಲಿಕವಾಗಿ ಕ್ರಮಗಳ ಬಗ್ಗೆ ಹೇಳ್ತೀರಿ. 3 ತಿಂಗಳು ಮುಂದುವರಿಸುವುದಾಗಿ ಹೇಳುತ್ತಾರೆ. ಶಿಕ್ಷಣ ಸಚಿವರ ಹೇಳಿಕೆಗಳಿಂದಲೇ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ, ನಾವು ಇಂದಿನಿಂದಲೇ ಹೋರಾಟ ಆರಂಭಿಸುತ್ತೇವೆ. ರಾಜ್ಯ ಸರ್ಕಾರಕ್ಕೆ ಒಟ್ಟು 15 ಬೇಡಿಕೆಗಳನ್ನು ಇಟ್ಟಿದ್ದೇವೆ. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಸತ್ಯಾಗ್ರಹ ಮಾಡುತ್ತೇವೆ. ನಾಳೆ ಶಿಕ್ಷಣ ಸಚಿವರಿಗೆ ನಮ್ಮ ಬೇಡಿಕೆಯನ್ನು ಇಡುತ್ತೇವೆ. ಇದಾದ ಬಳಿಕ ಎಲ್ಲ ಶೈಕ್ಷಣಿಕ ಚಟುವಟಿಕೆ ನಿಲ್ಲಿಸುತ್ತೇವೆ. ಆನ್​ಲೈನ್, ಆಫ್​ಲೈನ್​ ತರಗತಿಗಳನ್ನು ಸ್ಥಗಿತಗೊಳಿಸ್ತೇವೆ. ಎಲ್ಲ ಶೈಕ್ಷಣಿಕ ಚಟುವಟಿಕೆ ನಿಲ್ಲಿಸಲು ನಿರ್ಧಾರ ಮಾಡಿದ್ದೇವೆ. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮುಂದುವರಿಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ಎಚ್ಚರಿಕೆ ಕೊಟ್ಟರು.

‘ರುಪ್ಸಾ ಸಂಘದ ನೋಂದಣಿಗೆ ಯಾವುದೇ ಶುಲ್ಕ ವಿಧಿಸಿಲ್ಲ’ ಜೊತೆಗೆ, ರುಪ್ಸಾ ಸಂಘದ ನೋಂದಣಿಗೆ ಯಾವುದೇ ಶುಲ್ಕ ವಿಧಿಸಿಲ್ಲ. ಸಂಘಕ್ಕೆ ಸೇರಿದ ಸದಸ್ಯರ ಸಮಸ್ಯೆಗಳೇ ಶುಲ್ಕವಾಗಿರುತ್ತೆ ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಮಾತನಾಡಿದರು. ನಾವು ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ. ಶಾಲೆ ಉಳಿವಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಅನುದಾನಿತ ಶಾಲೆಗಳು ರಾಜ್ಯ ಸರ್ಕಾರವನ್ನ ಬೆಂಬಲಿಸುತ್ತಿವೆ. ಬೆಂಗಳೂರಿನಲ್ಲಿರುವುದು ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳು. ಇದಕ್ಕೆ ಹಳ್ಳಿಯ ಶಾಲೆಗಳು ಯಾವುದೇ ಬೆಂಬಲ ನೀಡಿಲ್ಲ ಎಂದು ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ಹೇಳಿದರು.

‘2 ಹಂತದಲ್ಲಿ ಪ್ರತಿಭಟನೆ ಮಾಡಲಾಗುವುದು’ ಇದಾದ ಬಳಿಕ, ಟಿವಿ9 ಜೊತೆ ಮಾತನಾಡಿದ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕೋಟೆ ನಾಳೆಯಿಂದ 2 ಹಂತದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು. ಮೊದಲು ಆನ್‌ಲೈನ್, ಆಫ್‌ಲೈನ್ ಕ್ಲಾಸ್ ನಿಲ್ಲಿಸುತ್ತೇವೆ. ಪ್ರಸಕ್ತ ಶೈಕ್ಷಣಿಕ ವರ್ಷದ ಎಲ್ಲ ಚಟುವಟಿಕೆ ನಿಲ್ಲಿಸುತ್ತೇವೆ. ನಂತರ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. 2ನೇ ಹಂತದಲ್ಲಿ ಜನವರಿ 6ರಂದು ಧರಣಿ ಮಾಡುತ್ತೇವೆ ಎಂದು ಹೇಳಿದರು.

‘ನಾಳೆ ನಾವು ಆನ್‌ಲೈನ್ ತರಗತಿಗಳನ್ನು ಬಂದ್ ಮಾಡಲ್ಲ’ ಇತ್ತ, ನಾಳೆ ನಾವು ಆನ್‌ಲೈನ್ ತರಗತಿಗಳನ್ನು ಬಂದ್ ಮಾಡಲ್ಲ ಎಂದು ಕ್ಯಾಮ್ಸ್ ಖಾಸಗಿ ಶಾಲೆಗಳ ಸಂಘದ‌ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಆನ್‌ಲೈನ್ ಕ್ಲಾಸ್ ಸ್ಥಗಿತ ಮಾಡಲ್ಲ. ಶಿಕ್ಷಣ ಇಲಾಖೆ ಭರವಸೆ ನೀಡಿರುವ ಹಿನ್ನೆಲೆ ಸ್ಥಗಿತ ಮಾಡಲ್ಲ ಎಂದು ಶಶಿಕುಮಾರ್ ಹೇಳಿದ್ದಾರೆ.

ಮನೆಯಲ್ಲಿದ್ದ ಚಿನ್ನವನ್ನೆಲ್ಲಾ ಮಾರಿ ಮಕ್ಕಳ ಫೀಸ್ ಕಟ್ಟಿದ್ದೇನೆ -ಸಿಡಿದೆದ್ದ ಪೋಷಕರ ರೋಷಾವೇಷದ ಮಾತು

ಕೊನೆಗೂ SSLC, ದ್ವಿತೀಯ PUC ತರಗತಿ ಆರಂಭಕ್ಕೆ ಮುಹೂರ್ತ ಫಿಕ್ಸ್​!

Published On - 1:22 pm, Sun, 20 December 20

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್