‘ಇಂದ್ರಜಿತ್ ತಂದೆ ಲಂಕೇಶ್​ಗೆ ಪೋಸ್ಟ್​ಮಾರ್ಟಂ ಮಾಡಿಸಿದ್ರಾ?’

ಮೈಸೂರು: ಇತ್ತೀಚೆಗೆ ಸಾವನಪ್ಪಿದ ಯುವ ನಟನ ಪೋಸ್ಟ್​ಮಾರ್ಟಂ ಏಕೆ ಮಾಡಿಸಿಲ್ಲ ಎಂಬ ನಟ ನಿರ್ದೇಶಕ ಇಂದ್ರಜಿತ್ ಹೇಳಿಕೆಗೆ, ಸರ್ಜಾ ಕುಟುಂಬದ ಆಪ್ತರಾದ ಶಿವಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಸ್ಟ್ರಿಯ ಬಗ್ಗೆ ಯಾರು ಯಾರೋ ಮಾತನಾಡುತ್ತಿದ್ದಾರೆ. ಆದರೆ ಇಂಡಸ್ಟ್ರಿಯಲ್ಲಿ ಯಾವುದೇ ರೀತಿಯ ತಪ್ಪುಗಳು ನಡೆದಿಲ್ಲ. ನಮ್ಮ ಇಂಡಸ್ಟ್ರಿ ಮುಂಬೈ ಮಾದರಿಯಲ್ಲಿ ಕಲುಷಿತಗೊಂಡಿಲ್ಲ ಎಂದು ಶಿವಾರ್ಜುನ್ ಹೇಳಿದ್ದಾರೆ. ಜೊತೆಗೆ 35 ವರ್ಷದಿಂದ ನಾನು ಚಿತ್ರರಂಗದಲ್ಲಿದ್ದೇನೆ. ನಾನು ಸಹ ನೈಟ್ ಪಾರ್ಟಿಗಳಿಗೆ ಹೋಗಿದ್ದೇನೆ. ಆದರೆ ಅಲ್ಲೆಲ್ಲೂ ಡ್ರಗ್ಸ್​ ಕಂಡುಬಂದಿಲ್ಲ. ಸರ್ಜಾ ಫ್ಯಾಮಿಲಿ ಬಗ್ಗೆ […]

‘ಇಂದ್ರಜಿತ್ ತಂದೆ ಲಂಕೇಶ್​ಗೆ ಪೋಸ್ಟ್​ಮಾರ್ಟಂ ಮಾಡಿಸಿದ್ರಾ?’

Updated on: Aug 29, 2020 | 5:00 PM

ಮೈಸೂರು: ಇತ್ತೀಚೆಗೆ ಸಾವನಪ್ಪಿದ ಯುವ ನಟನ ಪೋಸ್ಟ್​ಮಾರ್ಟಂ ಏಕೆ ಮಾಡಿಸಿಲ್ಲ ಎಂಬ ನಟ ನಿರ್ದೇಶಕ ಇಂದ್ರಜಿತ್ ಹೇಳಿಕೆಗೆ, ಸರ್ಜಾ ಕುಟುಂಬದ ಆಪ್ತರಾದ ಶಿವಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.

ಇಂಡಸ್ಟ್ರಿಯ ಬಗ್ಗೆ ಯಾರು ಯಾರೋ ಮಾತನಾಡುತ್ತಿದ್ದಾರೆ. ಆದರೆ ಇಂಡಸ್ಟ್ರಿಯಲ್ಲಿ ಯಾವುದೇ ರೀತಿಯ ತಪ್ಪುಗಳು ನಡೆದಿಲ್ಲ. ನಮ್ಮ ಇಂಡಸ್ಟ್ರಿ ಮುಂಬೈ ಮಾದರಿಯಲ್ಲಿ ಕಲುಷಿತಗೊಂಡಿಲ್ಲ ಎಂದು ಶಿವಾರ್ಜುನ್ ಹೇಳಿದ್ದಾರೆ. ಜೊತೆಗೆ 35 ವರ್ಷದಿಂದ ನಾನು ಚಿತ್ರರಂಗದಲ್ಲಿದ್ದೇನೆ. ನಾನು ಸಹ ನೈಟ್ ಪಾರ್ಟಿಗಳಿಗೆ ಹೋಗಿದ್ದೇನೆ. ಆದರೆ ಅಲ್ಲೆಲ್ಲೂ ಡ್ರಗ್ಸ್​ ಕಂಡುಬಂದಿಲ್ಲ.

ಸರ್ಜಾ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸುಮ್ಮನಿರುವುದಿಲ್ಲ. ಚಿರಂಜೀವಿ ಸರ್ಜಾ ಮೃತಪಟ್ಟು ಈಗಾಗಲೆ 3 ತಿಂಗಳಾಗಿದೆ. ಹಾಗಾಗಿ ಅವರ ಕುಟುಂಬವನ್ನು ನೆಮ್ಮದಿಯಾಗಿರಲು ಬಿಡಿ. ಸುಮ್ಮನೆ ಸಾವನಪ್ಪಿರುವ ಬಗ್ಗೆ ಏಕೆ ಮಾತನಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಏನಾದರೂ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದರೆ, ಅಪಘಾತದಲ್ಲಿ ಅನುಮಾನ ಕಂಡುಬಂದರೆ ಮೃತನ ಪೋಸ್ಟ್ ಮಾರ್ಟಂ ಮಾಡಲಾಗುತ್ತದೆ. ಆದರೆ ಹೃದಯಾಘಾತವಾಗಿ ಮೃತಪಟ್ಟರೆ ಯಾರು ಪೋಸ್ಟ್ ಮಾರ್ಟಂ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.

ಜೊತೆಗೆ ಚಿರಂಜೀವಿ ಸರ್ಜಾ ಅವರ ತಂದೆಯ ನಿರ್ಧಾರದಂತೆ, ಚಿರಂಜೀವಿ ಸರ್ಜಾ ಅವರ ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಲಾಗಿಲ್ಲ. ಪೋಸ್ಟ್ ಮಾರ್ಟಂ ವಿಚಾರದ ಬಗ್ಗೆ ಮಾತನಾಡಿರುವ ಇಂದ್ರಜಿತ್ ಲಂಕೇಶ್ ಅವರು, ಅವರ ತಂದೆ ಲಂಕೇಶ್ ಮೃತಪಟ್ಟಾಗ ಪೋಸ್ಟ್ ಮಾರ್ಟಂ ಮಾಡಿಸಿದ್ದರಾ? ಎಂದು ಶಿವಾರ್ಜುನ್ ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.

‘ಆ ಯುವ ನಟ ಸತ್ತಾಗ ಶವ ಪರೀಕ್ಷೆ ನಡೆಸಿದ್ದರೆ ಮಾದಕ ಜಾಲ ಬಟಾಬಯಲಿಗೆ ಬೀಳುತ್ತಿತ್ತು’