ಡ್ರಗ್ಸ್ ಬಗ್ಗೆ ಮೌನ ಮುರಿದಿರುವ ಇಂದ್ರಜಿತ್ಗೆ ಸರ್ಕಾರದಿಂದ ರಕ್ಷಣೆ ಇದ್ದೇ ಇರುತ್ತದೆ: ರವಿ
ಚಿಕ್ಕಮಗಳೂರು: ಡ್ರಗ್ಸ್ ಮಾಫಿಯಾ ವಿರುದ್ಧದ ಕಾರ್ಯಾಚರಣೆ ಈಗ ಸ್ಯಾಂಡಲ್ವುಡ್ ಬುಡವನ್ನೇ ಅಲುಗಾಡಿಸುತ್ತಿದ್ದು, ಈ ಜಾಲದ ಬಗ್ಗೆ ಸಚಿವ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಡ್ರಗ್ಸ್ ಮಾಫಿಯಾದಲ್ಲಿ ಕೆಲವು ದಿನಗಳಿಂದ ಸ್ಯಾಂಡಲ್ವುಡ್ನ ಸೈಡ್ ಆಕ್ಟರ್ಗಳು ಮಾತ್ರ ಸಿಕ್ಕಿಬೀಳುತ್ತಿದ್ದರು. ಈಗ ಮೇನ್ ಆಕ್ಟರ್ಗಳು ಸಿಕ್ಕಿಬೀಳುತ್ತಾರಾ? ಎಂಬುದನ್ನು ನೋಡಬೇಕಾಗಿದೆ ಎಂದು ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ. ಡ್ರಗ್ಸ್ ಬಗ್ಗೆ ಮೌನ ಮುರಿದಿರುವ ಇಂದ್ರಜಿತ್ಗೆ ಸರ್ಕಾರದ ರಕ್ಷಣೆ ಡ್ರಗ್ಸ್ ಜಾಲದ ಬಗ್ಗೆ ಮೌನ ಮುರಿದಿರುವ ಇಂದ್ರಜಿತ್ ಲಂಕೇಶ್ ಅವರಿಗೆ ಸರ್ಕಾರದಿಂದ […]

ಚಿಕ್ಕಮಗಳೂರು: ಡ್ರಗ್ಸ್ ಮಾಫಿಯಾ ವಿರುದ್ಧದ ಕಾರ್ಯಾಚರಣೆ ಈಗ ಸ್ಯಾಂಡಲ್ವುಡ್ ಬುಡವನ್ನೇ ಅಲುಗಾಡಿಸುತ್ತಿದ್ದು, ಈ ಜಾಲದ ಬಗ್ಗೆ ಸಚಿವ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಡ್ರಗ್ಸ್ ಮಾಫಿಯಾದಲ್ಲಿ ಕೆಲವು ದಿನಗಳಿಂದ ಸ್ಯಾಂಡಲ್ವುಡ್ನ ಸೈಡ್ ಆಕ್ಟರ್ಗಳು ಮಾತ್ರ ಸಿಕ್ಕಿಬೀಳುತ್ತಿದ್ದರು. ಈಗ ಮೇನ್ ಆಕ್ಟರ್ಗಳು ಸಿಕ್ಕಿಬೀಳುತ್ತಾರಾ? ಎಂಬುದನ್ನು ನೋಡಬೇಕಾಗಿದೆ ಎಂದು ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ.
ಡ್ರಗ್ಸ್ ಬಗ್ಗೆ ಮೌನ ಮುರಿದಿರುವ ಇಂದ್ರಜಿತ್ಗೆ ಸರ್ಕಾರದ ರಕ್ಷಣೆ
ಡ್ರಗ್ಸ್ ಜಾಲದ ಬಗ್ಗೆ ಮೌನ ಮುರಿದಿರುವ ಇಂದ್ರಜಿತ್ ಲಂಕೇಶ್ ಅವರಿಗೆ ಸರ್ಕಾರದಿಂದ ರಕ್ಷಣೆ ಇದ್ದೇ ಇರುತ್ತದೆ. ಇದು ವ್ಯವಸ್ಥಿತವಾದ ರಾಜ್ಯ ಹಾಗೂ ಅಂತರಾಷ್ಟ್ರೀಯ ಜಾಲವಾಗಿದೆ. ಹಾಗಾಗಿ ಇಂದ್ರಜಿತ್ ಲಂಕೇಶ್ ಅವರು ಯಾರಿಗೂ ಭಯಪಡದೆ ತನಿಖೆಗೆ ಸಹಕರಿಸಬೇಕೆಂದು ಕೇಳಿಕೊಂಡಿದ್ದಾರೆ.
ಈ ಜಾಲವನ್ನು ಬಗ್ಗುಬಡಿಯಲು ಹಾಗೂ ಮತ್ತಷ್ಟು ಜನ ಡ್ರಗ್ಸ್ ಚಟಕ್ಕೆ ಬಿದ್ದು ಬಲಿಯಾಗದಿರಲು ಇಂದ್ರಜಿತ್ ಲಂಕೇಶ್ ಅವರ ಸಹಕಾರ ಬೇಕಾಗಿದೆ. ಜೊತೆಗೆ ಈ ಪ್ರಕರಣದ ತನಿಖೆಯನ್ನು ಪೊಲೀಸರು ಗಂಭೀರವಾಗಿ ನಡೆಸುತ್ತಿದ್ದಾರೆ. ಇದರಿಂದಾಗಿ ಈ ರಾಕೆಟ್ನಲ್ಲಿ ಯಾರು ಯಾರಿದ್ದಾರೆ, ಹಾಗೂ ಈ ವ್ಯಾಪಾರ ಯಾರದ್ದು ಎಂಬುದು ತನಿಖೆ ನಂತರ ತಿಳಿಯಲಿದೆ ಎಂದಿದ್ದಾರೆ.
Published On - 3:53 pm, Sat, 29 August 20