ಕಬ್ಬಡಿಪಟು, ಇನ್ಸ್ಪೆಕ್ಟರ್ ಶಿವಣ್ಣ ಇಲಾಖೆಯಿಂದ ನಿವೃತ್ತಿ: ಇನ್ನು ಕಪ್ಪು ಕೋಟ್, ಖಾದಿ ಧಾರಿ
ನೆಲಮಂಗಲ: ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ LLB ವ್ಯಾಸಂಗ ಮಾಡಿದ ಶಿವಣ್ಣ, ರಾಷ್ಟ್ರಮಟ್ಟದ ಕಬ್ಬಡಿ ಪಟುವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ವೃತ್ತ ನಿರೀಕ್ಷಕರಾಗಿ ಪೊಲೀಸ್ ಇಲಾಖೆಯಿಂದ ಇನ್ನು ಒಂದು ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ನಿವೃತ್ತಿ ಬೆನ್ನಲ್ಲೆ ಮನೆಯಲ್ಲಿ ಕುಳಿತುಕೊಳ್ಳದೆ ವಕೀಲ ವೃತ್ತಿಯೊಂದಿಗೆ ರಾಜಕೀಯಕ್ಕೂ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತಾಳೆಕೊಪ್ಪ ಗ್ರಾಮದಲ್ಲಿ ಜನಿಸಿದ ಶಿವಣ್ಣ, ಸಿದ್ದಾರ್ಥ ಪಿಯು ಕಾಲೇಜಿನಲ್ಲಿ ಪಿಯು ವ್ಯಾಸಂಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಮುಗಿಸಿದ ನಂತರ, […]

ನೆಲಮಂಗಲ: ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ LLB ವ್ಯಾಸಂಗ ಮಾಡಿದ ಶಿವಣ್ಣ, ರಾಷ್ಟ್ರಮಟ್ಟದ ಕಬ್ಬಡಿ ಪಟುವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ವೃತ್ತ ನಿರೀಕ್ಷಕರಾಗಿ ಪೊಲೀಸ್ ಇಲಾಖೆಯಿಂದ ಇನ್ನು ಒಂದು ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ನಿವೃತ್ತಿ ಬೆನ್ನಲ್ಲೆ ಮನೆಯಲ್ಲಿ ಕುಳಿತುಕೊಳ್ಳದೆ ವಕೀಲ ವೃತ್ತಿಯೊಂದಿಗೆ ರಾಜಕೀಯಕ್ಕೂ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. 
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ತಾಳೆಕೊಪ್ಪ ಗ್ರಾಮದಲ್ಲಿ ಜನಿಸಿದ ಶಿವಣ್ಣ, ಸಿದ್ದಾರ್ಥ ಪಿಯು ಕಾಲೇಜಿನಲ್ಲಿ ಪಿಯು ವ್ಯಾಸಂಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಮುಗಿಸಿದ ನಂತರ, ವಿದ್ಯೋದಯ ಲಾ ಕಾಲೇಜಿನಲ್ಲಿ BA LLb ವ್ಯಾಸಂಗ ಮಾಡುತ್ತಾರೆ.
ಕಾಲೇಜು ದಿನಗಳಲ್ಲೇ ಸಂಘಟನಾ ಚತುರರಾಗಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಬಾಲ್ಯದಿಂದಲೂ ಕ್ರೀಡಾಸಕ್ತಿ ಹೊಂದಿದ್ದ ಶಿವಣ್ಣ ಕಬ್ಬಡಿ ಪಟುವಾಗಿ ಕಾಲೇಜು, ಅಂತರ್‌ಕಾಲೇಜು, ಯೂನಿವರ್ಸಿಟಿ, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟುವಾಗಿ ಎಲ್ಲಾ ಕಡೆ ಗೆದ್ದು ಬಂದು ಕೊನೆಗೆ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಹೊರಹೊಮ್ಮಿದವರು. ದೇಶದ ವಿವಿಧೆಡೆ ರಾಷ್ಟ್ರಮಟ್ಟದಲ್ಲಿ ಕಬ್ಬಡಿ ಕ್ರೀಡೆಯಲ್ಲಿ ಪಾಲ್ಗೊಂಡು ಎಲ್ಲೆಡೆ ಜಯಗಳಿಸಿ ಕಬ್ಬಡಿ ಆಟವನ್ನೇ ಜೀವನಾಡಿಯಾಗಿಸಿಕೊಂಡಿದ್ದರು.
2003ರಲ್ಲಿ PSI ಆಗಿ ಜಮಖಂಡಿಯಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿ, ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ಕಬ್ಬಡಿ ಆಡುತ್ತಾ ರಾಜ್ಯದ ಕೀರ್ತಿ ಎತ್ತಿ ಹಿಡಿದರು. ಪೊಲೀಸ್ ಇಲಾಖೆಯಲ್ಲಿ ಕಬ್ಬಡಿ ತಂಡವನ್ನ ಪ್ರಾರಂಭಿಸಲು ಇವರೇ ಪ್ರಮುಖರು ಎಂದರೆ ತಪ್ಪಾಗಲಾರದು.
2003ರಲ್ಲಿ ಜಮಖಂಡಿ, ಬಾದಾಮಿ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಗದಗ, ತುಮಕೂರು, ಕೋಲಾರ, ತುಮಕೂರು, ಗುಪ್ತಚರ, ಬೆಂಗಳೂರು ನೆಲಮಂಗಲ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿ ಇಲಾಖೆಯಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.
ನೆಲಮಂಗಲದ ರೌಡಿಸಂ, ಭೂ ಮಾಫಿಯ, ಕೈಗಾರಿಕಾ ಮಾಫಿಯಾ ಹೆದ್ದಾರಿ ದರೋಡೆ ಸೇರಿದಂತೆ ಕ್ರೈಂ ಲೋಕದಲ್ಲಿ ರೌಡಿಗಳ ಹೆಡೆಮುರಿ ಕಟ್ಟಿ ಭೂಗತ ಪಾತಕಿಗಳ ಎದೆಯಲ್ಲಿ ನಡುಕ ಹುಟ್ಟಿಸಿದವರು. ಇಂದು ಸಹ ಶಿವಣ್ಣ ಹೆಸರು ಕೇಳಿದರೆ ಇಡೀ ನೆಲಮಂಗಲದ ಭೂಗತ ಲೋಕ ಬೆಚ್ಚಿ ಬೀಳುತ್ತೆ.
ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿವಣ್ಣ ನಿವೃತ್ತಿ ಹೊಂದಿದರೂ ಸಹ ಮನೆಯಲ್ಲಿ ಕೂರುವುದಿಲ್ಲ, ಇಷ್ಟು ದಿನ ಸಾರ್ವಜನಿಕ ಸೇವೆ ಮಾಡಿಕೊಂಡು ಬಂದಿದ್ದೇನೆ. ಇನ್ನು ಮುಂದೆಯೂ ಸಹ ಸಾರ್ವಜನಿಕ ಸೇವೆ ಮಾಡಲು ವಕೀಲ ವೃತ್ತಿ ಆರಂಭಿಸಲಿದ್ದೇನೆ. ಇದರೊಟ್ಟಿಗೆ ರಾಜಕೀಯಕ್ಕೆ ಪ್ರವೇಶ ಪಡೆದು ರಾಜಕಾರಣದಲ್ಲಿ ನನ್ನ ಜೀವನದ ನಿವೃತ್ತಿ ಹೊಂದಲಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನ ವ್ಯಕ್ತಪಡಿಸಿದ್ದಾರೆ.




