ರಾಜ್ಯ ಶಿಕ್ಷಣ ರಂಗದಲ್ಲಿ ಇಂದು ಐತಿಹಾಸಿಕ ದಿನ, ಕಳಚಲಿದೆ ಕೊರೊನಾ ಗುಮ್ಮ! ಶಾಲೆಗಳಲ್ಲಿ ಪೂರ್ಣಾವಧಿಗೆ ಮಕ್ಕಳ ಹಾಜರಾತಿ

School reopening: ಇಂದಿನಿಂದ 6 ನೆಯ ತರಗತಿಯಿಂದ 10ನೆ ತರಗತಿಯ ಶಾಲಾ ಮಕ್ಕಳು ರಾಜ್ಯಾದ್ಯಂತ ಇಂದಿನಿಂದ ಶಾಲೆಗಳಿಗೆ ಪೂರ್ವಾವಧಿಗೆ ಹಾಜರಾಗಲಿದ್ದಾರೆ. ಇದರೊಂದಿಗೆ ಸುಮಾರು ಒಂದೆರಡು ವರ್ಷಗಳ ಕಾಲ ಕಾಡಿದ್ದ ಮಹಾಮಾರಿ ಕೊರೊನಾ ಗುಮ್ಮನ ಭೀತಿ ಕಳಚಲಿದೆ.

ರಾಜ್ಯ ಶಿಕ್ಷಣ ರಂಗದಲ್ಲಿ ಇಂದು ಐತಿಹಾಸಿಕ ದಿನ, ಕಳಚಲಿದೆ ಕೊರೊನಾ ಗುಮ್ಮ! ಶಾಲೆಗಳಲ್ಲಿ ಪೂರ್ಣಾವಧಿಗೆ ಮಕ್ಕಳ ಹಾಜರಾತಿ
ಪ್ರಾತಿನಿಧಿಕ ಚಿತ್ರ
Edited By: ಸಾಧು ಶ್ರೀನಾಥ್​

Updated on: Oct 18, 2021 | 8:41 AM

ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಇಂದು ಚರಿತ್ರಾರ್ಹ ದಿನವಾಗಲಿದೆ. ಶಾಲಾ ಮಕ್ಕಳು ಸುಮಾರು ಒಂದೆರಡು ವರ್ಷಗಳ ಸುದೀರ್ಘ, ಅನಪೇಕ್ಷಿತ, ಅನಿವಾರ್ಯ, ಆತಂಕಮಯ ರಜೆ ಬಳಿಕ ಇಂದು ಪೂರ್ಣ ಪ್ರಮಾಣದಲ್ಲಿ ಮೊದಲಿನಂತೆ, ಸ್ವಚ್ಛಂದವಾಗಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೌದು ಇಂದಿನಿಂದ 6 ನೆಯ ತರಗತಿಯಿಂದ 10ನೆ ತರಗತಿಯ ಶಾಲಾ ಮಕ್ಕಳು ರಾಜ್ಯಾದ್ಯಂತ ಇಂದಿನಿಂದ ಶಾಲೆಗಳಿಗೆ ಪೂರ್ವಾವಧಿಗೆ ಹಾಜರಾಗಲಿದ್ದಾರೆ. ಇದರೊಂದಿಗೆ ಸುಮಾರು ಒಂದೆರಡು ವರ್ಷಗಳ ಕಾಲ ಕಾಡಿದ್ದ ಮಹಾಮಾರಿ ಕೊರೊನಾ ಗುಮ್ಮನ ಭೀತಿ ಕಳಚಲಿದೆ.

1ರಿಂದ 5ನೇ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಪ್ಲ್ಯಾನ್:
ಈ ಮಧ್ಯೆ, 1ರಿಂದ 5ನೇ ತರಗತಿ ಶಾಲೆ ಆರಂಭ ಬಗ್ಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಜತೆ ಸಿಎಂ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಶಾಲೆ ಆರಂಭ ದಿನಾಂಕ ಹೊರಬೀಳುವ ಸಾಧ್ಯತೆಯಿದೆ.

ವಿಶ್ವಸನೀಯ ಮೂಲಗಳ ಪ್ರಕಾರ ಅಕ್ಟೋಬರ್ 21ರಿಂದ ಕಿರಿಯ ಪ್ರಾಥಮಿಕ ಶಾಲೆ ಆರಂಭಿಸಲು ಚೀಮತನೆ ನಡದಿದ್ದು, ರಾಜ್ಯ ಶಿಕ್ಷಣ ಇಲಾಖೆ ಶಾಲೆ ಆರಂಭಿಸಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ಇನ್ನು ಅಕ್ಟೋಬರ್ 21ರಿಂದ ಶಾಲೆಗಳಲ್ಲಿ ಬಿಸಿಯೂಟ ವಿತರಣೆಯೂ ಆರಂಭವಾಗಲಿದೆ ಎಂದು ಶಿ್ಷಣ ಸಚಿವ ಬಿಸಿ ನಾಗೇಶ್​ ಈಗಾಗಲೇ ಪ್ರಕಟಿಸಿದ್ದಾರೆ. ಹೀಗಾಗಿ ಅ.21ರಿಂದಲೇ ಶಾಲೆ ಆರಂಭ ಮಾಡಲು ಪ್ಲ್ಯಾನ್ ಮಾಡಲಾಗಿದೆ.

Also Read:
1ರಿಂದ 8ನೇ ತರಗತಿಯವರೆಗೆ ಶಾಲೆ ಆರಂಭಿಸಬೇಕು; ರಾಜ್ಯ ಸರ್ಕಾರಕ್ಕೆ ಖಾಸಗಿ ಶಾಲಾ ಒಕ್ಕೂಟದಿಂದ ಒತ್ತಾಯ

(Schools reopening in karnataka from today october 18)

Published On - 7:49 am, Mon, 18 October 21

TV9 Web

TV9 Kannada

Read More
Loading...
Unable to load recommendations.
Follow Us