ಹಿರಿಯ ನಾಗರಿಕರು, ದಿವ್ಯಾಂಗರಿಗೆ ಮನೆ ಬಳಿಯೇ ಲಸಿಕೆ; ಕೊವಿಡ್ ಲ್ಯಾಬ್ ಗುತ್ತಿಗೆ ನೌಕರರಿಗೆ ಭತ್ಯೆ ಘೋಷಣೆ

| Updated By: ganapathi bhat

Updated on: Jun 02, 2021 | 9:45 PM

ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 922 ಗುತ್ತಿಗೆ ನೌಕರರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಮಾಸಿಕ ಅಪಾಯ ಭತ್ಯೆ ಘೋಷಣೆ ಮಾಡಲಾಗಿದೆ.

ಹಿರಿಯ ನಾಗರಿಕರು, ದಿವ್ಯಾಂಗರಿಗೆ ಮನೆ ಬಳಿಯೇ ಲಸಿಕೆ; ಕೊವಿಡ್ ಲ್ಯಾಬ್ ಗುತ್ತಿಗೆ ನೌಕರರಿಗೆ ಭತ್ಯೆ ಘೋಷಣೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಹಿರಿಯ ನಾಗರಿಕರು, ದಿವ್ಯಾಂಗರಿಗೆ ಮನೆ ಬಳಿಯೇ ಲಸಿಕೆ ನೀಡಬೇಕು. ಹೀಗಾಗಿ, ಮನೆ ಸಮೀಪ ಲಸಿಕಾ ಕೇಂದ್ರ ತೆರೆಯಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಶಾಲಾ ಕಾಲೇಜು, ಪಂಚಾಯಿತಿ ಕಟ್ಟಡದಲ್ಲಿ​ ಲಸಿಕೆ ನೀಡಿಕೆಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.

ಕೊವಿಡ್ ಲ್ಯಾಬ್ ಗುತ್ತಿಗೆ ನೌಕರರಿಗೆ ಭತ್ಯೆ ಘೋಷಣೆ
ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 922 ಗುತ್ತಿಗೆ ನೌಕರರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಮಾಸಿಕ ಅಪಾಯ ಭತ್ಯೆ ಘೋಷಣೆ ಮಾಡಲಾಗಿದೆ. ಸಂಶೋಧನಾ ವಿಜ್ಞಾನಿ, ಸಂಶೋಧನಾ ಸಹಾಯಕರು ಮತ್ತಿತರರಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾಸಿಕ ಅಪಾಯ ಭತ್ಯೆ ಘೋಷಿಸಿದೆ. ಲ್ಯಾಬ್ ತಂತ್ರಜ್ಞ, ಡೇಟಾ ಎಂಟ್ರಿ ಆಪರೇಟರ್​ಗೆ 5,000 ರೂಪಾಯಿ ಮತ್ತು ದಾದಿಯರಿಗೆ 8,000 ರೂಪಾಯಿ, ಡಿ ಗ್ರೂಪ್ ನೌಕರರಿಗೆ 10,000 ರೂಪಾಯಿ ಭತ್ಯೆ ಘೋಷಣೆ ಮಾಡಲಾಗಿದೆ.

ಹೊಸದಾಗಿ ನೇಮಕಗೊಂಡ ಆರೋಗ್ಯ ಕಾರ್ಯಕರ್ತರಿಗೆ ಸ್ವಾಗತ
ಆರೋಗ್ಯ ಇಲಾಖೆ ಇತಿಹಾಸದಲ್ಲಿ ಮೊದಲ ಬಾರಿಗೆ ಸಚಿವ ಡಾ. ಕೆ. ಸುಧಾಕರ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಹೊಸದಾಗಿ ನೇಮಕಗೊಂಡಿರುವ 715 ಹಿರಿಯ ತಜ್ಞರು ಮತ್ತು 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಇಲಾಖೆಗೆ ಸ್ವಾಗತಿಸಿದ್ದಾರೆ. ವರ್ಚುವಲ್​ ಸಭೆಯಲ್ಲಿ ಸುಧಾಕರ್ ಭಾಷಣ ಮಾಡಿದ್ದಾರೆ.

ರಾಜ್ಯಾದ್ಯಂತ ಖಾಲಿ ಇರುವ ಹುದ್ದೆಗಳಿಗೆ ನೇಮಕಗೊಳ್ಳುತ್ತಿರುವ ತಜ್ಞರು, ವೈದ್ಯರಲ್ಲದೆ ಇಲಾಖೆಯ ಹಿರಿಯ ಅಧಿಕಾರಿಗಳು, ಎಲ್ಲಾ ಜಿಲ್ಲೆಗಳ ಡಿಎಚ್​ಒ, ಟಿಎಚ್​ಒಗಳು ವರ್ಚುವಲ್ ವೇದಿಕೆ ಮೂಲಕ ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಭಾಷಣದಲ್ಲಿ ಹೊಸದಾಗಿ ನೇಮಕಗೊಂಡ ಎಲ್ಲರಿಗೂ ವೃತ್ತಿ ಘನತೆ ಎತ್ತಿ ಹಿಡಿಯುವಂತೆ ಮಾನವೀಯ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಸಚಿವ ಸುಧಾಕರ್ ಕರೆ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿತನ ಶವ ನೀಡಲು 9 ಲಕ್ಷ ನೀಡುವಂತೆ ಒತ್ತಾಯ; ಸರ್ಕಾರದ ಆದೇಶಕ್ಕೆ ಖಾಸಗಿ ಆಸ್ಪತ್ರೆ ಡೋಂಟ್‌ಕೇರ್

ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಿಸಲು ಹೆಚ್ಚಿನ ಗಮನ; ಲಾಕ್​ಡೌನ್ ಮುಂದುವರಿಕೆ ಬಗ್ಗೆ ಜೂನ್ 5ರಂದು ನಿರ್ಧಾರ

Published On - 9:41 pm, Wed, 2 June 21