Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಿಸಲು ಹೆಚ್ಚಿನ ಗಮನ; ಲಾಕ್​ಡೌನ್ ಮುಂದುವರಿಕೆ ಬಗ್ಗೆ ಜೂನ್ 5ರಂದು ನಿರ್ಧಾರ

ಬ್ಲ್ಯಾಕ್ ಫಂಗಸ್​ನಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ. ಬ್ಲ್ಯಾಕ್ ಫಂಗಸ್​ನಿಂದ ಸಾವು ನಿಯಂತ್ರಿಸಲು ಕ್ರಮ ವಹಿಸಿ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ವಹಿಸಬೇಕು.

ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಿಸಲು ಹೆಚ್ಚಿನ ಗಮನ; ಲಾಕ್​ಡೌನ್ ಮುಂದುವರಿಕೆ ಬಗ್ಗೆ ಜೂನ್ 5ರಂದು ನಿರ್ಧಾರ
ಕರ್ನಾಟಕ ಲಾಕ್​ಡೌನ್​
Follow us
TV9 Web
| Updated By: ganapathi bhat

Updated on:Jun 02, 2021 | 8:34 PM

ಬೆಂಗಳೂರು: ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಕೊವಿಡ್ ಉಸ್ತುವಾರಿಗಳು, ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಜೂನ್ 2) ಸೂಚನೆ ನೀಡಿದರು. ಆಕ್ಸಿಜನ್​ ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆ ಬೇಡಿಕೆ ಇದೆ ಗಮನಿಸಿ. ಜಿಲ್ಲಾವಾರು ಆಕ್ಸಿಜನ್ ಹಂಚಿಕೆ ಬಗ್ಗೆ ನಿಗಾ ವಹಿಸಬೇಕು ಎಂದು ತಿಳಿಸಿದರು.

ಬ್ಲ್ಯಾಕ್ ಫಂಗಸ್​ನಿಂದ ಸಾವಿನ ಪ್ರಮಾಣ ಹೆಚ್ಚಾಗಿದೆ. ಬ್ಲ್ಯಾಕ್ ಫಂಗಸ್​ನಿಂದ ಸಾವು ನಿಯಂತ್ರಿಸಲು ಕ್ರಮ ವಹಿಸಿ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕ್ರಮ ವಹಿಸಬೇಕು. ಕೊರೊನಾ ಸೋಂಕು ನಿಯಂತ್ರಿಸಲು ಸೂಕ್ತ ಕ್ರಮ ವಹಿಸಿ ಎಂದು ಕೊವಿಡ್ ಉಸ್ತುವಾರಿಗಳು, ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ ನೀಡಿದರು. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಿತು.

ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಜೂನ್ 2) ಕೊವಿಡ್ 3ನೇ ಅಲೆಗೆ ಸಂಬಂಧಿಸಿದ ಪೂರ್ವ ಸಿದ್ಧತೆ ಕುರಿತಂತೆ ರಚಿಸಲಾಗಿರುವ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಕಾರ್ಯಪಡೆಯೊಂದಿಗೆ ಸಭೆ ನಡೆಸಿ, ಚರ್ಚಿಸಿದರು. ಕೊವಿಡ್ 3ನೇ ಅಲೆ ತಡೆಗಟ್ಟಲು ಸಿದ್ಧತೆಗಳು ಇತ್ಯಾದಿಗಳ ಬಗ್ಗೆ ಮಾತುಕತೆ ನಡೆಸಿದರು.

ಕೊವಿಡ್ 3ನೇ ಅಲೆಯನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಮುಂಜಾಗರೂಕತಾ ಕ್ರಮಗಳು, ಕಲ್ಪಿಸಬೇಕಾದ ಮೂಲಸೌಕರ್ಯ ಹಾಗೂ ಚಿಕಿತ್ಸಾ ಸೌಲಭ್ಯಗಳು, ಅಗತ್ಯವಿರುವ ಮಾನವ ಸಂಪನ್ಮೂಲ, ಔಷಧಗಳು ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು. ಒಂದು ವಾರದೊಳಗೆ ಕಾರ್ಯಪಡೆಯು ತನ್ನ ವರದಿಯನ್ನು ಸಲ್ಲಿಸಲಾಗುವುದು ಎಂದು ಡಾ. ದೇವಿ ಪ್ರಸಾದ್ ಶೆಟ್ಟಿ ತಿಳಿಸಿದರು.

ಲಾಕ್​ಡೌನ್ ಬಗ್ಗೆ ಶನಿವಾರ ನಿರ್ಧಾರ ಶನಿವಾರ ಮತ್ತೊಮ್ಮೆ ಸಭೆ ನಡೆಸಿ ಲಾಕ್​ಡೌನ್ ಮುಂದುವರಿಕೆ ಅಥವಾ ಅನ್​ಲಾಕ್ ಪ್ರಕ್ರಿಯೆ ಬಗ್ಗೆ​ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. ಜೂನ್ 5ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಲಾಕ್​ಡೌನ್ ವಿಸ್ತರಿಸಬೇಕಾ ಬೇಡವಾ ಎಂದು ನಿರ್ಧರಿಸಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ. ಇಂದಿನ ಸಭೆಯಲ್ಲಿ ಚರ್ಚೆ ನಡೆಸಿರುವ ಸಿಎಂ ಬಿಎಸ್​ವೈ ಜೂನ್ 5ರಂದು ಅಂತಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವಾರ ಲಾಕ್​ಡೌನ್ ಮುಂದುವರಿಕೆಗೆ ನಿರ್ಧಾರ? ಕೊವಿಡ್ ಉಸ್ತುವಾರಿಗಳು, ಅಧಿಕಾರಿಗಳು ಭಾಗವಹಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಒಂದು ವಾರ ಲಾಕ್​ಡೌನ್ ಮುಂದುವರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ನಾಳೆಯೇ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದೂ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: Karnataka Lockdown: ಆರ್ಥಿಕ ಚಟುವಟಿಕೆ ಚುರುಕಿಗೆ ರಾಜ್ಯ ಸರ್ಕಾರ ಪ್ಲ್ಯಾನ್; ಲಾಕ್​ಡೌನ್ ನಿಯಮಾವಳಿ ಕೊಂಚ ಸಡಿಲಿಕೆ

ಕೊರೊನಾ ಸಂಕಷ್ಟ: ತಂದೆ ಅಂತ್ಯಸಂಸ್ಕಾರದ ವೇಳೆ ಮಗನೂ ಸಾವು; ಮತ್ತೊಂದೆಡೆ ತಂದೆ-ತಾಯಿ ಕಳೆದುಕೊಂಡ 8 ಮಕ್ಕಳು

Published On - 8:27 pm, Wed, 2 June 21

ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
ಅರಣ್ಯಪ್ರದೇಶದಲ್ಲಿ ಬತ್ತಿವೆ ಕೆರೆಕುಂಟೆ, ಪ್ರಾಣಿಗಳಿಗೆ ಸಿಗುತ್ತಿಲ್ಲ ನೀರು
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
6 ತಿಂಗಳ ಮಗುವನ್ನೆತ್ತಿಕೊಂಡು ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತ
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
‘ಮಕ್ಕಳು ಬೆಳೆದ್ವಾ?’; ಕುರಿ ಪ್ರತಾಪ್ ಪ್ರಶ್ನಗೆ ಡಾಲಿ ಧನಂಜಯ್ ಶಾಕ್
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಬೆಂಗಳೂರು ಹೊರವಲಯಗಳಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ
Daily Devotional: ಉದ್ಯೋಗ ಸಿಗುತ್ತಿಲ್ಲವಾ? ಇಲ್ಲಿದೆ ಪರಿಹಾರ ಮಂತ್ರ
Daily Horoscope: ಈ ರಾಶಿಯವರಿಗೆ ಕೆಲಸದಲ್ಲಿ ಜಯ ಮತ್ತು ಧನಯೋಗ
Daily Horoscope: ಈ ರಾಶಿಯವರಿಗೆ ಕೆಲಸದಲ್ಲಿ ಜಯ ಮತ್ತು ಧನಯೋಗ