Karnataka Lockdown: ಆರ್ಥಿಕ ಚಟುವಟಿಕೆ ಚುರುಕಿಗೆ ರಾಜ್ಯ ಸರ್ಕಾರ ಪ್ಲ್ಯಾನ್; ಲಾಕ್‌ಡೌನ್ ನಿಯಮಾವಳಿ ಕೊಂಚ ಸಡಿಲಿಕೆ
ರಫ್ತು ಆಧಾರಿತ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿರುವ ಸರ್ಕಾರ ಕೊರೊನಾ ಸೋಂಕು ಹರಡದಂತೆ ನಿಯಮವನ್ನೂ ಸೂಚಿಸಿದೆ. ಅದರಂತೆ, ಶೇಕಡಾ 10ರಷ್ಟು ಕಾರ್ಮಿಕರಿಗೆ ವಾರದಲ್ಲಿ 2 ಬಾರಿ ಕೊರೊನಾ ಟೆಸ್ಟ್ ಮಾಡಬೇಕು.
ಬೆಂಗಳೂರು: ಆರ್ಥಿಕ ಚಟುವಟಿಕೆ ಚುರುಕಿಗೆ ಕರ್ನಾಟಕ ಸರ್ಕಾರ ಹೊಸ ಪ್ಲ್ಯಾನ್ ಹಾಕಿಕೊಂಡಿದೆ. ಅದರ ಅನ್ವಯ ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೊಂಚ ಸಡಿಲಿಕೆ ಮಾಡಿಕೊಳ್ಳಲಾಗಿದೆ. ರಫ್ತು ಆಧಾರಿತ ಕೈಗಾರಿಕೆಗಳಿಗೆ ಸರ್ಕಾರದಿಂದ ಅವಕಾಶ ಲಭ್ಯವಾಗಿದೆ. ಶೇಕಡಾ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಣೆ ಮಾಡಬಹುದು ಎಂದು ಸರ್ಕಾರ ಆದೇಶ ಹೊರಡಿಸಿದೆ. ನಾಳೆಯಿಂದಲೇ ಈ ನಿಯಮ ಅನ್ವಯ ಆಗುವಂತೆ ಸರ್ಕಾರ ಆದೇಶ ನೀಡಿದೆ.
ರಫ್ತು ಆಧಾರಿತ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿರುವ ಸರ್ಕಾರ ಕೊರೊನಾ ಸೋಂಕು ಹರಡದಂತೆ ನಿಯಮವನ್ನೂ ಸೂಚಿಸಿದೆ. ಅದರಂತೆ, ಶೇಕಡಾ 10ರಷ್ಟು ಕಾರ್ಮಿಕರಿಗೆ ವಾರದಲ್ಲಿ 2 ಬಾರಿ ಕೊರೊನಾ ಟೆಸ್ಟ್ ಮಾಡಬೇಕು. ಸಾವಿರಕ್ಕೂ ಹೆಚ್ಚು ಕಾರ್ಮಿಕರಿರುವ ಕೈಗಾರಿಕೆಗಳಲ್ಲಿ ಕೊವಿಡ್ ಟೆಸ್ಟ್ ಮಾಡಬೇಕು. ವಾರದಲ್ಲಿ 2 ಬಾರಿ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು ಎಂದು ತಿಳಿಸಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್ ನಿಯಮ ಸ್ವಲ್ಪ ಸಡಿಲಿಕೆ ಆಗಲಿದೆ ಎಂಬ ಬಗ್ಗೆ ಈ ಮೊದಲೇ ಅಂದಾಜಿಸಲಾಗಿತ್ತು. ರಫ್ತು ಆಧಾರಿತ ಕೈಗಾರಿಕೆಗಳಿಗೆ ಪೂರ್ಣ ವಿನಾಯಿತಿ ಸಿಗುವ ಸಾಧ್ಯತೆ ಹೇಳಲಾಗಿತ್ತು. ಉತ್ಪಾದಕ ವಲಯದ ಕಬ್ಬಿಣ, ಉಕ್ಕು ಆಧಾರಿತ ಕೈಗಾರಿಕೆಗಳಿಗೆ ಪೂರ್ಣ ವಿನಾಯಿತಿ, ಎಲೆಕ್ಟ್ರಾನಿಕ್ ವಲಯದ ಕಂಪನಿಗಳಿಗೆ ಅವಕಾಶ ಸಾಧ್ಯತೆ ಎನ್ನಲಾಗಿತ್ತು.
ಲಾಕ್‌ಡೌನ್ ಬಗ್ಗೆ ಶನಿವಾರ ನಿರ್ಧಾರ ಶನಿವಾರ ಮತ್ತೊಮ್ಮೆ ಸಭೆ ನಡೆಸಿ ಲಾಕ್‌ಡೌನ್ ಮುಂದುವರಿಕೆ ಅಥವಾ ಅನ್ಲಾಕ್ ಪ್ರಕ್ರಿಯೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. ಜೂನ್ 5ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಲಾಕ್‌ಡೌನ್ ವಿಸ್ತರಿಸಬೇಕಾ ಬೇಡವಾ ಎಂದು ನಿರ್ಧರಿಸಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ. ಇಂದಿನ ಸಭೆಯಲ್ಲಿ ಚರ್ಚೆ ನಡೆಸಿರುವ ಸಿಎಂ ಬಿಎಸ್ವೈ ಜೂನ್ 5ರಂದು ಅಂತಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಒಂದು ವಾರ ಲಾಕ್‌ಡೌನ್ ಮುಂದುವರಿಕೆಗೆ ನಿರ್ಧಾರ? ಕೊವಿಡ್ ಉಸ್ತುವಾರಿಗಳು, ಅಧಿಕಾರಿಗಳು ಭಾಗವಹಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಒಂದು ವಾರ ಲಾಕ್‌ಡೌನ್ ಮುಂದುವರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ನಾಳೆಯೇ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದೂ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಚಾಮರಾಜನಗರ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟದ ಕಾರಣ ಶಂಕೆ
Published On - 7:56 pm, Wed, 2 June 21