ರಾಮ ಆದರ್ಶ ವ್ಯಕ್ತಿ; ಆದರೆ, ಪ್ರಧಾನಿ ಮೋದಿ ರಾಮನಲ್ಲ.. ಕೃಷ್ಣ -S.L.ಭೈರಪ್ಪ

ಆತ ಹಿಂಸೆಯ ಮಾರ್ಗವನ್ನು ಅನುಸರಿಸಿ ಕೆಟ್ಟದಾಗಿ ಮಾತನಾಡುವವರನ್ನ ಕೊಲ್ಲಬಹುದಿತ್ತು. ಆದರೆ, ರಾಮ ಆ ರೀತಿ‌ ಮಾಡದೆ ಆದರ್ಶವಾಗಿ ನಡೆದುಕೊಂಡ‌. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಲು ಇದೇ ರೀತಿ ಜನಾಭಿಪ್ರಾಯ ರೂಪಗೊಳಿಸಿದ್ರು. ಆದರೆ‌, ಪ್ರಧಾನಿ ಮೋದಿ ರಾಮನಲ್ಲ, ಕೃಷ್ಣ ಎಂದು ಕಾರ್ಯಕ್ರಮದಲ್ಲಿ ಸಾಹಿತಿ S.L.ಭೈರಪ್ಪ ಹೇಳಿದರು.

ರಾಮ ಆದರ್ಶ ವ್ಯಕ್ತಿ; ಆದರೆ, ಪ್ರಧಾನಿ ಮೋದಿ ರಾಮನಲ್ಲ.. ಕೃಷ್ಣ -S.L.ಭೈರಪ್ಪ
ಹಿರಿಯ ಸಾಹಿತಿ S.L.ಭೈರಪ್ಪ (ಎಡ); ಪ್ರಧಾನಿ ಮೋದಿ(ಬಲ)
Follow us
KUSHAL V
|

Updated on:Jan 03, 2021 | 8:10 PM

ಮೈಸೂರು: ರಾಮಮಂದಿರ ನಿರ್ಮಾಣಕ್ಕೆ‌ ನಿಧಿ ಸಮರ್ಪಣಾ ಅಭಿಯಾನವೊಂದನ್ನು ನಗರದಲ್ಲಿ ಇಂದು ಆಯೋಜಿಸಲಾಗಿತ್ತು. RSS ಕಚೇರಿ ಮಾಧವ ಕೃಪದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿ S.L.ಭೈರಪ್ಪ ಅಧ್ಯಕ್ಷತೆ ವಹಿಸಿದರು.

ಈ ವೇಳೆ, ಮಾತನಾಡಿದ ಹಿರಿಯ ಸಾಹಿತಿ ನಿಧಿ ಸಂಗ್ರಹ ಸಭೆಗೆ ಯಾಕೆ ಹೋಗ್ತಿರಾ ಅಂತಾ ಕೆಲವರು ನನ್ನನ್ನು ಕೇಳಿದ್ರು. ಉತ್ತರಕಾಂಡ ಬರೆದವರು ನೀವು. ಇದರಿಂದ ಯಾಕೆ ಹೋಗ್ತಿರಿ ಅಂತಾ ಕೇಳಿದ್ರು. ಆದರೆ, ರಾಮ ಆದರ್ಶ ವ್ಯಕ್ತಿ. ಈ ಕಾರಣಕ್ಕೆ ನಾನು ಬಂದೆ ಎಂದು ಕಾರ್ಯಕ್ರಮದಲ್ಲಿ ಸಾಹಿತಿ ಎಸ್ ಎಲ್.ಬೈರಪ್ಪ ಹೇಳಿದರು.

ರಾಮನ ಬಗ್ಗೆ ಆಗಲೇ ಜನಾಭಿಪ್ರಾಯ ಸಂಗ್ರಹ ಮಾಡಲು ಶುರು ಮಾಡಿದ್ದರು. ರಾಮ ವನವಾಸ ಮುಗಿಸಿ ಬರುವಷ್ಟರಲ್ಲಿ ಆತನ ರಾಜ್ಯದ ಪರಿಸ್ಥಿತಿ ಹದಗೆಟ್ಟಿತ್ತು. ಹಾಗಾಗಿ, ತೆರಿಗೆ ಸಂಗ್ರಹ ಮಾಡಿ ತನ್ನ ರಾಜ್ಯ ಕಟ್ಟಲು ರಾಮ ಮುಂದಾದ. ಇದಕ್ಕೆ ಒಪ್ಪದ ಕೆಲವರು ಅವನ ವಿರುದ್ಧ ಅಪಪ್ರಚಾರ ಮಾಡಲು ಮುಂದಾದರು. ಆದರೆ ರಾಮನ ವಿರುದ್ಧ ಮಾತನಾಡಲು ಏನೂ ಇಲ್ಲದ ಕಾರಣ ಸೀತೆಯ ವಿಚಾರವನ್ನು ಮಧ್ಯಕ್ಕೆ ತಂದರು ಎಂದು ಭೈರಪ್ಪ ಹೇಳಿದರು.

ಸೀತೆ ಸಿಂಹಾಸನದ ಮೇಲೆ ಕೂರಲು ಅರ್ಹಳಲ್ಲ. ಅವಳು ರಾವಣನ ವಶದಲ್ಲಿದ್ದಳು ಎಂದು ಮಾತನಾಡಿದರು. ಇದರಿಂದ ರಾಮ ತನ್ನ ಪ್ರಜೆಗಳಿಗೆ ಅರ್ಥಮಾಡಿಸಲು ಅಹಿಂಸೆಯ ಮಾರ್ಗದ ಅನುಗುಣವಾಗಿ ಸೀತೆಯನ್ನು ತ್ಯಜಿಸಿದ ಎಂದು ಹೇಳಿದರು.

ಆತ ಹಿಂಸೆಯ ಮಾರ್ಗವನ್ನು ಅನುಸರಿಸಿ ಕೆಟ್ಟದಾಗಿ ಮಾತನಾಡುವವರನ್ನ ಕೊಲ್ಲಬಹುದಿತ್ತು. ಆದರೆ, ರಾಮ ಆ ರೀತಿ‌ ಮಾಡದೆ ಆದರ್ಶವಾಗಿ ನಡೆದುಕೊಂಡ‌. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಲು ಇದೇ ರೀತಿ ಜನಾಭಿಪ್ರಾಯ ರೂಪಗೊಳಿಸಿದ್ರು. ಆದರೆ‌, ಪ್ರಧಾನಿ ಮೋದಿ ರಾಮನಲ್ಲ, ಕೃಷ್ಣ ಎಂದು ಕಾರ್ಯಕ್ರಮದಲ್ಲಿ ಸಾಹಿತಿ S.L.ಭೈರಪ್ಪ ಹೇಳಿದರು.

ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಧರಣಿ ಬಗ್ಗೆ ಮಾತನಾಡಿದ ಸಾಹಿತಿ ದೆಹಲಿಯಲ್ಲಿ ಧರಣಿ ಮಾಡ್ತಿರುವವರು ಪಂಜಾಬಿಗಳು ಮಾತ್ರ. ಅವರು ಇಡೀ ದೇಶದ ರೈತರನ್ನು ಪ್ರತಿನಿಧಿಸಿದಂತೆ ಆಗಲ್ಲ. ಅಷ್ಟಕ್ಕೂ ಕೃಷಿ ಮಸೂದೆಯಲ್ಲಿ ಅನುಕೂಲಕರ‌ ಅಂಶಗಳಿವೆ. ಈ ಹೋರಾಟದ ಹಿಂದೆ ಕಾಂಗ್ರೆಸ್, ಕಮ್ಯೂನಿಸ್ಟರ‌ ಕೈವಾಡವಿದೆ. ಪ್ರಧಾನಿ‌ ಮೋದಿ ಜನಪ್ರಿಯತೆ ಅವರಿಗೆ ಸಹಿಸಲು ಆಗುತ್ತಿಲ್ಲ. ಹೊಸ ಕೃಷಿ ಮಸೂದೆ ರೈತರಿಗೆ ಮಾರಕವಲ್ಲ ಎಂದು S.L.ಭೈರಪ್ಪ ಹೇಳಿದರು.

ಇತರೆ ಧರ್ಮದ ದೇವರುಗಳು ಕೋಪಿಷ್ಟರು.. ಆದರೆ ಹಿಂದೂ ಧರ್ಮದಲ್ಲಿ ಈ ರೀತಿ ಇಲ್ಲ -S.L.ಭೈರಪ್ಪ

Published On - 7:36 pm, Sun, 3 January 21