ಪ್ರತ್ಯೇಕ ಘಟನೆ: ಡೆಂಗ್ಯೂಗೆ ವಿದ್ಯಾರ್ಥಿನಿ ಸಾವು, ಹಣ್ಣಿನ ಮಾರುಕಟ್ಟೆಗೆ ಹೋಗಿದ್ದ ಯುವಕ ಶವವಾಗಿ ಪತ್ತೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ಡೆಂಗ್ಯೂಗೆ ಎಸ್​​ಎಸ್​​ಎಲ್​ಸಿ ವಿದ್ಯಾರ್ಥಿನಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ ಹಣ್ಣಿನ ಮಾರುಕಟ್ಟೆಗೆ ಹೋದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯದ ಹುಸ್ಕೂರು ಹಣ್ಣಿನ ಮಾರುಕಟ್ಟೆಯಲ್ಲಿ ನಡೆದಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರತ್ಯೇಕ ಘಟನೆ: ಡೆಂಗ್ಯೂಗೆ ವಿದ್ಯಾರ್ಥಿನಿ ಸಾವು, ಹಣ್ಣಿನ ಮಾರುಕಟ್ಟೆಗೆ ಹೋಗಿದ್ದ ಯುವಕ ಶವವಾಗಿ ಪತ್ತೆ
ಪ್ರತ್ಯೇಕ ಘಟನೆ: ಡೆಂಗ್ಯೂಗೆ ವಿದ್ಯಾರ್ಥಿನಿ ಸಾವು, ಹಣ್ಣಿನ ಮಾರುಕಟ್ಟೆಗೆ ಹೋಗಿದ್ದ ಯುವಕ ಶವವಾಗಿ ಪತ್ತೆ
Updated By: ಗಂಗಾಧರ​ ಬ. ಸಾಬೋಜಿ

Updated on: Jul 29, 2024 | 6:21 PM

ಬಳ್ಳಾರಿ, ಜುಲೈ 29: ಜಿಲ್ಲೆಯಲ್ಲಿ ಡೆಂಗ್ಯೂಗೆ (dengue) ಎಸ್​​ಎಸ್​​ಎಲ್​ಸಿ ವಿದ್ಯಾರ್ಥಿನಿ (Student) ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದೆ. ವತ್ಸಲಾ (16) ಮೃತ ವಿದ್ಯಾರ್ಥಿನಿ. ಸಿರುಗುಪ್ಪದ ಎಸ್ಇಎಸ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದಳು. ತೀವ್ರ ಜ್ವರ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ವೇಳೆ ಡೆಂಗೂ ಜ್ವರ ಇರುವುದು ಪತ್ತೆಯಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ಹಣ್ಣಿನ ಮಾರುಕಟ್ಟೆಗೆ ಹೋದ ಯುವಕ ಶವವಾಗಿ ಪತ್ತೆ

ಆನೇಕಲ್: ಹಣ್ಣಿನ ಮಾರುಕಟ್ಟೆಗೆ ಹೋದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯದ ಹುಸ್ಕೂರು ಹಣ್ಣಿನ ಮಾರುಕಟ್ಟೆಯಲ್ಲಿ ನಡೆದಿದೆ. ಮಧು (31) ಮೃತ ಯುವಕ. ಸಿಂಗೇನ ಅಗ್ರಹಾರದಲ್ಲಿರುವ ಅತಿ ದೊಡ್ಡ ಹುಸ್ಕೂರು ಹಣ್ಣಿನ ಮಾರುಕಟ್ಟೆಯಲ್ಲಿ ಇಂದು ಮಧು ಶವ ಪತ್ತೆ ಆಗಿದೆ.

ಇದನ್ನೂ ಓದಿ: ಕಲಬುರಗಿ: ಮಹಿಳೆಯ ಬರ್ಬರ ಹತ್ಯೆ ಕೇಸ್ ಭೇಧಿಸಿದ ಖಾಕಿ ಪಡೆ! ಹಂತಕ ಸಿಕ್ಕಿಬಿದ್ದಿದ್ದೇಗೆ?

ಕಳೆದ ವಾರ ಹಣ್ಣಿನ ಮಾರುಕಟ್ಟೆಯಲ್ಲಿ ಯುವಕನೊಬ್ಬನನ್ನು ಪಡೆಯೊಂದು ಅಟ್ಟಾಡಿಸಿದ್ದರು. ಇದಾದ ಬಳಿಕ ಈಗ ಮಾರುಕಟ್ಟೆಯಲ್ಲಿ ಯುವಕ ಸಾವಾಗಿದೆ. ಸದ್ಯ ಮಧು ಸಾವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಲಿಸುತ್ತಿದ್ದ ಬಸ್​ನಿಂದು ಬಿದ್ದ ವಿದ್ಯಾರ್ಥಿ: ಚಿಕಿತ್ಸೆ ಫಲಕಾರಿಯಾಗದೆ ಸಾವು

ವಿಜಯಪುರ: ಚಲಿಸುತ್ತಿದ್ದ ಬಸ್​ನಿಂದ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೃತಪಟ್ಟಿದ್ದಾರೆ. ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಪಿಎ ಗ್ರಾಮದಲ್ಲಿ ಇಂದು ಬೆಳಿಗ್ಗೆ ಘಟನೆ ನಡೆದಿತ್ತು. ಸಂದೀಪ (16) ಮೃತ ವಿದ್ಯಾರ್ಥಿ. ಬಸ್​ನ ಹಿಂಬದಿ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ.  ಸಿಂದಗಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಿಂದಗಿ ಪಟ್ಟಣದ ಎಚ್​ಜಿ ಹೈಸ್ಕೂಲ್​ನಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ಘಟನೆ ಖಂಡಿಸಿ ಗ್ರಾಮದಲ್ಲಿ ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟಿಸಿದ್ದಾರೆ. ಬನ್ನಿಹಟ್ಟಿ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಘಟನೆಗೆ ಬಸ್ ಚಾಲಕ ಹಾಗೂ ನಿರ್ಚಾಹಕನ ನಿರ್ಲಕ್ಷ್ಯ ಕಾರಣವೆಂದು ಆರೋಪಿಸಲಾಗಿದೆ. ಚಾಲಕ ನಿರ್ವಾಹಕನ ಮೇಲೆ ಕ್ರಮಕ್ಕೆ ಒತ್ತಾಯಿಸಲಾಗಿದ್ದು, ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಬಿಬಿಎಂಪಿ ಕಸದ ಲಾರಿ ಹರಿದು ಬೈಕ್​ ಸವಾರರಿಬ್ಬರು ಸಾವು: ಚಾಲಕ ಪರಾರಿ

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ಬೈಕ್​ ಸವಾರರಿಬ್ಬರು ಸಾವನ್ನಪ್ಪಿರುವಂತಹ ಘಟನೆ ನಿನ್ನೆ ರಾತ್ರಿ ಕೆ.ಆರ್​.ಸರ್ಕಲ್​ ಬಳಿ ನಡೆದಿದೆ. ಬೆಂಗಳೂರಿನ ಬಾಣಸವಾಡಿ ಮೂಲದ ಯುವಕ ಪ್ರಶಾಂತ್​, ಆಂಧ್ರ ಮೂಲದ ಯುವತಿ ಶಿಲ್ಪಾ(27) ಮೃತರು.

ಇದನ್ನೂ ಓದಿ: ರಾಮನಗರ ಮಾರಕಾಸ್ತ್ರಗಳಿಂದ ಹಲ್ಲೆ ಪ್ರಕರಣ: ಆರೋಪಿಗಳಿಗೆ ಪೊಲೀಸ್​ ಗುಂಡೇಟು

ಮೃತರು ಐಟಿಪಿಎಲ್​​ನ TCS​ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಇಬ್ಬರು ಊಟಕ್ಕೆಂದು ಹೊರಗೆ ಬಂದಿದ್ದಾಗ ಅಪಘಾತವಾಗಿದೆ. ಅಪಘಾತದ ಬಳಿಕ ಬಿಬಿಎಂಪಿ ಕಸದ ಲಾರಿ ಚಾಲಕ ಪರಾರಿ ಆಗಿದ್ದಾನೆ. ಹಲಸೂರು ಗೇಟ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.