AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಮಹಿಳೆಯ ಬರ್ಬರ ಹತ್ಯೆ ಕೇಸ್ ಭೇಧಿಸಿದ ಖಾಕಿ ಪಡೆ! ಹಂತಕ ಸಿಕ್ಕಿಬಿದ್ದಿದ್ದೇಗೆ?

ಅಂದು ಆ ಗ್ರಾಮದ ಬಳಿ ನಡೆದ ವಯೋವೃದ್ದೆಯ ಭೀಭತ್ಸಕರ ಕೊಲೆ ಇಡೀ ಜಿಲ್ಲೆಯನ್ನೆ ಅಕ್ಷರಶಃ ಬೆಚ್ಚಿ ಬಿಳಿಸಿತ್ತು. ಮಹಿಳೆಯೊಬ್ಬಳನ್ನ ತಲೆ ಮೇಲೆ ಕಲ್ಲುಎತ್ತಿಹಾಕಿ ಹತ್ಯೆ ಮಾಡಿ ಬಳಿಕ ಪೆಟ್ರೋಲ್ ಸುರಿದು ಶವವನ್ನ ಸುಟ್ಟು ಹಾಕಲಾಗಿತ್ತು. ಅಷ್ಟರಲ್ಲೇ ಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದ ಖಾಕಿಗೆ ಕೊಲೆ ಪ್ರಕರಣ ದೊಡ್ಡ ಸವಾಲಾಗಿತ್ತು. ಹಂತಕ ಒಂದೇ ಒಂದು ಸಣ್ಣ ಸುಳಿವು ಬಿಡದೇ ಹತ್ಯೆ ಮಾಡಿ ಏಸ್ಕೇಪ್ ಆಗಿದ್ದ. ಆದ್ರೆ, ಕೊನೆಗೂ ಖಾಕಿ ಪಡೆ ಹಂತಕನ ಹೆಡೆಮುರಿ ಕಟ್ಡಿದ್ದಾರೆ. ಹಾಗಿದ್ರೆ ಒಂಟಿ ಮಹಿಳೆ ಕೊಂದಿದ್ದ ಹಂತಕ ಸೆರೆ ಸಿಕ್ಕಿದ್ದು ಹೇಗೆ? ಕೊಲೆಗೆ ಕಾರಣ ಏನು ಅಂತೀರಾ? ಈ ಸ್ಟೋರಿ ಓದಿ.

ಕಲಬುರಗಿ: ಮಹಿಳೆಯ ಬರ್ಬರ ಹತ್ಯೆ ಕೇಸ್ ಭೇಧಿಸಿದ ಖಾಕಿ ಪಡೆ! ಹಂತಕ ಸಿಕ್ಕಿಬಿದ್ದಿದ್ದೇಗೆ?
ಮಹಿಳೆಯ ಬರ್ಬರ ಹತ್ಯೆ ಕೇಸ್ ಭೇಧಿಸಿದ ಖಾಕಿ ಪಡೆ
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jul 28, 2024 | 10:01 PM

Share

ಕಲಬುರಗಿ, ಜು.28: ಜಿಲ್ಲೆಯ ಕಮಲಾಪುರ(Kamalapura) ತಾಲೂಕಿನ ನಾಗೂರ ಗ್ರಾಮದ ಜನ ಎಂದಿನಂತೆ ತಮ್ಮ ದೈನಂದಿನ‌ ಕೆಲಸಕ್ಕೆ ಹೋಗುತ್ತಿದ್ದರು. ಅಷ್ಟರಲ್ಲಿ ಊರಾಚೆ ನಿರ್ಜನ ಪ್ರದೇಶದ ರಸ್ತೆ ಬದಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ತಕ್ಷಣವೇ ಮಹಾಗಾಂವ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಂದು ನೋಡಿದಾಗ ಮೃತದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಈ ವೇಳೆ ಮೃತದೇಹದ ಬಳಿ ಅರೆಬರೆ ಸುಟ್ಟ ಆಧಾರ್ ಕಾರ್ಡ್‌ನಲ್ಲಿನ ವಿಳಾಸ ಪತ್ತೆ ಹಚ್ಚಿದಾಗ, ಆಕೆ ಬೇರಾರು ಅಲ್ಲ.ಕಲಬುರಗಿ ನಗರದ ಜಗತ್ ಬಡಾವಣೆಯ ನಿವಾಸಿ ಬಸಮ್ಮ ಎನ್ನುವುದು ತಿಳಿದಿತ್ತು.

ತಕ್ಷಣವೇ ಅಲರ್ಟ್ ಆದ ಪೊಲೀಸರು ತನಿಖೆ ಶುರು ಮಾಡಿದ್ದರು. ಆದರೆ, ಏನು ಮಾಹಿತಿ ಸಿಕ್ಕಿರಲಿಲ್ಲ. ಬಳಿಕ ಆಕೆಯ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ. ಅವಾಗ ಆಕೆ ಕೆಲ ವರ್ಷಗಳಿಂದ ಬಡ್ಡಿ ವ್ಯವಹಾರ ಮಾಡ್ತಿದ್ದಳು ಎನ್ನುವುದು  ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗೇ ಯಾರೋ ಈಕೆಯಿಂದ ಹಣ ಪಡೆದವರೇ ಕೊಲೆ ಮಾಡಿರಬಹುದು ಎಂದು ಅಂದಾಜಿದ್ದ ಖಾಕಿ, ಅದೇ ಆ್ಯಂಗಲ್​ನಲ್ಲಿ ತನಿಖೆ ಚುರುಕುಗೊಳಿಸಿತ್ತು. ಅವಾಗ ಪೊಲೀಸರಿಗೆ ಲಾಕ್ ಆಗಿದ್ದೆ ಈ ರಾಜಕುಮಾರ ಬಿರಾದರ್.

ಇದನ್ನೂ ಓದಿ:ಸಂವಿಧಾನ ಹತ್ಯೆ ದಿನದ ಅಧಿಸೂಚನೆ ಸಂವಿಧಾನಕ್ಕೆ ಅವಮಾನವಲ್ಲ: ದೆಹಲಿ ಹೈಕೋರ್ಟ್​

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಈತ ಗೌಂಡಿ ಕೆಲಸ ಮಾಡಿಕೊಂಡಿದ್ದ. ಬಸಮ್ಮಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದನು. ಈ ವೇಳೆ ಬಸಮ್ಮ ತನ್ನ ಬಳಿಯಿದ್ದ 48 ಗ್ರಾಂಗೂ ಅಧಿಕ ಚಿನ್ನ ಮತ್ತು ಹಣವನ್ನ ಈತನ ಬಳಿ ಕೊಟ್ಡಿದ್ದಳಂತೆ. ಆ ಚಿನ್ನವನ್ನ ರಾಜಕುಮಾರ್ ಫೈನಾನ್ಸ್‌ವೊಂದರಲ್ಲಿ ಅಡವಿಟ್ಟು 2 ಲಕ್ಷಕ್ಕೂ ಅಧಿಕ ಹಣ ಸಾಲ ಪಡೆದಿದ್ದನು‌. ಕೆಲ ದಿನಗಳ ಬಳಿಕ ನನ್ನ ಚಿನ್ನಾಭರಣ ಕೊಡು ಎಂದು ರಾಜಕುಮಾರಗೆ ಬಸಮ್ಮ ಕೇಳಿದ್ದಾಳೆ. ಎಷ್ಟೋ ಸಾರಿ ಚಿನ್ನ ಕೇಳಿದಾಗ ಏನಾದರೊಂದು ನೆಪ ಹೇಳುತ್ತಿದ್ದ ಹಂತಕ, ಜುಲೈ 14 ರಂದು ಬಾ ಊಟ ಮಾಡಿಸಿ ಕೊಡ್ತಿನಿ ಎಂದು ತನ್ನದೇ ಸ್ಕೂಟಿ ಮೇಲೆ ಕರೆದುಕೊಂಡು ಹೋಗಿದ್ದಾನೆ.

ಈ ವೇಳೆ ನಾಗೂರ ಗ್ರಾಮದ ಬಳಿ ಬಸಮ್ಮಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ‌. ಬಳಿಕ ಸಾಕ್ಷಿ ನಾಶಪಡಿಸಲು ಪೆಟ್ರೋಲ್ ಸುರಿದು ಶವವನ್ನ ಸುಟ್ಟುಹಾಕಿದ್ದಾನೆ. ಇನ್ನು 2013-14 ರಲ್ಲಿ ಬಸಮ್ಮಳ ಗಂಡ ನಿವೃತ್ತಿ ಹೊಂದಿನ ಬಳಿಕ ಪೆನ್ಶನ್​ ಹಣವನ್ನ ಪತ್ನಿಗೆ ನೀಡಿದ್ದನು. ಕೆಲದಿನಗಳ ಬಳಿಕ ಆತ ತೀರಿಕೊಂಡ ನಂತರ, ಪೆನ್ಶನ್ ಹಣದಲ್ಲೆ ಬಸಮ್ಮ ಬಡ್ಡಿ ವ್ಯವಹಾರ ಮಾಡುತ್ತಿದ್ದಳು. ಸದಾ ಕಾಲ ತನ್ನ ಚಿನ್ನವನ್ನ ಕೈಚೀಲದಲ್ಲೆ ಇಟ್ಟುಕೊಂಡು ಓಡಾಡುತ್ತಿದ್ದಳು. ಇನ್ನು ಜಗತ್ ಬಡಾವಣೆಯಲ್ಲೆ ವಾಸ ಮಾಡ್ತಿದ್ದ ಆರೋಪಿ ರಾಜಕುಮಾರ್, ಬಸಮ್ಮಳ ಜೊತೆ ಆತ್ಮೀಯತೆ ಬೆಳೆಸುಕೊಂಡಿದ್ದನು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಹೀಗಾಗಿ ತನ್ನ ಬಳಿಯಿದ್ದ ಚಿನ್ನವನ್ನ ಹಂತಕನ ಬಳಿ ಇಟ್ಟಿದ್ದಳು. ಅದ್ಯಾವಾಗ ಬಸಮ್ಮ ಚಿನ್ನವನ್ನ ಕೊಟ್ಟಳೋ ಆಗ ಕೊಲೆಗಾರನ ಕಣ್ಣು ಕೆಂಪಾದವು. ಹೇಗಾದರೂ ಮಾಡಿ ಬಸಮ್ಮಳ ಚಿನ್ನ ಲಪಾಟಾಯಿಸಬೇಕೆಂದು ಚಿನ್ನವನ್ನ ಅಡವಿಟ್ಟು ಸಾಲ ಪಡೆದಿದ್ದನು. ಇನ್ನು ಅತ್ಯಂತ ಕಠಿಣ ಹಾಗೂ ಯಾವುದೇ ಸುಳಿವಿಲ್ಲದೇ ಇದ್ದ ಈ ಕೊಲೆ ಪ್ರಕರಣವನ್ನ ಗ್ರಾಮೀಣ ಸಿಪಿಐ ನಾರಾಯಣ್ ನೇತೃತ್ವದಲ್ಲಿ ಮಹಾಗಾಂವ್ ಠಾಣೆ ಪೊಲೀಸರು ಭೇದಿಸಿದ್ದಾರೆ. ಆಕೆಯನ್ನ ಕರೆದುಕೊಂಡು ಹೋಗಲು ಮಾರುಕಟ್ಟೆಯಲ್ಲಿ ಸ್ಕೂಟಿ ಬೈಕ್ ತಂದಿದ್ದನು. ಆಕೆಯನ್ನ ಸೂಪರ್ ಮಾರುಕಟ್ಟೆಯ ಸಂಗೀತ ಮೊಬೈಲ್ ಸ್ಟೋರ್ ಬಳಿ ಪಿಕಪ್ ಮಾಡಿರೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದರೆ, ನಾಗೂರ ಗ್ರಾಮದ ಬಳಿ ಬಸಮ್ಮಳನ್ನ ಕರೆದುಕೊಂಡು ಹೋಗುವ ದೃಶ್ಯ ಅಲ್ಲಿಯ ಗ್ರಾಮ ಪಂಚಾಯತಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇಷ್ಟೆಲ್ಲ ಸಾಕ್ಷಾಧಾರಗಳನ್ನ ಸಂಗ್ರಹಿಸಿ ಬಸವರಾಜ್‌ನನ್ನ ಮಹಾಗಾಂವ್ ಠಾಣೆ ಪೊಲೀಸರು ಲಾಕ್ ಮಾಡಿದ್ದಾರೆ. ಇನ್ನು ಕಠಿಣ ಕೊಲೆ ಪ್ರಕರಣವನ್ನ ಬೇಧಿಸಿರುವ ಮಹಾಗಾಂವ್ ಠಾಣೆ ಪೊಲೀಸರಿಗೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ಪ್ರಶಂಸನ ಪತ್ರ ನೀಡಿ ಗೌರವಿಸಿದ್ದಾರೆ. ಒಟ್ಟಿನಲ್ಲಿ ಬಡ್ಡಿ ಬಸಮ್ಮಳ ಭೀಕರ ಹತ್ಯೆ ಪ್ರಕರಣ ಸಧ್ಯ ಸುಖ್ಯಾಂತಗೊಂಡಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗಲಿ ಅನ್ನೊದು ಸಾರ್ವಜನಿಕರ ಆಗ್ರಹವಾಗಿದೆ‌.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:01 pm, Sun, 28 July 24