Karnataka Dam Water Level: ರಾಜ್ಯದ14 ಪ್ರಮುಖ ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ

|

Updated on: Sep 12, 2024 | 7:44 AM

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಪ್ರಮಾಣ ಅಧಿಕಗೊಂಡಿದ್ದರಿಂದ ನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಜಲಾಯಶಗಳು ಭರ್ತಿಯಾಗುತ್ತಿವೆ. ಭದ್ರಾ, ಹಾರಂಗಿ, ಕಬಿನಿ, ಕೆಆರ್​ಎಸ್, ಹೇಮಾವತಿ, ಲಿಂಗನಮಕ್ಕಿ, ಆಲಮಟ್ಟಿ, ಮಲಪ್ರಭಾ ಅಣೆಕಟ್ಟುಗಳ ನೀರಿನ ಮಟ್ಟ ಹೆಚ್ಚಳವಾಗಿದೆ. ಹಾಗಾದರೆ ಸೆಪ್ಟೆಂಬರ್​​​ 12ರಂದು ರಾಜ್ಯದ 14 ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ.

Karnataka Dam Water Level: ರಾಜ್ಯದ14 ಪ್ರಮುಖ ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ
ಆಲಮಟ್ಟಿ ಜಲಾಶಯ
Follow us on

ಕರ್ನಾಟಕ ರಾಜ್ಯದಲ್ಲಿ ಉತ್ತಮ ಮಳೆಯಾದ ಪರಿಣಾಮ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ. ಜೊತೆಗೆ ಹೊರ ಹರಿವಿನ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಹಾಗಾದರೆ ಸೆ.12ರಂದು ತುಂಗಭದ್ರಾ, ಕೆಆರ್​ಎಸ್​, ಆಲಮಟ್ಟಿ ಸೇರಿದಂತೆ ಕರ್ನಾಟಕದ ಪ್ರಮುಖ 14 ಜಲಾಶಯಗಳ (Karnataka Dam Water Level)  ನೀರಿನ ಮಟ್ಟ ವಿವರ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 122.48 123.08 122.48 69,715 63,628
ತುಂಗಭದ್ರಾ ಜಲಾಶಯ (Tungabhadra Dam) 497.71 105.79 101.30 69.17 27,861 26,957
ಮಲಪ್ರಭಾ ಜಲಾಶಯ (Malaprabha Dam) 633.80 37.73 37.59 21.61 69,715 63,628
ಕೆ.ಆರ್.ಎಸ್ (KRS Dam) 38.04 49.45 49.45 21.33 13,184 9,097
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 148.75 67.32 17,575 10,966
ಕಬಿನಿ ಜಲಾಶಯ (Kabini Dam) 696.13 19.52 19.39 14.72 6,796 5,767
ಭದ್ರಾ ಜಲಾಶಯ (Bhadra Dam) 657.73 71.54 68.21 46.01 15,574 10,348
ಘಟಪ್ರಭಾ ಜಲಾಶಯ (Ghataprabha Dam) 662.91 51.00 50.59 41.71 5,627 5,627
ಹೇಮಾವತಿ ಜಲಾಶಯ (Hemavathi Dam) 890.58 37.10 37.06 19.90 7,176 7,100
ವರಾಹಿ ಜಲಾಶಯ (Varahi Dam) 594.36 31.10 26.26 9.56 2038 0
ಹಾರಂಗಿ ಜಲಾಶಯ (Harangi Dam)​​ 871.38 8.50 8.38 8.19 1577 1,975
ಸೂಫಾ (Supa Dam) 564.00 145.33 139.94 77.59 10,303 4444
ನಾರಾಯಣಪುರ ಜಲಾಶಯ (Narayanpura Dam) 492.25 33.31 32.38 25.77 69,489 67,880
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 21.41 24.24 0 135

ಕರ್ನಾಟಕ ರಾಜ್ಯದಲ್ಲಿ ಸೆಪ್ಟೆಂಬರ್ 18ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಳೆಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ