ಸಚಿವ ಪ್ರಹ್ಲಾದ್ ಜೋಶಿ-ಸಾಮಾಜಿಕ ಕಾರ್ಯಕರ್ತ ಮಧ್ಯೆ ಕಾನೂನು ಸಮರ: ಹಿರೇಮಠ್ಗೆ ಹಿನ್ನಡೆ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಸ್ಆರ್ ಹಿರೇಮಠ್ ನಡುವೆ ಕಾನೂನು ಸಮರ ಮುಂದುವರಿದಿದ್ದು, ಕೋರ್ಟ್ನಲ್ಲಿ ಹಿರೇಮಠ್ಗೆ ಹಿನ್ನಡೆಯಾಗಿದೆ.
ಧಾರವಾಡ: ಮಾನಹಾನಿ ಪ್ರಕರಣವನ್ನು (Defamation Case) ರದ್ದು ಮಾಡುವಂತೆ ಸಾಮಾಜಿಕ ಹೋರಾಟಗಾರ ಎಸ್. ಆರ್. ಹಿರೇಮಠ್ (sr hiremath) ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ತಮ್ಮ ವಿರುದ್ಧ ‘ಭೂಗಳ್ಳರು’ ಪದ ಬಳಸಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(pralhad joshi) ಅವರು ಎಸ್. ಆರ್. ಹಿರೇಮಠ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಈ ಕೇಸ್ಅನ್ನು ವಜಾಗೊಳಿಸಲು ಹಿರೇಮಠ ಅರ್ಜಿ ಸಲ್ಲಿಸಿದ್ದರು. ಆದ್ರೆ, ಇಂದು(ಅ.08) ಧಾರವಾಡ ಜೆಎಂಎಫ್‌ಸಿ ಕೋರ್ಟ್ ವಜಾ ಮಾಡಿದೆ.
ಜೋಶಿ ವಿರುದ್ಧ ‘ಭೂಗಳ್ಳರು’ ಎನ್ನುವ ಪದ ಬಳಸಿ ನಿಂದಿಸಿದ್ದರು. ಇದರಿಂದ ಹಿರೇಮಠ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಜೋಶಿ ಅರ್ಜಿ ಪುರಸ್ಕರಿಸಿದ್ದ ಕೋರ್ಟ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ಬಳಿಕ ಹಿರೇಮಠ್ ಜಾಮೀನು ಪಡೆದಿದ್ದರು.
ಇದನ್ನೂ ಓದಿ: ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಅನುಮೋದನೆಗೆ ಬಿಜೆಪಿ ಕ್ಯಾಬಿನೆಟ್ ಅಸ್ತು
ಅಲ್ಲದೇ ಕೇಸ್ ವಜಾಕ್ಕೆ ಹೈಕೋರ್ಟ್ಗೆ ಅರ್ಜಿಸಲ್ಲಿದ್ದರು,. ಆದ್ರೆ, ಹೈಕೋರ್ಟ್ ಹಿರೇಮಠ್ ಅರ್ಜಿಯನ್ನು ವಜಾಗೊಳಿಸಿತ್ತು, ಬಳಿಕ ಈ ಕೇಸ್ ಮತ್ತೆ ಜೆಎಂಎಫ್‌ಸಿಗೆ ವರ್ಗವಾಗಿತ್ತು.
ಸಾರ್ವಜನಿಕ ಹಿತಾಸಕ್ತಿಗಾಗಿ ಹೇಳಿಕೆ ನೀಡಿದ್ದೆ. ಮಾನಹಾನಿ ಮಾಡೋ ಉದ್ದೇಶ ಇರಲಿಲ್ಲ. ಹೀಗಾಗಿ ಪ್ರಕರಣದಿಂದ ಕೈಬಿಡುವಂತೆ ಹಿರೇಮಠ್ ಧಾರವಾಡ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದ್ರೆ, ಜೆಎಂಎಫ್‌ಸಿ ನ್ಯಾಯಾಲಯದಲ್ಲಿಯೂ ಸಹ ಹಿರೇಮಠ್ ಅರ್ಜಿ ವಜಾಗೊಳಿಸಿದೆ. ಇದರಿಂದ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ಗೆ ಭಾರೀ ಹಿನ್ನಡೆಯಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Sat, 8 October 22