ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಅನುಮೋದನೆಗೆ ಬಿಜೆಪಿ ಕ್ಯಾಬಿನೆಟ್ ಅಸ್ತು
ನ್ಯಾ.ನಾಗಮೋಹನ ದಾಸ್ ವರದಿ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಂಪುಟ ಸಭೆ ನಂತರ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದರು.
ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲಾತಿ (SC, ST reservation) ಪ್ರಮಾಣ ಹೆಚ್ಚಳ ಸರ್ವಪಕ್ಷ ಸಭೆ ನಿರ್ಣಯಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿಲಾಗಿದೆ. ನ್ಯಾ.ನಾಗಮೋಹನ ದಾಸ್ ವರದಿ ಅನುಷ್ಠಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಂಪುಟ ಸಭೆ ನಂತರ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದರು. ಎಸ್ಸಿ ಸಮುದಾಯದ ಮೀಸಲಾತಿ ಪ್ರಮಾಣ 15-17ಕ್ಕೆ, ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣ 3-7ಕ್ಕೆ ಹೆಚ್ಚಳ ಮಾಡಲು ಸರ್ಕಾರ ಕೂಡಲೇ ಆದೇಶದ ಮೂಲಕ ಜಾರಿ ಮಾಡುತ್ತೇವೆ ಎಂದು ಹೇಳಿದರು. ಒಳ ಮೀಸಲಾತಿ ಬಗ್ಗೆ ಸದಾಶಿವ ಆಯೋಗದ ವರದಿ ಅಧ್ಯಯನ ಮಾಡಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ. ನಮ್ಮ ಮುಂದೆ ಓಬಿಸಿ ಹಾಗೂ ಎಸ್ ಟಿ ಸೇರಿಸ ಬೇಕು ಎಂಬ ಬೇರೆ ಬೇರೆ ಸಮುದಾಯದ ಬೇಡಿಕೆಯನ್ನ ಚರ್ಚೆ ಮಾಡುತ್ತೇವೆ. ನಮ್ಮ ಮುಂದೆ ಬೇರೆ ಬೇರೆ ಮಾರ್ಗಗಳಿವೆ. ಶೆಡ್ಯೂಲ್ 9 ರ ಅಡಿ ಮೀಸಲಾತಿ ತರಬೇಕಾ ಎಂಬ ಚರ್ಚೆ ನಡೆದಿದೆ. ಈಗಾಗಲೇ ತಮಿಳುನಾಡಲ್ಲಿ ಶೇಕಡಾ 69 ಮೀಸಲಾತಿ ಇದೆ.
ತಮಿಳಿನಾಡು ಕೇಸ್ ಸುಪ್ರಿಂ ಕೋರ್ಟ್ನಲ್ಲಿ ಇದ್ದರು ಯಾವುದೇ ತೀರ್ಮನ ಇಲ್ಲ. ಹೀಗಾಗಿ ಸಂವಿಧಾನ ತಿದ್ದುಪಡಿ ಮಾಡಿ ಮಾಡಬೇಕಾದ ಪರಿಸ್ಥಿತಿ ಇವೆ. ಎಸ್ಸಿ ಎಸ್ಟಿಗೆ ನಮ್ಮ ಕಮಿಟ್ ಮೆಂಟ್ ಇತ್ತು. ಹೀಗಾಗಿ ಈಗ ಮಾಡುತ್ತಿದ್ದೇವೆ. ಬೇರೆ ಸಮುದಾಯದವನ್ನ ನಾವು ಪ್ರವೋಕ್ ಮಾಡುತ್ತಿಲ್ಲ. ಎಸ್ಸಿ ಎಸ್ಟಿ ಸಮುದಾಯದ ಬಗ್ಗೆ ವೈಜ್ಙಾನಿಕ ವರದಿಗಳಿತ್ತು. ಹೀಗಾಗಿ ಮಾಡಿದ್ದೇವೆ. ಬೇರೆ ಸಮುದಾಯಗಳ ಬಗ್ಗೆ ಯಾವುದೇ ವರದಿ ಇಲ್ಲ. ಈಗ ಸಿಎಂ ಬೇರೆ ಸಮುದಾಯಗಳ ಬಗ್ಗೆ ವೈಜ್ಙಾನಿಕ ವರದಿ ಬಗ್ಗೆ ನನ್ನ ನೇತೃತ್ವದಲ್ಲಿ ಸಮಿತಿ ಮಾಡಿದ್ದಾರೆ. ನಾಗಮೋಹನ್ ದಾಸ್ ವರದಿಯಲ್ಲೇ ಸದಾಶಿವ ಆಯೋಗದಂತೆ ಒಳ ಮೀಸಲಾತಿ ಜಾರಿ ಮಾಡಿ ಅಂತಾ ಹೇಳಿದಾರೆ. ಈಗ ನಾವು ನಾಗಮೋಹನ್ ದಾಸ ವರದಿ ಮೂಲಕ ಮಾಡುತ್ತಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಮೀಸಲಾತಿ ಶಿಫಾರಸ್ಸಿನ ಜೊತೆಗೆ ಬೇರೆ ವಿಷಯಗಳ ಚರ್ಚೆ
ಕ್ಯಾಬಿನೆಟ್ ಸಚಿವರ ಒಪ್ಪಿಗೆ ಬಳಿಕ ವಿಧಾನ ಮಂಡಲ ಅಧಿವೇಶದಲ್ಲಿ ಕರೆಯಬೇಕು. ವಿಧಾನ ಮಂಡಲ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳದ ಬಗ್ಗೆ ಒಪ್ಪಿಗೆ ಪಡೆಯಬೇಕು. ಆದರೆ ಸದ್ಯ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಹಾಗಾಗಿ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಇದು ಸೆಡ್ಯೂಲ್ 9ಕ್ಕೆ ಸೇರಿಸೋ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಒಪ್ಪಿಗೆ ಪಡೆದ ನಂತರ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸಿಗೆ ಕಳಿಸಿಲಾಗುವುದು. ರಾಜ್ಯ ಸರ್ಕಾರ ಕಳುಸಿದ ಶಿಫಾರಸ್ಸನ್ನ ಕೇಂದ್ರ ಸರ್ಕಾರ ಪರಿಶೀಲಿಸಲಿದೆ. ರಾಜ್ಯ ಕಳಿಸಿದ ಮೀಸಲಾತಿ ಶಿಫಾರಸ್ಸಿನ ಜೊತೆಗೆ ಬೇರೆ ವಿಷಯಗಳಿದ್ದರೆ ಚರ್ಚೆ ಮಾಡಲಾಗುತ್ತದೆ. ಪಾರ್ಲಿಮೆಂಟ್ನಲ್ಲಿ ಮೀಸಲಾತಿ ವಿಚಾರವಾಗಿ ಚರ್ಚೆ ನಡೆಯಲಿದ್ದು, ಈ ವೇಳೆ ದೇಶದ ಒಟ್ಟು ರಾಜ್ಯಗಳಲ್ಲಿ ಪೈಕಿ ಶೇಕಡ 50 ರಾಜ್ಯಗಳ ಒಪ್ಪಿಗೆ ಬೇಕು.
ನಿನ್ನೆಯ ಸರ್ವ ಪಕ್ಷ ಸಭೆಯಲ್ಲಿ ಕುರುಬರ ಎಸ್ಟಿ ಹೋರಟದ ಬಗ್ಗೆ ಚರ್ಚೆ
ನಿನ್ನೆಯ ಸರ್ವ ಪಕ್ಷ ಸಭೆಯಲ್ಲಿ ಕುರುಬರ ಎಸ್ಟಿ ಹೋರಾಟ ಬಗ್ಗೆ ಸಚಿವ ಮಾಧುಸ್ವಾಮಿ ವಿಷಯ ಪ್ರಸ್ತಾಪಿಸಿದ್ದು, ಸಿದ್ದರಾಮಯ್ಯನವರೇ ನಿಮ್ಮವರು ಕೂಡ ಎಸ್ ಟಿ ಕೇಳುತ್ತಿದ್ದಾರೆ ಏನಂತೀರಾ ನೀವು ಎಂದು ಮಾಧುಸ್ವಾಮಿ ಹೇಳಿದ್ದು, ಇದಕ್ಕೆ ಸಿದ್ದರಾಮಯ್ಯ ಹೆಚ್ಚಿನ ಪ್ರತಿಕ್ರಿಯೆ ನೀಡಿಲ್ಲ. ನಿಮ್ಮ ಅಭಿಪ್ರಾಯ ತಿಳಿಸಿ. ನೀವು ಕುರುಬರ ಎಸ್ ಟಿ ಹೋರಾಟಕ್ಕೆ ಸಪೋರ್ಟ್ ಮಾಡುತ್ತೀರಾ ಎಂದು ಸಿದ್ದರಾಮಯ್ಯರನ್ನ ಮಾಧುಸ್ವಾಮಿ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ ಇದಕ್ಕೆ ನನ್ನನ್ನು ಏಕೆ ಕೇಳುತ್ತಿರಾ? ನೀವು ಎಸ್ ಟಿ ಕೊಡಬೇಕು ಅನ್ನೋದಾದರ ಕೊಡಿ. ನಾನು ಏನು ಹೇಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗುತ್ತಿದೆ.
ಇದರಿಂದ ಯಾವ ಸಮುದಾಯಕ್ಕೂ ಅನ್ಯಾಯ ಆಗೊಲ್ಲ:ಸಿಎಂ ಬೊಮ್ಮಾಯಿ
ಈ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಒಳ ಮೀಸಲಾತಿ ಸಹ ಸಂಪುಟದಲ್ಲಿ ಚರ್ಚೆ ಆಗಿದೆ. ಸದಾಶಿವ ಆಯೋಗ ಹಾಗೂ ನಾಗಮೋಹನ್ ದಾಸ್ ಸಮಿತು ವರದಿಯಲ್ಲಿ ಮೀಸಲಾತಿಯ ತಳ ಸಮುದಾಯದ ನ್ಯಾಯ ಸಿಕ್ಕಿಲ್ಲ ಎಂದಿದ್ದಾರೆ. ಅದನ್ನ ಆಧರಿಸಿ, ಸದಾಶಿವ ಆಯೋಗ ವರದಿಯನ್ನ ಅಧ್ಯಯನ ಮಾಡಿ ತೀರ್ಮಾನ ಮಾಡುತ್ತೇವೆ. ತೀರ್ಮಾನಕ್ಕೂ ಮೊದಲು ಎಸ್ಸಿಯ ಎಲ್ಲಾ ಸಮುದಾಯದ ಹಿತ ರಕ್ಷಣೆ ಮಾಡಲು ನಾವು ಆಯಾ ಸಮುದಾಯವನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಗೆಜೆಟ್ ನೋಟಿಫಿಕೇಷನ್ ಎಲ್ಲವು ಡಿಟೈಲ್ ಆಗಿ ಹೇಳುತ್ತೇವೆ. ನಮಗೆ ವಿಶ್ವಾಸ ಇದೆ ನಾಗಮೋಹನ್ ಹಾಗೂ ಸದಾಶಿವ ಆಯೋಗದಲ್ಲಿ ಸ್ಪಷ್ಟವಾಗಿದೆ. ಇದೊಂದು ವಿಶೇಷ ಸಂದರ್ಭ ಎಂಬ ಗ್ರೌಂಡ್ ನಮಗಿದೆ. ಹೀಗಾಗಿ ಕಾನೂನು ಹೋರಾಟ ಆದರೂ ನಮಗೆ ರಕ್ಷಣೆ ಸಿಗುತ್ತೆ. ಪ್ರಸನ್ನಾನಂದ ಸ್ವಾಮಿಜಿಗೆ ನಾನು ಮಾತಾಡಿದ್ದಿನಿ. ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದ್ದೇನೆ. ಇದರಿಂದ ಯಾವ ಸಮುದಾಯಕ್ಕೂ ಅನ್ಯಾಯ ಆಗೊಲ್ಲ ಎಂದು ಹೇಳಿದರು.
ಮೀಸಲಾತಿ ಹೆಚ್ಚಳಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇತ್ತು: ಸಚಿವ ಡಾ.ಅಶ್ವತ್ಥ್ ನಾರಾಯಣ
ಈ ವಿಚಾರವಾಗಿ ವಿಧಾನಸೌಧದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದು, ಮೀಸಲಾತಿ ಹೆಚ್ಚಳಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇತ್ತು. ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಸಾಮಾಜಿಕವಾಗಿ ಹಿಂದುಳಿದವರಿಗೆ ಹೆಚ್ಚು ಅವಕಾಶ ಸಿಗಬೇಕು. ಒಬಿಸಿ ಮೀಸಲಾತಿಗೆ ಕೈಹಾಕುವುದಿಲ್ಲ. ಒಳ ಮೀಸಲಾತಿ ಬಗ್ಗೆ ಮುಂದಿನ ಸಂಪುಟದಲ್ಲಿ ಚರ್ಚೆ ಆಗುತ್ತೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:11 pm, Sat, 8 October 22