AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವು ವರ್ಷಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ, ವಾಲ್ಮೀಕಿ ಸಮುದಾಯದವರು ಐತಿಹಾಸಿಕ ಕ್ಷಣದಲ್ಲಿದ್ದೇವೆ: ಸಚಿವ ಶ್ರೀರಾಮುಲು

ಎಸ್ಸಿ ಸಮುದಾಯಕ್ಕೆ 15 ರಿಂದ 17, ಎಸ್ಟಿ ಸಮುದಾಯಕ್ಕೆ 3ರಿಂದ 7 ರಷ್ಟು ಮೀಸಲಾತಿ ಏರಿಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅಭಿನಂದನೆ ಸಲ್ಲಿಸುತ್ತೇನೆ.

ಹಲವು ವರ್ಷಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ, ವಾಲ್ಮೀಕಿ ಸಮುದಾಯದವರು ಐತಿಹಾಸಿಕ ಕ್ಷಣದಲ್ಲಿದ್ದೇವೆ: ಸಚಿವ ಶ್ರೀರಾಮುಲು
ಪರಿಶಿಷ್ಟ ವರ್ಗಗಳ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 08, 2022 | 12:11 PM

ಬೆಂಗಳೂರು: ವಾಲ್ಮೀಕಿ ಸಮುದಾಯದವರು (Valmiki community) ಐತಿಹಾಸಿಕ ಕ್ಷಣದಲ್ಲಿ ಇದ್ದೇವೆ. ಹಲವು ವರ್ಷಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ ಎಂದು ಪರಿಶಿಷ್ಟ (SC-ST) ವರ್ಗಗಳ ಕಲ್ಯಾಣ ಖಾತೆ ಸಚಿವ ಶ್ರೀರಾಮುಲು ಹೇಳಿದರು. ವಿಧಾನ ಸೌಧದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡುತ್ತಿದ್ದಾರೆ. ಎಸ್ಸಿ ಸಮುದಾಯಕ್ಕೆ 15 ರಿಂದ 17, ಎಸ್ಟಿ ಸಮುದಾಯಕ್ಕೆ 3ರಿಂದ 7 ರಷ್ಟು ಮೀಸಲಾತಿ ಏರಿಕೆ ಮಾಡಲು ನಿರ್ಧಾರ ಮಾಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅಭಿನಂದನೆ ಸಲ್ಲಿಸುತ್ತೇನೆ. ಮೀಸಲಾತಿ ಬಗ್ಗೆ ಹಲವು ಬಾರಿ ಹೇಳಿದ್ದೆ, ಆದರೆ ಗೇಲಿ ಮಾಡಿದ್ದರು. ನನಗೆ ಸೋಷಿಯಲ್ ಮಿಡಿಯಾದಲ್ಲಿ ಬೈಸಿಕೊಂಡು ಸಾಕಾಗಿತ್ತು. ಆದರೆ ಮೀಸಲಾತಿಗಾಗಿ ನನ್ನ ಹೋರಾಟ ನಿಲ್ಲಲಿಲ್ಲ. ಭಾರತೀಯ ಜನತಾ ಪಾರ್ಟಿ ಕೊಟ್ಟ ಮಾತು ಎಂದು ಉಳಿಸಿಕೊಂಡಿಲ್ಲ ಎಂದು ಮಾತಿನ ವೇಗದಲ್ಲಿ ಸಚಿವ ಶ್ರೀರಾಮುಲು ಹೇಳಿದರು.

ಓಲಾ, ಉಬರ್ ಬಗ್ಗೆ ಹಲವರಿಂದ ದೂರುಗಳು ಬಂದಿತ್ತು

ಓಲಾ, ಉಬರ್ ಬಗ್ಗೆ ಹಲವರಿಂದ ದೂರುಗಳು ಬಂದಿತ್ತು. ತಾಂತ್ರಿಕ ಕಾರಣದಿಂದ ನೋಟೀಸ್ ನೀಡಲಾಗಿತ್ತು. ಪರವಾನಿಗೆ ಷರತ್ತು ಉಲ್ಲಂಘನೆ ಮಾಡಬಾರದು. ಪರವಾನಿಗೆ ಷರತ್ತು ಉಲ್ಲಘಿಸಿದ ಕಾರಣ ನೋಟೀಸ್ ನೀಡಲಾಗಿದೆ. ನೋಟೀಸ್ ಕೊಟ್ಟ ಬಳಿಕವೂ ಆಟೋ ಸಂಚಾರ ಸೇವೆ ಮಾಡುತ್ತಿದ್ದರೆ, ಅಂತಹ ವಾಹನಗಳನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಸಮಸ್ಯೆ ಬಗೆ ಹರಿಯಲಿದೆ ಎಂದು ಹೇಳಿದರು.

ಸಿಎಂ ಕೈಗೊಂಡ ನಿರ್ಧಾರಕ್ಕೆ ಅಭಿನಂದನೆ: ಕೆ.ಸುಧಾಕರ್​ 

ಎಸ್​​ಸಿ, ಎಸ್​ಟಿ ಮೀಸಲಾತಿ ಹೆಚ್ಚಳದ ನಿರ್ಧಾರಕ್ಕೆ ಸ್ವಾಗತ. ಸಿಎಂ ಕೈಗೊಂಡ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ವಿಧಾನಸೌಧದಲ್ಲಿ ಸಚಿವ ಡಾ.ಕೆ.ಸುಧಾಕರ್​ ಹೇಳಿದರು. ನ್ಯಾಯಸಮ್ಮತ ಬೇಡಿಕೆಯನ್ನು ಸಿಎಂ ಈಡೇರಿಸಿದ್ದಾರೆ. ಮೀಸಲಾತಿ ಸಾಮಾಜಿಕ ಕಳಕಳಿ ಬಗ್ಗೆ ಸರ್ಕಾರದ ಬದ್ಧತೆ ಎಂದು ಹೇಳಿದರು.

ಎಸ್ಪಿ ಎಸ್ಟಿ ಅವರಿಗೆ ಈಗ ಸಂತೃಪ್ತಿ ಆಗಿದೆ: ಕೆಎಸ್ ಈಶ್ವರಪ್ಪ

75 ವರ್ಷ ಆದರು ಎಸ್ಪಿ ಮತ್ತು ಎಸ್ಟಿ ಅಭಿವೃದ್ಧಿ ಆಗಿಲ್ಲ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು. ಎಲ್ಲ ಕ್ಷೇತ್ರದಲ್ಲೂ ಅವರು ಹಿಂದೆ ಇದ್ದಾರೆ. ಬಿಜೆಪಿ ಸರ್ಕಾರ ಎಸ್ಸಿ ಮತ್ತು ಎಸ್ಟಿಗೆ ಮೀಸಲಾತಿ ಶೇ 7 ರಷ್ಟು ಹೆಚ್ಚಳ ಮಾಡಿದೆ. ಅನೇಕ ವರ್ಷದ ಅವರ ಬೇಡಿಕೆ ಇತ್ತು. ಅದು ಸದ್ಯ ಈಡೇರಿದಂತಾಗಿದೆ. ಇದರಿಂದ ಅವರಿಗೆ ಸಂತೃಪ್ತಿ ಆಗಿದೆ ಎಂದರು.

ಎಸ್ಪಿ ಎಸ್ಟಿ ಅವರಿಗೆ ಸಿಎಂ ಬೊಮ್ಮಾಯಿ ಸರ್ಕಾರ ಬಂಪರ್ ಗಿಫ್ಟ್

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಬೊಮ್ಮಾಯಿ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, ಎಸ್​ಸಿ, ಎಸ್​ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಇಂದು(ಅ.7) ನಡೆದ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಎಲ್ಲವನ್ನೂ ಅವಲೋಕನ ಮಾಡಿ, ಎಸ್ಸಿ ಗೆ 15% ರಿಂದ 17% ಹಾಗೂ ಎಸ್ ಟಿ ಸಮುದಾಯಕ್ಕೆ 3% ರಿಂದ 7% ಕ್ಕೆ ಮೀಸಲಾತಿ (SC, ST Reservation)ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಆದ್ರೆ, ಇದಕ್ಕೆ ಶೇ. 50ರ ಗರಿಷ್ಠ ಮಿತಿ ಅಡ್ಡವಾಗುತ್ತಿದೆ.

ಕರ್ನಾಟಕ ಸರ್ಕಾರ ರೂಪಿಸುವ ಮೀಸಲಾತಿ ಶೇ.50 ರಷ್ಟನ್ನು ಮೀರಲಿದೆ. ಎಲ್ಲಾ ಮೀಸಲಾತಿ ಸೇರಿದರೂ ಅದು ಶೇ.50 ರಷ್ಟನ್ನು ಮೀರುವಂತಿಲ್ಲ. ಮಹಾರಾಷ್ಟ್ರ ಸರ್ಕಾರ, ಮರಾಠ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ನೀಡಿದ್ದನ್ನು ಸುಪ್ರೀಂಕೋರ್ಟ್ 2021 ರಲ್ಲಿ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಎಸ್​ಟಿ, ಎಎಸ್​​ಸಿ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾನೂನು ತೊಡಕುಗಳು ಎದುರಾಗಲಿವೆ. ಈ ಬಗ್ಗೆ ಹೈಕೋರ್ಟ್, ಸುಪ್ರೀಂಕೋರ್ಟ್​ನಲ್ಲಿ ಸರ್ಕಾರ ಸವಾಲು ಎದುರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:04 pm, Sat, 8 October 22