ಜಮಖಂಡಿ ಕೆಎಸ್ಆರ್ಟಿಸಿ ಚಾಲಕ ಸಾವು ಪ್ರಕರಣ; 7 ನೌಕರರ ಅಮಾನತು
ಚಾಲಕನ ಎದೆಗೆ ಕಲ್ಲು ಎಸೆದಿದ್ದು ಆಕಸ್ಮಿಕವಲ್ಲ. ಅದು ಪೂರ್ವನಿಯೋಜಿತ ಕೃತ್ಯ ಎಂಬುದು ಬಹಿರಂಗ ಆಗಿತ್ತು. ಚಾಲಕನ ಎದೆಗೆ ಕಲ್ಲು ಬಿದ್ದರೂ ಅವರು ಪ್ರಯಾಣಿಕರ ರಕ್ಷಣೆ ಮಾಡಿದ್ದರು. ಎದೆಗೆ ಕಲ್ಲು ಬಿದ್ದ ನೋವಲ್ಲೂ, ಬಸ್ನ ನಿಲ್ಲಿಸಿ ಪ್ರಯಾಣಿಕರ ಪ್ರಾಣ ರಕ್ಷಿಸಿದ್ದರು. ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ವೇಳೆ ಪ್ರತಿನಿತ್ಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದರು. ಕೆಲಸಕ್ಕೆ ಬರಬೇಕೆಂದು ದಿನವೂ ಒತ್ತಾಯ ಮಾಡುತ್ತಿದ್ದರು.

ಬಾಗಲಕೋಟೆ: ಕಲ್ಲೇಟಿಗೆ ಜಮಖಂಡಿ ಕೆಎಸ್ಆರ್ಟಿಸಿ ಚಾಲಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಸುಮಾರು ಏಳು ನೌಕರರನ್ನು ಅಮಾನತು ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ನೀಡಿದ್ದಾರೆ. ಎಪ್ರಿಲ್ 16 ರಂದು ಜಮಖಂಡಿ ಸಮೀಪ ಕವಟಗಿ ಕ್ರಾಸ್ ಬಳಿ ಬಸ್ಗೆ ಕಲ್ಲು ತೂರಲಾಗಿತ್ತು. ಕಲ್ಲು ಎದೆಗೆ ಬಡಿದು ನಬಿರಸೂಲ್ ಸಾಬ್ ಅವಟಿ ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಅರುಣ್ ಅರಕೇರಿ, ಮನೋಹರ್ ಐಹೊಳಿ, ಚೇತನ್ ಕರ್ವೆ, ಸದಾಶಿವ ಕಂಕನವಾಡಿ, ಲೋಹಿತ್ ದಾಸರ, ಬಿ.ವೈ.ಪೂಜಾರ, ಮಲ್ಲಪ್ಪ ತಳವಾರ ಎಂಬುವವರು ಅಮಾನತು ಮಾಡಲಾಗಿದೆ.
ಚಾಲಕನ ಎದೆಗೆ ಕಲ್ಲು ಎಸೆದಿದ್ದು ಆಕಸ್ಮಿಕವಲ್ಲ. ಅದು ಪೂರ್ವನಿಯೋಜಿತ ಕೃತ್ಯ ಎಂಬುದು ಬಹಿರಂಗ ಆಗಿತ್ತು. ಚಾಲಕನ ಎದೆಗೆ ಕಲ್ಲು ಬಿದ್ದರೂ ಅವರು ಪ್ರಯಾಣಿಕರ ರಕ್ಷಣೆ ಮಾಡಿದ್ದರು. ಎದೆಗೆ ಕಲ್ಲು ಬಿದ್ದ ನೋವಲ್ಲೂ, ಬಸ್ನ ನಿಲ್ಲಿಸಿ ಪ್ರಯಾಣಿಕರ ಪ್ರಾಣ ರಕ್ಷಿಸಿದ್ದರು. ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ವೇಳೆ ಪ್ರತಿನಿತ್ಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದರು. ಕೆಲಸಕ್ಕೆ ಬರಬೇಕೆಂದು ದಿನವೂ ಒತ್ತಾಯ ಮಾಡುತ್ತಿದ್ದರು. ಅವರ ಒತ್ತಡಕ್ಕೆ ಮಣಿದು ನಬಿರಸೂಲ್ ಸಾಬ್ ಅವಟಿ ಅವರು ಕೆಲಸ ಹಾಜರಾಗಿದ್ದರು ಎಂದು ಅವರ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿರುವ ಪೊಲೀಸರು ಕಲ್ಲು ತೋರಾಟದ ಹಿಂದಿನ ಮಾಸ್ಟರ್ ಪ್ಲ್ಯಾನ್ ಬಯಲು ಮಾಡಿದ್ದಾರೆ.
ಅರುಣ್ ಅರಕೇರಿ ಎಂಬಾತ ಕೆಎಸ್ಆರ್ಟಿಸಿ ಬಸ್ಗೆ ಕಲ್ಲು ತೂರಲು ಪ್ಲ್ಯಾನ್ ಮಾಡಿದ್ದ. ಕಲ್ಲು ತೂರಿದ್ದ ಬಸ್ನಲ್ಲಿಯೇ ಅರುಣ್ ಕೂಡ ಪ್ರಯಾಣಿಸುತ್ತಿದ್ದ. ಬಸ್ನಲ್ಲಿಯೇ ಕುಳಿತು ಕಲ್ಲು ತೂರುವುದಕ್ಕೆ ಸ್ಕೆಚ್ ರೂಪಿಸಿದ್ದ. ಆತ ನೀಡಿದ ಸೂಚನೆಯಂತೆ ಮಲ್ಲಪ್ಪ ತಳವಾರ, ಚೇತನ್ ಕರ್ವೆ, ಸದಾಶಿವ ಕಂಕಣವಾಡಿ, ಲೋಹಿತ್ ದಾಸರ ಕಲ್ಲೆ ಎಸೆದಿದ್ದಾರೆ ಎಂಬುದು ವಿಚಾರಣೆ ಬಳಿಕ ತಿಳಿದುಬಂದಿದ್ದು, ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಏಳು ಜನರನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ
ಕಾಲುವೆಗೆ ಬಿದ್ದ ವಾಹನ; ಭೀಕರ ಅಪಘಾತದಲ್ಲಿ 13 ಮಂದಿ ಸಾವು
ಮಾಸ್ಕ್ ಧರಿಸದವರನ್ನು ತರಾಟೆಗೆ ತೆಗೆದುಕೊಂಡ ಕಲಬುರಗಿ ಟ್ರಾಫಿಕ್ ಪಿಎಸ್ಐ
(Seven employees suspended for For killing a KSRTC bus driver in Bagalakote)
Published On - 1:56 pm, Mon, 19 April 21