AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ನಿಂದ ಗುಣಮುಖರಾದ ಶಾಸಕ ರಮೇಶ್ ಜಾರಕಿಹೊಳಿ, ನಾಳೆ ವಿಚಾರಣೆಗೆ ಬರುವಂತೆ ಎಸ್ಐಟಿ ನೋಟಿಸ್

ಕಳೆದ ನಾಲ್ಕು ದಿನದ ಹಿಂದೆ ಕೊವಿಡ್​ನಿಂದ ಮುಕ್ತವಾಗಿರುವ ರಮೇಶ್ ಜಾರಕಿಹೊಳಿಗೆ 20ನೇ ತಾರೀಖಿನಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ. ಮೂರು ದಿನಗಳ ಹಿಂದೆ ಗೋಕಾಕ್​ಗೆ ಬಂದು ಎಸ್ಐಟಿ ಅಧಿಕಾರಿಗಳು ರಮೇಶ್​ಗೆ ನೋಟಿಸ್ ನೀಡಿದ್ದಾರೆ.

ಕೊವಿಡ್​ನಿಂದ ಗುಣಮುಖರಾದ ಶಾಸಕ ರಮೇಶ್ ಜಾರಕಿಹೊಳಿ, ನಾಳೆ ವಿಚಾರಣೆಗೆ ಬರುವಂತೆ ಎಸ್ಐಟಿ ನೋಟಿಸ್
ರಮೇಶ್​ ಜಾರಕಿಹೊಳಿ
sandhya thejappa
| Updated By: Digi Tech Desk|

Updated on:Apr 19, 2021 | 1:38 PM

Share

ಬೆಳಗಾವಿ: ಕೊರೊನಾ ಸೊಂಕು ದೃಢಪಟ್ಟಿದ್ದ ಶಾಸಕ ರಮೇಶ್ ಜಾರಕಿಹೊಳಿ ಇದೀಗ ಗುಣಮುಖರಾಗಿದ್ದಾರೆ. ಕಳೆದ 15 ದಿನಗಳಿಂದ ಹೋಮ್ ಕ್ವಾರಂಟೈನ್ ಆಗಿದ್ದ ರಮೇಶ್ ಜಾರಕಿಹೊಳಿಗೆ ಏಪ್ರಿಲ್ 1ರಂದು ಕೊರೊನಾ ಪಾಸಿಟಿವ್ ಬಂದಿತ್ತು. ನಾಲ್ಕು ದಿನದ ಹಿಂದೆಯೇ ರಮೇಶ್​ಗೆ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಟಿವಿ9ಗೆ ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟೀನ್ ಮಾಹಿತಿ ನೀಡಿದ್ದಾರೆ.

ಕಳೆದ ನಾಲ್ಕು ದಿನದ ಹಿಂದೆ ಕೊವಿಡ್​ನಿಂದ ಮುಕ್ತವಾಗಿರುವ ರಮೇಶ್ ಜಾರಕಿಹೊಳಿಗೆ 20ನೇ ತಾರೀಖಿನಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ನೀಡಿದೆ. ಮೂರು ದಿನಗಳ ಹಿಂದೆ ಗೋಕಾಕ್​ಗೆ ಬಂದು ಎಸ್ಐಟಿ ಅಧಿಕಾರಿಗಳು ರಮೇಶ್​ಗೆ ನೋಟಿಸ್ ನೀಡಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದರೂ ನಾಳೆ ವಿಚಾರಣೆಗೆ ಹಾಜರಾಗುವುದು ಗೊಂದಲವಿದೆ ಎಂದು ಹೇಳಲಾಗುತ್ತಿದೆ.

ಕೊರೊನಾ ವದರಿ ನೆಗೆಟಿವ್ ಬಂದರೂ ಸಂಪೂರ್ಣವಾಗಿ ಗುಣಮುಖರಾಗದ ಹಿನ್ನೆಲೆ ಎಲ್ಲಿಯೂ ಸುತ್ತಾಡದಂತೆ ರಮೇಶ್ ಜಾರಕಿಹೊಳಿಗೆ ವೈದ್ಯರ ಸೂಚನೆ ನೀಡಿದ್ದಾರೆ. ಇದರಿಂದ ಎಲ್ಲಿಗೂ ಹೋಗದೆ ವೈದ್ಯರು ಸೂಚನೆಯಂತೆ ಇನ್ನೂ ಒಂದು ವಾರ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ.

ಇದನ್ನೂ ಓದಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಸ್​ಐಟಿ ತನಿಖೆ ಮುಂದುವರಿಕೆಗೆ ಹೈಕೋರ್ಟ್​ ಗ್ರೀನ್​ ಸಿಗ್ನಲ್​

ರಮೇಶ್ ಜಾರಕಿಹೊಳಿ ಸಿಡಿ ಕೇಸ್​ಗೆ ಸಿಕ್ತು ಮಹತ್ವದ ಸಾಕ್ಷ್ಯ.. ಮಾಲೂರಿನ ಯುವತಿಯಿಂದ ಕಲೆ ಹಾಕುತ್ತಿದ್ದಾರೆ ಮಾಹಿತಿ

(Ramesh Jarkiholi cured from Covid and receives SIT notice to attend inquiry on 20th April)

Published On - 1:14 pm, Mon, 19 April 21