ಬೆಂಗಳೂರು, ಮೇ 03: ರಾಜ್ಯಾದ್ಯಂತ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್ ಡ್ರೈವ್ ಪ್ರಕರಣ ಹಲ್ ಚಲ್ ಎಬ್ಬಿಸಿದ್ದು ಇದೀಗ ಸಿಐಡಿಗೂ ದೂರು ದಾಖಲಾಗಿದೆ. ಪ್ರಜ್ವಲ್ ರೇವಣ್ಣರಿಂದ ದೌರ್ಜನ್ಯವಾಗಿದೆ ಎಂದು ಆರೋಪಿಸಿದ್ದ ಸಂತ್ರಸ್ತೆ ಅಪರಾಧ ತನಿಖಾ ಇಲಾಖೆಗೆ (CID) ದೂರು ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಎ1 ಆಗಿದ್ದಾರೆ.
ಸಂತ್ರಸ್ತೆ ಹಾಸನ ಜಿಲ್ಲೆಯಲ್ಲಿ ಜನಪ್ರತಿನಿಧಿಯಾಗಿದ್ದಾರೆ. ಶಾಸಕರು ಹಾಗೂ ಸಂಸದರ ಬಳಿ ಕ್ಷೇತ್ರದ ಅಭಿವೃದ್ಧಿ ಕೆಲಸದ ಬಗ್ಗೆ ಚರ್ಚಿಸಲು ಸಂತ್ರಸ್ತೆ ಹೋಗಿದ್ದರು. ಪ್ರಜ್ವಲ್ ರೇವಣ್ಣ ಮೊದಲ ದಿನ ಸಂತ್ರಸ್ತೆಯನ್ನು ಭೇಟಿ ಮಾಡಲಿಲ್ಲ. ಮರುದಿನ ಹಾಸನದ ಎಂಪಿ ನಿವಾಸಕ್ಕೆ ಪ್ರಜ್ವಲ್ ರೇವಣ್ಣ ಕರೆಸಿಕೊಂಡಿದ್ದಾರೆ. ನೆಲ ಮಹಡಿಯಲ್ಲಿ ಹೆಚ್ಚಿನ ಜನ ಇದ್ದರಿಂದ ಮೇಲ್ಮಹಡಿಯಲ್ಲಿ ಕಾಯುವಂತೆ ಹೇಳಿದ್ದಾರೆ. ಮೆಲ್ಮಹಡಿಯಲ್ಲಿ ಇನ್ನೂ ಕಲ ಮಹಿಳೆಯರು ಇದ್ದಾರೆ ಅವರ ಜೊತೆ ಕಾಯುವಂತೆ ಪ್ರಜ್ವಲ್ ರೇವಣ್ಣ ಸಂತ್ರಸ್ತೆಗೆ ಹೇಳಿದ್ದಾರೆ.
ಸ್ವಲ್ಪ ಸಮಯದ ನಂತರ ಮೇಲೆ ಬಂದ ಪ್ರಜ್ವಲ್ ರೇವಣ್ಣ ಮೊದಲು ಬಂದಿದ್ದ ಮಹಿಳೆಯರನ್ನು ಮಾತಾಡಿಸಿ ಕಳುಹಿಸಿದ್ದಾರೆ. ನಂತರ ನನ್ನನ್ನು ಕೋಣೆಯೊಳೆಗೆ ಕರೆದು, ಬಾಗಿಲು ಹಾಕಿ ಕೈ ಹಿಡಿದು ಎಳೆದು ಮೈಮೆಲೆ ಎಳೆದುಕೊಂಡರು. ಸಂತ್ರಸ್ತೆ ಕೂಗಿಕೊಳ್ಳುವುದಾಗಿ ಹೇಳಿದಾಗ, ಪ್ರಜ್ವಲ್ ರೇವಣ್ಣ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನಿನ್ನ ಗಂಡನಿಂದ ನನ್ನ ತಾಯಿಯ ಎಂಎಲ್ಎ ಟಿಕೆಟ್ ತಪ್ಪಿದೆ. ಅವನು ಜಾಸ್ತಿ ಮಾತಾಡುತ್ತಾನೆ ಸುಮ್ಮನೆ ಇರಲು ಹೇಳು. ನಂತರ ಬೆದರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಎಸಗುವ ವಿಡಿಯೋ ಮಾಡಿ ಪದೆ ಪದೇ ಸಹಕರಿಸುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ದಾಖಲಿಸಿದ್ದಾರೆ.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಹೆಚ್ಡಿ ರೇವಣ್ಣ
ತಮ್ಮ ಮನೆಯ ಮಹಿಳಾ ಕೆಲಸದಾಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಹೊಳೆನರಸೀಪುರ ಠಾಣೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಹಾಸನ ಮೂಲದ ಮಹಿಳೆ ಪ್ರಜ್ವಲ್ ರೇವಣ್ಣ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಎಸ್ಐಟಿಗೆ ಹೇಳಿಕೆ ನೀಡಿದ್ದರು. ಎಸ್ಐಟಿ ಹೇಳಿಕೆ ಆಧರಿಸಿ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದೆ.ಇದರ ಬೆನ್ನಲೇ ಇದೀಗ ಸಂತ್ರಸ್ತೆ ಪತಿ ಸಿಐಡಿಗೆ ದೂರು ನೀಡಿದ್ದು, ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಜಾಸ್ತಿಯಾಗಿದೆ.
ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ತಂದೆ-ಮಗನಿಗೆ ಎಸ್ಐಟಿ ನೋಟಿಸ್ ನೀಡಿದೆ. ಆದರೆ ಎಸ್ಐಟಿ ವಿಚಾರಣೆಗೆ ಹಾಜರಾಗದೆ ಕಾಲಾವಕಾಶ ಕೋರಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಎರಡನೇ ದೂರು ದಾಖಲಾಗಿರುವುದು ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ತೆಲೆನೋವಾಗಿದೆ.
ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಗುರುವಾರವೇ ತಿಳಿಸಿದ್ದಾರೆ. ಈ ಮಧ್ಯೆ, ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದರೂ ಅವರನ್ನು ಕರೆತಂದು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:50 pm, Fri, 3 May 24