ಶಕ್ತಿ ಯೋಜನೆ ಅವ್ಯವಸ್ಥೆ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್​​ಗೆ ಪಿಐಎಲ್​: ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 31, 2023 | 3:07 PM

Shakti Yojana: ಶಕ್ತಿ ಯೋಜನೆ ಜಾರಿಯಿಂದ ಕೆಲವರಿಗೆ ಅನುಕೂಲವಾದರೆ, ಮತ್ತೆ ಕೆಲವರಿಗೆ ಅನಾನುಕೂಲಗಳಾಗಿವೆ. ಮಹಿಳೆಯರ ಈ ಉಚಿತ ಬಸ್​ ಪ್ರಯಾಣ ಶಕ್ತಿ ಯೋಜನೆ ಅವ್ಯವಸ್ಥೆ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್​​ಗೆ ಪಿಐಎಲ್ ಸಲ್ಲಿಸಲಾಗಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದೆ.

ಶಕ್ತಿ ಯೋಜನೆ ಅವ್ಯವಸ್ಥೆ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್​​ಗೆ ಪಿಐಎಲ್​: ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಜುಲೈ 31: ಕಾಂಗ್ರೆಸ್​​ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್​ ಪ್ರಯಾಣ ‘ಶಕ್ತಿ ಯೋಜನೆ’ ಅವ್ಯವಸ್ಥೆ ಪ್ರಶ್ನಿಸಿ ಕಾನೂನು ವಿದ್ಯಾರ್ಥಿಗಳಿಂದ ಹೈಕೋರ್ಟ್​​ಗೆ ಪಿಐಎಲ್ (PIL)​ ಸಲ್ಲಿಸಲಾಗಿದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ ಅನುಕೂಲಗಳ ಜೊತೆಗೆ ಅನಾನುಕೂಲತೆಗಳು ಉಂಟಾಗಿವೆ. ಶಕ್ತಿ ಯೋಜನೆಯಿಂದ‌ ಬಸ್​​ಗಳಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಸಾರಿಗೆ ಬಸ್​​ಗಳಲ್ಲಿ ಸೀಟಿಗಾಗಿ ಹೊಡೆದಾಟ ನಡೆಯುತ್ತಿವೆ ಎಂದು ಪಿಐಎಲ್​ನಲ್ಲಿ ತಿಳಿಸಲಾಗಿದೆ.

ಹಿರಿಯ ನಾಗರಿಕರು ಮತ್ತು ಮಕ್ಕಳು ಬಸ್ ಹತ್ತಲಾಗುತ್ತಿಲ್ಲ. ಶಾಲಾ ಕಾಲೇಜು ಪರೀಕ್ಷೆಗಳಿಗೆ ಸರಿಯಾದ ವೇಳೆಗೆ ವಿದ್ಯಾರ್ಥಿಗಳು ತಲುಪಲಾಗುತ್ತಿಲ್ಲ. ಕೆಲವೆಡೆ ಬಸ್ ಹತ್ತಲಾಗದೇ ವಿದ್ಯಾರ್ಥಿಗಳು ಬಿದ್ದ ಘಟನೆಗಳು ಕೂಡ ವರದಿಯಾಗಿವೆ.

ಇದನ್ನೂ ಓದಿ: Shakti Yojana: ರಾಜ್ಯಾದ್ಯಂತ ನಾರಿ “ಶಕ್ತಿ” ಓಟ ಜೋರು, ಒಂದೇ ವಾರಕ್ಕೆ 100 ಕೋಟಿ ರೂ. ಟಿಕೆಟ್ ಮೊತ್ತ..!

ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮನವಿ

ಒಂದೇ ವಾರದಲ್ಲಿ ತೆರಿಗೆದಾರರ 100 ಕೋಟಿ ರೂ. ಹಣ ಶಕ್ತಿ ಯೋಜನೆಗೆ ಬಳಕೆಯಾಗಿದೆ. ಅಂದರೆ ವರ್ಷಕ್ಕೆ 3,200ರಿಂದ 3,400 ಕೋಟಿ ರೂ. ನಷ್ಟವಾಗಲಿದೆ. ಟಿಕೆಟ್ ಖರೀದಿಸಿದವರಿಗೆ ಶೇ.50ರಷ್ಟು ಸೀಟ್ ಮೀಸಲಿಡಬೇಕು ಎಂದಿದ್ದಾರೆ.

ಇದನ್ನೂ ಓದಿ: Shakti Yojana: ಅಂತರಾಜ್ಯದಲ್ಲಿ 20 ಕಿಮೀ ಮಾತ್ರ ಉಚಿತ ಪ್ರಯಾಣ, ಆದ್ರೆ ಷರತ್ತು ಅನ್ವಯ: ಸಿದ್ದರಾಮಯ್ಯ

ದೂರದ ಊರುಗಳಿಗೆ ನಿಂತು ಪ್ರಯಾಣಿಸಲು ಅವಕಾಶ ನೀಡಬಾರದು. ಮಕ್ಕಳು, ವೃದ್ಧರ ಬಸ್ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಪಿಐಎಲ್ ಮೂಲಕ ಹೈಕೋರ್ಟ್​ಗೆ ಕಾನೂನು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:04 pm, Mon, 31 July 23