AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರೂರು ದುರಂತ: ಒಂದು ವಾರ ಕಳೆದ್ರೂ ಪತ್ತೆಯಾದ ಮೂಳೆಗಳ ಡಿಎನ್​ಎ ವರದಿ ಬಂದಿಲ್ಲ, ವೈದ್ಯ ಸಿಬ್ಬಂದಿ ಎಡವಟ್ಟು

ವೈದ್ಯ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸಂಕಷ್ಟ ಶುರುವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಸೆಪ್ಟೆಂಬರ್ 30 ರಂದು ಕಾರ್ಯಾಚರಣೆ ವೇಳೆ ಪತ್ತೆಯಾಗಿದ್ದ ಮೂಳೆಗಳ ಡಿಎನ್​ಎ ವರದಿ ಒಂದು ವಾರ ಕಳೆದರೂ ಬಂದಿಲ್ಲ. ಹೆಚ್ಚಿನ ಕೆಮಿಕಲ್ ಬಳಕೆಯಿಂದ ವರದಿ ನೆಗೆಟಿವ್ ಬರುತ್ತಿದೆ.

ಶಿರೂರು ದುರಂತ: ಒಂದು ವಾರ ಕಳೆದ್ರೂ ಪತ್ತೆಯಾದ ಮೂಳೆಗಳ ಡಿಎನ್​ಎ ವರದಿ ಬಂದಿಲ್ಲ, ವೈದ್ಯ ಸಿಬ್ಬಂದಿ ಎಡವಟ್ಟು
ಶಿರೂರು ದುರಂತ: ಒಂದು ವಾರ ಕಳೆದ್ರೂ ಪತ್ತೆಯಾದ ಮೂಳೆಗಳ ಡಿಎನ್​ಎ ವರದಿ ಬಂದಿಲ್ಲ, ವೈದ್ಯ ಸಿಬ್ಬಂದಿ ಎಡವಟ್ಟು
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 07, 2024 | 3:11 PM

ಕಾರವಾರ, ಅಕ್ಟೋಬರ್​ 07: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ (Shiruru Hill Collapse) ಸಂಬಂಧಿಸಿದಂತೆ ಇತ್ತೀಚೆಗೆ ಕೇರಳ ಮೂಲಕ ಲಾರಿ ಚಾಲಕ ಅರ್ಜನ್​ ಶವ ಪತ್ತೆ ಆಗಿತ್ತು. ಬಳಿಕ ಮಾನವನ ದೇಹದ 2 ಮೂಳೆಗಳು ಪತ್ತೆ ಆಗಿದ್ದವು. ಬಳಿಕ ಅದನ್ನು ಡಿಎನ್ಎ ಟೆಸ್ಟ್​​ಗೆ ರವಾನೆ ಮಾಡಲಾಗಿತ್ತು. ಆದರೆ ಇದೀಗ ಒಂದು ವಾರ ಕಳೆದರೂ ಡಿಎನ್​ಎ ವರದಿ ಬಂದಿಲ್ಲ. ಹೀಗಾಗಿ ವೈದ್ಯ ಸಿಬ್ಬಂದಿಗಳು ಮಾಡಿದ ಎಡವಟ್ಟಿನಿಂದ ಜಿಲ್ಲಾಡಳಿತಕ್ಕೆ ಸಂಕಷ್ಟ ಎದುರಾಗಿದೆ.

ಸೆಪ್ಟೆಂಬರ್ 30 ರಂದು ಕಾರ್ಯಾಚರಣೆ ವೇಳೆ ಮೂಳೆಗಳು ಪತ್ತೆಯಾಗಿದ್ದವು. ಡಿಎನ್​ಎ ಪರೀಕ್ಷೆಗೆ ಕಳುಹಿಸುವಾಗ ಹೆಚ್ಚಿನ ಕೆಮಿಕಲ್ ಬಳಕೆ ಮಾಡಲಾಗಿದೆ. ಇದರಿಂದ ಡಿಎನ್​ಎ ವರದಿ ನೆಗೆಟಿವ್ ಬರುತ್ತಿದೆ. ಹುಬ್ಬಳ್ಳಿಯ ಎಫ್​ಎಸ್​ಎಲ್​ ಲ್ಯಾಬ್​ನಲ್ಲಿ ಕಳೆದ ಐದು ದಿನದಿಂದ ತಜ್ಞರು ನಿರಂತರ ಟೆಸ್ಟ್ ಮಾಡುತ್ತಿದ್ದಾರೆ. ಮೂಳೆಯ ಡಿಎನ್​ಎ ವರದಿ ಬರುವುದು ಇನ್ನಷ್ಟು ವ್ಯತ್ಯಯ ಆಗುವ ಸಾಧ್ಯತೆ ಇದೆ. ಕೆಮಿಕಲ್ ಹೆಚ್ಚಿಗೆ ಬಳಕೆಯಿಂದ ಡಿಎನ್​ಎ ವರದಿ ಬರುವುದ ಕಷ್ಟ ಎಂದು ಕೆಲವು ತಜ್ಞರು ಹೇಳುತ್ತಿದ್ದಾರೆ. ಕಣ್ಮರೆಯಾದವರ ಕುಟುಂಬಸ್ಥರ ಪ್ರಶ್ನೆಗೆ ಜಿಲ್ಲಾಡಳಿತ ಉತ್ತರಿಸಲಾಗದೆ ಸಂಕಷ್ಟಕ್ಕೆ ಸಿಲುಕೊಂಡಿದೆ.

ಇದನ್ನೂ ಓದಿ: ಶಿರೂರು ಭೂಕುಸಿತ ಪ್ರಕರಣ: ಗಂಗಾವಳಿ ನದಿಯಲ್ಲಿ ಮಾನವ ದೇಹದ 2 ಮೂಳೆ ಪತ್ತೆ

ಕಣ್ಮರೆಯಾದವರ ಶೋಧಕ್ಕಾಗಿ 91 ಲಕ್ಷ ರೂಪಾಯಿ ವೆಚ್ಚದಲ್ಲಿ ಗೋವಾ ಮೂಲದ ಡ್ರೆಜರ್ ಹಾಗೂ ಬಾರ್ಜ್ ಮೂಲಕ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಇದೆಲ್ಲದರ ಮಧ್ಯೆ ಕಣ್ಮರೆಯಾದ ಜಗನ್ನಾಥ್ ನಾಯ್ಕ್ ಮತ್ತು ಲೊಕೇಶ್ ನಾಯ್ಕ್ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿದೆ.

ಜಿಲ್ಲಾಡಳಿತ ನಮ್ಮ ತಂದೆಯ ಮರಣ ಪ್ರಮಾಣಪತ್ರ ನೀಡಲಿ: ಜಗನ್ನಾಥ್ ನಾಯ್ಕ್ ಪುತ್ರಿ ಮನಿಷಾ

ಕಣ್ಮರೆಯಾದ ಜಗನ್ನಾಥ್ ನಾಯ್ಕ್ ಪುತ್ರಿ ಮನಿಷಾ ಪ್ರತಿಕ್ರಿಯಿಸಿದ್ದು, ನಮ್ಮ ತಂದೆ ಕಣ್ಮರೆಯಾಗಿ ಎರಡು ತಿಂಗಳು ಕಳೆಯಿತು. ತಂದೆಯ ಶೋಧಕ್ಕಾಗಿ ಜಿಲ್ಲಾಡಳಿತ ಪ್ರಾಮಾಣಿಕವಾಗಿ ಬಹಳಷ್ಟು ಪ್ರಯತ್ನ ಮಾಡಿದೆ. ಆದರೆ ನಮ್ಮ ತಂದೆಯ ಸಾವಿನ ಬಗ್ಗೆ ಅಧಿಕೃತವಾಗಿ ಏನೂ ಸಿಕ್ಕಿಲ್ಲ. ಕಳೆದ ವಾರ ಶೋಧ ಕಾರ್ಯ ವೇಳೆ ಎರಡು ಮೂಳೆ ಪತ್ತೆ ಆಗಿತ್ತು. ಪತ್ತೆಯಾದ ಮೂಳೆಯ ಕುರಿತು ಇದುವರೆಗೂ ಡಿಎನ್​ಎ ವರದಿ ಕೂಡ ಬಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ನದಿಯಲ್ಲಿ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆ

ಮನೆಯಲ್ಲಿ ನಾವು ಮೂವರು ಹೆಣ್ಣು ಮಕ್ಕಳು ಇದ್ದೇವೆ. ಜಿಲ್ಲಾಡಳಿತಕ್ಕೆ ನಾನು ಕೈ ಮುಗಿದು ಮನವಿ ಮಾಡುತ್ತೇನೆ ತಂದೆಯ ಸಾವು ದೃಢ ಆಗದ ಹಿನ್ನೆಲೆ ಸರಕಾರದ ಯೋಜನೆ ಲಾಭ ನಮಗೆ ಸಿಗುತ್ತಿಲ್ಲ. ಜಿಲ್ಲಾಡಳಿತ ನಮ್ಮ ತಂದೆಯ ಮರಣ ಪ್ರಮಾಣಪತ್ರ ಕೊಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ