DC ಕಚೇರಿ ಮುಂದೆ ರೈತನ ಭಾರಿ ಹೈಡ್ರಾಮಾ: 25 ಲಕ್ಷ ರೂ. ಲಂಚ ಪಡೆದು ತಹಸೀಲ್ದಾರ್ ವಂಚಿಸಿದ ಆರೋಪ; 4 ಗಂಟೆ ಮರವೇರಿ ಪ್ರತಿಭಟಿಸಿದ ರೈತ
ಶಿವಮೊಗ್ಗ ಡಿಸಿ ಕಚೇರಿ ಮುಂದೆ ಭಾರಿ ಹೈಡ್ರಾಮಾ ನಡೆದಿದೆ. ವರ್ಗಾವಣೆಗೊಂಡ ತಹಸೀಲ್ದಾರ್ ರಾಜೀವ್ ವಿರುದ್ಧ 25 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿದೆ. ಭೂ ದಾಖಲೆ ವರ್ಗಾವಣೆಗಾಗಿ ರೈತರಿಂದ ಹಣ ಪಡೆದ ಆರೋಪವಿದ್ದು, 12 ಕುಟುಂಬಗಳ ಸದಸ್ಯರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ, ನ.11: ಜಿಲ್ಲೆಯ ಡಿಸಿ ಕಚೇರಿ ಮುಂದೆ ಭಾರಿ ಹೈಡ್ರಾಮಾ ನಡೆದಿದೆ. ವರ್ಗಾವಣೆಗೊಂಡಿರುವ ತಹಸೀಲ್ದಾರ್ ರಾಜೀವ್ ವಿರುದ್ಧ 25 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿದೆ. ಖಾತೆಗೆ ಪಹಣಿ ಮಾಡಿಕೊಡುವ ಸಲುವಾಗಿ ರಾಜೀವ್ ಅವರು 25 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ರೈತರು ಆರೋಪಿಸುತ್ತಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ರೈತರು ಡಿಸಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯ ಭಾಗವಾಗಿ, ರೈತ ನಾಗರಾಜ್ ಎಂಬುವವರು ಡಿಸಿ ಕಚೇರಿ ಆವರಣದಲ್ಲಿದ್ದ ಆಲದ ಮರವನ್ನೇ ಏಣಿ ಬಳಸಿ ಏರಿ, ನಾಲ್ಕು ಗಂಟೆಗಳ ಕಾಲ ಅಲ್ಲೇ ಕುಳಿತು ತಮ್ಮ ಪ್ರತಿಭಟನೆ ಮುಂದುವರಿಸಿದರು. 12 ಕುಟುಂಬಗಳ ಸದಸ್ಯರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದು, ತಹಸೀಲ್ದಾರ್ ರಾಜೀವ್ ತಮ್ಮ ಕೆಲಸ ಮಾಡಿಕೊಟ್ಟಿಲ್ಲ ಮತ್ತು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳ ಭರವಸೆಯ ನಂತರ ರೈತ ನಾಗರಾಜ್ ಅವರು ಮರದಿಂದ ಕೆಳಗೆ ಇಳಿದರು. ವರ್ಗಾವಣೆಗೊಂಡ ತಹಸೀಲ್ದಾರ್ ರಾಜೀವ್ ವಿರುದ್ಧ ರೈತರ ಆಕ್ರೋಶ ಮುಂದುವರೆದಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

