AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivamogga: ಯಡಿಯೂರಪ್ಪ-ಈಶ್ವರಪ್ಪ ಭೇಟಿ: ಟಿಫನ್​ ಬ್ರೇಕ್​ನಲ್ಲಿ ಒಂದಾದ ಕುಚಿಕು ಗೆಳೆಯರು

ಬಿಎಸ್ ಯಡಿಯೂರಪ್ಪ ಜೊತೆ ಬೆಳಗಿನ ಉಪಹಾರ ಸೇವಿಸಿದ ಸಚಿವ ಕೆ ಎಸ್ ಈಶ್ವರಪ್ಪ ಪ್ರಸಕ್ತ ರಾಜಕೀಯ ಚಟುವಟಿಕೆ ಹಾಗೂ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಸವಿಸ್ತಾರ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.

Shivamogga: ಯಡಿಯೂರಪ್ಪ-ಈಶ್ವರಪ್ಪ ಭೇಟಿ: ಟಿಫನ್​ ಬ್ರೇಕ್​ನಲ್ಲಿ ಒಂದಾದ ಕುಚಿಕು ಗೆಳೆಯರು
ಯಡಿಯೂರಪ್ಪ-ಈಶ್ವರಪ್ಪ ಭೇಟಿ: ಟಿಫನ್​ ಬ್ರೇಕ್​ನಲ್ಲಿ ಒಂದಾದ ಕುಚಿಕು ಗೆಳೆಯರು
TV9 Web
| Edited By: |

Updated on:Aug 28, 2021 | 11:49 AM

Share

ಶಿವಮೊಗ್ಗ: ಜಸ್ಟ್​ ತಿಂಗಳ ಹಿಂದೆ ನಾನಾ ಕಾರಣಗಳಿಂದ ಪರಸ್ಪರ ದುಸುಮುಸು ಅನ್ನುತ್ತಿದ್ದ ಕರ್ನಾಟಕ ರಾಜಕೀಯದ ಭಲೇ ಜೋಡಿ ಬಿ ಎಸ್​ ಯಡಿಯೂರಪ್ಪ ಮತ್ತು ಕೆ ಎಸ್ ಈಶ್ವರಪ್ಪ ಇಂದು ಒಟ್ಟಿಗೇ ಕುಳಿತು ಬೆಳಗಿನ ಉಪಹಾರ ಸೇವಿಸಿದ್ದಾರೆ. ಛಲದಂಕಮಲ್ಲರಾದ ಇಬ್ಬರೂ ಶಿವಮೊಗ್ಗದಲ್ಲಿ ಭೇಟಿಯಾಗಿ ಉಭಯಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಸಂಸದ ಬಿ ವೈ ರಾಘವೇಂದ್ರ (BY Raghavendra) ಇದಕ್ಕೆ ಸಾಕ್ಷಿಯಾಗಿದ್ದು, ವಿಶೇಷವಾಗಿತ್ತು.

ಹೌದು ರಾಜಕೀಯ ಸೇರಿದಂತೆ ರಾಜ್ಯಪಾಲರ ಬಳಿಗೆ ದೂರು ಕೊಂಡೊಯ್ಯುವವರೆಗೂ ಅನೇಕ ಜ್ವಲಂತ ವಿಚಾರಗಳ ಸಮ್ಮುಖದಲ್ಲಿ ಕುಚಿಕು ಗೆಳೆಯರ ನಡುವೆ ಈ ಮಧ್ಯ ಸಂಬಂಧ ಹಳಸಿತ್ತು. ಆದರೆ ಇಂದು ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ನಿವಾಸಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಭೇಟಿ ನೀಡಿದ್ದರು.

ಬಿಎಸ್ ಯಡಿಯೂರಪ್ಪ ಜೊತೆ ಬೆಳಗಿನ ಉಪಹಾರ ಸೇವಿಸಿದ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಪ್ರಸಕ್ತ ರಾಜಕೀಯ ಚಟುವಟಿಕೆ ಹಾಗೂ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಸವಿಸ್ತಾರ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.

bs yediyurappa and ks eshwarappa meet in shimoga 2

ಶಿವಮೊಗ್ಗದ ವಿನೋಬಾ ನಗರದಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಭೇಟಿ ನೀಡಿದ್ದರು

ಇದನ್ನೂ ಓದಿ:

ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯ ನೀರು! ಇದು ಇಂದು ನಿನ್ನೆಯ ಕಥೆಯಲ್ಲ ಶಿವಮೊಗ್ಗ: ಪ್ರೇಯಸಿಯನ್ನು ಕೊಂದ ಕೊಲೆಗಾರನ ಸಾವು; ಏಳು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ (bs yediyurappa and ks eshwarappa meet in shimoga)

Published On - 11:48 am, Sat, 28 August 21