ಮಲೆನಾಡು ಅಭಿವೃದ್ಧಿಗೋಸ್ಕರ ಯಡಿಯೂರಪ್ಪ ಸಿಎಂ ಆಗಿ ಉಳಿಬೇಕು; ಆದರೆ, ರಾಜೀನಾಮೆ ಪಕ್ಕಾ ಅನ್ನಿಸ್ತಿದೆ – ಬೇಳೂರು

ಮಲೆನಾಡು ಜಿಲ್ಲೆಗಳ ಅಭಿವೃದ್ಧಿ ಆಗಬೇಕೆಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಆದರೆ, ಬಿಜೆಪಿ ಅಧ್ಯಕ್ಷ ನಳಿನ್​ಕುಮಾರ್ ಕಟೀಲ್​ರ ಆಡಿಯೋ ಕೇಳಿಸಿಕೊಂಡರೆ ಯಡಿಯೂರಪ್ಪ ರಾಜೀನಾಮೆ ಪಕ್ಕಾ ಎಂದೆನಿಸುತ್ತದೆ. ಅದು ನಳಿನ್​ಕುಮಾರ್ ಕಟೀಲ್ ಧ್ವನಿಯೇ ಆಗಿದೆ. ಅವರ ನಗುವನ್ನು ಅನುಕರಣೆ ಮಾಡಲು ಆಗುವುದಿಲ್ಲ: ಬೇಳೂರು ಗೋಪಾಲಕೃಷ್ಣ

ಮಲೆನಾಡು ಅಭಿವೃದ್ಧಿಗೋಸ್ಕರ ಯಡಿಯೂರಪ್ಪ ಸಿಎಂ ಆಗಿ ಉಳಿಬೇಕು; ಆದರೆ, ರಾಜೀನಾಮೆ ಪಕ್ಕಾ ಅನ್ನಿಸ್ತಿದೆ - ಬೇಳೂರು
ಬೇಳೂರು ಗೋಪಾಲಕೃಷ್ಣ
TV9kannada Web Team

| Edited By: Skanda

Jul 21, 2021 | 12:33 PM

ಶಿವಮೊಗ್ಗ: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಎದ್ದಿರುವ ಕೂಗಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ (Belur Gopalakrishna), ಬಿ.ಎಸ್.ಯಡಿಯೂರಪ್ಪ (BS Yediyurappa) ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಮಲೆನಾಡು ಜಿಲ್ಲೆಗಳ ಅಭಿವೃದ್ಧಿಗಾಗಿ ಅವರು ಮುಖ್ಯಮಂತ್ರಿ (Karnataka Chief Minister) ಸ್ಥಾನದಲ್ಲಿ ಇರಬೇಕು ಎಂದು ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯದ ಜನರ ಸಮಸ್ಯೆ ಆಲಿಸುವ ಬದಲು ತನ್ನದೇ ಸಮಸ್ಯೆಯಲ್ಲಿ ಮುಳುಗಿದೆ. ಜನರು ಬಿಜೆಪಿಯವರ ಸಮಸ್ಯೆಯನ್ನು ಕೇಳಲು ಸಿದ್ಧರಿಲ್ಲ. ಜನರ ಸಮಸ್ಯೆಯನ್ನು ಬಿಜೆಪಿಯವರು (BJP) ಕೇಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮಲೆನಾಡು ಜಿಲ್ಲೆಗಳ ಅಭಿವೃದ್ಧಿ ಆಗಬೇಕೆಂದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು. ಆದರೆ, ಬಿಜೆಪಿ ಅಧ್ಯಕ್ಷ ನಳಿನ್​ಕುಮಾರ್ ಕಟೀಲ್​ರ ಆಡಿಯೋ ಕೇಳಿಸಿಕೊಂಡರೆ ಯಡಿಯೂರಪ್ಪ ರಾಜೀನಾಮೆ ಪಕ್ಕಾ ಎಂದೆನಿಸುತ್ತದೆ. ಅದು ನಳಿನ್​ಕುಮಾರ್ ಕಟೀಲ್ ಧ್ವನಿಯೇ ಆಗಿದೆ. ಅವರ ನಗುವನ್ನು ಅನುಕರಣೆ ಮಾಡಲು ಆಗುವುದಿಲ್ಲ ಎಂದು ಬೇಳೂರು ಗೋಪಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ನಳಿನ್​ಕುಮಾರ್ ಕಟೀಲ್​ ನಗುವನ್ನು ಯಾರಿಂದಲೂ ಮಿಮಿಕ್ರಿ ಮಾಡಲು ಸಾಧ್ಯವಿಲ್ಲ. ಆಡಿಯೋದಲ್ಲಿರುವುದು ಅವರದ್ದೇ ಧ್ವನಿ ಎಂದು ಈಶ್ವರಪ್ಪಗೂ ತಿಳಿದಿದೆ. ಹೀಗಾಗಿ ಅವರು ಕೂಡಾ ಅಧಿಕಾರಕ್ಕೆ ಗೂಟ ಹೊಡೆದು ಕೂರಲ್ಲ ಎಂದಿದ್ದಾರೆ. ಕಟೀಲ್​ ಮಾತನಾಡಿರುವುದು ಕೇಳಿಸಿಕೊಂಡರೆ, ಯಡಿಯೂರಪ್ಪ ರಾಜೀನಾಮೆ ನೀಡುವುದು ಪಕ್ಕಾ ಅನಿಸುತ್ತದೆ ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.

ಇದೇ ವೇಳೆ ಮಲೆನಾಡಿನ ಸಮಸ್ಯೆಗಳ ಬಗ್ಗೆ ಮಾತನಾಡಿರುವ ಅವರು, ನಾಲ್ಕು ಬಲಿಷ್ಠ ಕಂಪನಿಗಳಿದ್ದರೂ, ಶರಾವತಿ ಮುಳುಗಡೆ ಭಾಗದ ಗ್ರಾಮಸ್ಥರಿಗೆ ಮೊಬೈಲ್ ನೆಟ್​ವರ್ಕ್ ಸಮಸ್ಯೆ ಇದೆ. ಸಾಗರದ ತುಮರಿ, ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ನೆಟ್​ವರ್ಕ್ ಇಲ್ಲದೇ, ಜನರಿಗೆ ತೊಂದರೆಯಾಗಿದೆ. ಮೋದಿಯವರ ಡಿಜಿಟಲ್ ಇಂಡಿಯಾ ಎಲ್ಲಿ ಹೋಗಿದೆ? ಮಲೆನಾಡು ಭಾಗದ ಮಕ್ಕಳು ಇಂಟರ್ನೆಟ್ ಇಲ್ಲದೇ, ಆನ್ ಲೈನ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನು ಸರಿಪಡಿಸುವತ್ತ ಗಮನವೇ ಇಲ್ಲ ಎಂದು ಗುಡುಗಿದ್ದಾರೆ.

ಸಂಸದ ರಾಘವೇಂದ್ರಗೆ ಬರೀ ಶೋ ಕೊಡುವುದೇ ಕೆಲಸವಾಗಿದೆ. ಅವರು ಬಸ್ಟ್ಯಾಂಡ್ ರಾಘು. ಕೇವಲ ಶೋಕಿ ಹೇಳಿಕೆ ನೀಡುವುದೇ ಕೆಲಸ. ಭಾರತ ವಿಶ್ವಗುರು ಎನ್ನುವ ಬಿಜೆಪಿ ನಾಯಕರಿಗೆ ಇಲ್ಲಿ ಸರಿಯಾಗಿ ನೆಟ್​ವರ್ಕ್ ನೀಡಲು ಯೋಗ್ಯತೆ ಇಲ್ಲ. ಎಲ್ಲಿಯೂ ಸರಿಯಾಗಿ ಕೊರೊನಾ ಲಸಿಕೆ ಸಿಗುತ್ತಿಲ್ಲ. ಆದರೆ, ನರೇಂದ್ರ ಮೋದಿಯವರು, ಲಸಿಕೆ ತೆಗೆದುಕೊಂಡವರು ಬಾಹುಬಲಿ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

(BS Yediyurappa should be in Chief Minister post for the development of Malnad Region but situations may not permit says Belur Gopalakrishna) ಇದನ್ನೂ ಓದಿ: ಶಾಸಕಾಂಗ ಸಭೆ ರದ್ದಾದರೆ ಯಡಿಯೂರಪ್ಪ ಪದಚ್ಯುತಿ ಸಲೀಸು; ಸಿಎಂ ಬೆಂಬಲಿಗರ ಬಾಯಿ ಮುಚ್ಚಿಸಲು ಮಾಸ್ಟರ್ ಪ್ಲ್ಯಾನ್? 

ಮೊಬೈಲ್ ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕೆ ಕ್ರಮ; ಸಚಿವ ಸುರೇಶ್ ಕುಮಾರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada