Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಗರದ ನೂತನ ಕೃಷಿ ವಿವಿಗೆ ಕೆಳದಿ ಶಿವಪ್ಪ ನಾಯಕ ವಿವಿ ಎಂದು ನಾಮಕರಣ: ಬಿಎಸ್​ವೈ ನಿರ್ಧಾರಕ್ಕೆ ವೀರಶೈವ ಸಮುದಾಯದ ಮೆಚ್ಚುಗೆ

ಶಿವಮೊಗ್ಗ ನಾಯಕ ವೃತ್ತದಲ್ಲಿ ವೀರಶೈವ ಸಮಾಜದ ಮುಖಂಡರು ಹರ್ಷೋದ್ಘಾರ ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಶ್ರೀ ಮತ್ತು ಬಸವಕೇಂದ್ರದ ಬಸವಮರಳುಸಿದ್ದ ಸ್ವಾಮೀಜಿ ಕೂಡಾ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಾಗರದ ನೂತನ ಕೃಷಿ ವಿವಿಗೆ ಕೆಳದಿ ಶಿವಪ್ಪ ನಾಯಕ ವಿವಿ ಎಂದು ನಾಮಕರಣ: ಬಿಎಸ್​ವೈ ನಿರ್ಧಾರಕ್ಕೆ ವೀರಶೈವ ಸಮುದಾಯದ ಮೆಚ್ಚುಗೆ
ಬಿಎಸ್ ಯಡಿಯೂರಪ್ಪ
Follow us
TV9 Web
| Updated By: Skanda

Updated on:Jul 28, 2021 | 1:14 PM

ಶಿವಮೊಗ್ಗ: ಸಾಗರ ತಾಲ್ಲೂಕಿನ ಇರುವಕ್ಕಿಯಲ್ಲಿ ನಿರ್ಮಾಣವಾಗುವ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಎಂದು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಈ ಆದೇಶಕ್ಕೆ ವೀರಶೈವ ಸಮಾಜದ ಮುಖಂಡರು ಸಂಭ್ರಮಿಸಿದ್ದಾರೆ. ಶಿವಮೊಗ್ಗ ನಾಯಕ ವೃತ್ತದಲ್ಲಿ ವೀರಶೈವ ಸಮಾಜದ ಮುಖಂಡರು ಹರ್ಷೋದ್ಘಾರ ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಶ್ರೀ ಮತ್ತು ಬಸವಕೇಂದ್ರದ ಬಸವಮರಳುಸಿದ್ದ ಸ್ವಾಮೀಜಿ ಕೂಡಾ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಯಡಿಯೂರಪ್ಪ ಒಬ್ಬ ಅತ್ಯುತ್ತಮ ಆಡಳಿತಗಾರ. ಮಲೆನಾಡಿನಲ್ಲಿ ಅತ್ಯುತ್ತಮ ಆಡಳಿತ ನೀಡಿದ ಅರಸ ಶಿವಪ್ಪ ನಾಯಕ. ಅವರು ರೈತರಿಗೆ ಅತ್ಯುತ್ತಮ ಸೌಲಭ್ಯ ಮತ್ತು ವ್ಯವಸ್ಥೆ ಕಲ್ಪಿಸಿದ್ದರು. ಯಡಿಯೂರಪ್ಪ ಹಾಗೂ ಸರ್ಕಾರ ಅವರನ್ನು ಸ್ಮರಿಸಿಕೊಂಡು ಸಾಗರ ತಾಲ್ಲೂಕಿನ ಇರುವಕ್ಕಿಯ ನೂತನ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಅವರ ಹೆಸರಿಟ್ಟಿದ್ದಾರೆ. ಇದು ಅತ್ಯಂತ ಸಮಂಜಸ ನಿರ್ಧಾರ ಎಂದು ಶ್ರೀಗಳು ತಿಳಿಸಿದ್ದಾರೆ.

ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯಕ್ಕೆ ಶಿವಪ್ಪ ನಾಯಕ ಕೃಷಿ ವಿವಿ ಎಂದು ಜುಲೈ 24ರಂದು ಯಡಿಯೂರಪ್ಪ ನಾಮಕರಣ ಮಾಡಿದ್ದಾರೆ. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಎಂದು ಹೆಸರಿಸಿದ ಅವರು, 2 ವರ್ಷ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಅಭಿವೃದ್ಧಿಗೆ ಗರಿಷ್ಠ ಪ್ರಯತ್ನ ಮಾಡಿದ ತೃಪ್ತಿ ನನಗಿದೆ ಎಂದು ಹೇಳಿದ್ದರು. ಬಳಿಕ ಶಿವಮೊಗ್ಗ ಜಿಲ್ಲೆಯ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ವರ್ಚುವಲ್ ವಿಧಾನದ ಮೂಲಕ ಭಾಗಿಯಾಗಿದ್ದರು.

ಜತೆಗೆ, ಏಪ್ರಿಲ್ ವೇಳೆಗೆ ಶಿವಮೊಗ್ಗ ಏರ್‌ಪೋರ್ಟ್‌ ಕಾರ್ಯಾರಂಭ ಆಗಲಿದೆ ಎಂದೂ ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಸುಮಾರು 1,074 ಕೋಟಿ ರೂ ವೆಚ್ಚದ ಕಾಮಗಾರಿಗಳ ಉದ್ಘಾಟನೆಯನ್ನು ಅವರು ಅಂದು ನೆರವೇರಿಸಿದ್ದು, 560ಕೋಟಿ ರೂ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದರು.

(BSY named new agricultural University in Shivamogga district as Keladi Shivappa Nayaka university)

ಇದನ್ನೂ ಓದಿ: ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಎಂದು ಹೆಸರು ಘೋಷಿಸಿದ ಬಿಎಸ್ ಯಡಿಯೂರಪ್ಪ 

ಕೃಷಿ ವಿಶ್ವ ವಿದ್ಯಾಲಯದಲ್ಲಿ ಕಲಿಕೆ ಜತೆಗೆ ಗಳಿಕೆ- ಕಲ್ಯಾಣ ಕರ್ನಾಟಕ ಭಾಗದ ಅನ್ನದಾತರ ಪಾಲಿಗೆ ಜೀವಾಳ

Published On - 12:59 pm, Wed, 28 July 21

ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ
2 ಕೋಟಿ ಹಣ ಬೇಕು ಶಿವ, ಹುಂಡಿಯಲ್ಲಿ ಸಿಕ್ತು ಬೇಡಿಕೆ ಪತ್ರ