ಶಿವಮೊಗ್ಗ ಈದ್ ಗಲಾಟೆ: ಠಾಣಾಧಿಕಾರಿ ಸೇರಿ ಮೂವರು ಪೋಲಿಸ್ ಕಾನ್ಸ್ಟೇಬಲ್ ಅಮಾನತು
ಈದ್ ಮಿಲಾದ್(Eid-Milad) ಮೆರವಣಿಗೆ ವೇಳೆ ನಗರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ. ಶಿವಮೊಗ್ಗ (Shivamogga) ಎಸ್ಪಿ ಜಿ.ಕೆ ಮಿಥುನ್ ಕುಮಾರ್ ಸಲ್ಲಿಸಿದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
ಶಿವಮೊಗ್ಗ, ಅ.08: ಈದ್ ಮಿಲಾದ್(Eid-Milad) ಮೆರವಣಿಗೆ ವೇಳೆ ನಗರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ. ಶಿವಮೊಗ್ಗ (Shivamogga) ಎಸ್ಪಿ ಜಿ.ಕೆ ಮಿಥುನ್ ಕುಮಾರ್ ಸಲ್ಲಿಸಿದ ವರದಿ ಆಧರಿಸಿ, ರಾಗಿಗುಡ್ಡ ಗಲಾಟೆ ನಿಭಾಯಿಸಲು ವಿಫಲವಾದ ಹಿನ್ನಲೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಅವರು ಪೋಲಿಸ್ ಠಾಣಾಧಿಕಾರಿ ಅಭಯ ಪ್ರಕಾಶ್ ಸೇರಿ ಕಾನ್ಸ್ಟೇಬಲ್ಗಳಾದ ಕಾಶಿನಾಥ್, ರಂಗನಾಥ್ ಹಾಗೂ ಶಿವರಾಜ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಘಟನೆ ವಿವರ
ಇದೇ ಅಕ್ಟೋಬರ್ 1 ರಂದು ಶಿವಮೊಗ್ಗದಲ್ಲಿ ಅದ್ಧೂರಿ ಈದ್ ಮಿಲಾದ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಅಷ್ಟೇ ಅಲ್ಲದೆ ಕೆಲ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ಕೂಡಲೇ ಶಿವಮೊಗ್ಗದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದರು. ಇನ್ನು ಉದ್ವಿಗ್ನ ಪರಿಸ್ಥಿತಿ ನಿಭಾಯಿಸಲು ತೆಗೆದುಕೊಂಡ 144 ಸೆಕ್ಷನ್ ಜಾರಿಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಹೌದು, ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲದೆ ಬೇಕರಿ ಐಟಂಗಳು ಹಾಳಾಗಿ, ಸಾಲ ಮಾಡಿ ತಂದಿದ್ದ ಸ್ವೀಟ್ಸ್ , ಬ್ರೆಡ್ಗಳಿಗೆಲ್ಲಾ ಬೂಸ್ಟ್ ಬಂದು ಹಾಳಾಗಿತ್ತು.
ಇದನ್ನೂ ಓದಿ:ಶಿವಮೊಗ್ಗ ಗಲಾಟೆ: ಹರಿಹರ ಬ್ರಹ್ಮ ಬಂದರೂ ಹಿಂದುತ್ವ ಹತ್ತಿಕ್ಕಲು ಆಗುವುದಿಲ್ಲ; ಶಾಸಕ ಚನ್ನಬಸಪ್ಪ
ಇನ್ನುಗಲಾಟೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಊಹಾಪೋಹ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದ್ದರು. ಈ ಘಟನೆಗೆ ಸಂಬಂಧಿಸದಂತೆ ರಾಗಿಗುಡ್ಡದಲ್ಲಿ ಯಾರೋ ಒಬ್ಬರನ್ನು ಎನ್ ಕೌಂಟರ್ ಮಾಡಲಾಗಿದೆ ಎನ್ನುವ ಊಹಾಪೋಹ ಹರಿದಾಡಿತ್ತು. ಈ ಹಿನ್ನಲೆ ಆ ರೀತಿ ಊಹಾಪೋಹಗಳ ಕುರಿತು ಈಗಾಗಲೇ ನಾವು ಸ್ಪಷ್ಟನೆಯನ್ನ ಪಡೆದುಕೊಂಡಿದ್ದೇವೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:28 pm, Sun, 8 October 23