AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರದಲ್ಲೇ ಭದ್ರಾವತಿ ಆಕಾಶವಾಣಿಗೆ ಎಫ್.ಎಂ. ರೇಡಿಯೋ ಆರಂಭ -ಸಂಸದ ಬಿ.ವೈ. ರಾಘವೇಂದ್ರ

ಭದ್ರಾವತಿಯ ಆಕಾಶವಾಣಿಗೆ ಎಫ್.ಎಂ ರೇಡಿಯೋ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದಂತೆ ಈಗ ತರಲಾಗುತ್ತಿದೆ. ಶಿವಮೊಗ್ಗದ ಚಿತ್ರಣವನ್ನು ಜಗತ್ತಿನ ಮುಂದಿಡಲು ಪ್ರಯತ್ನ ಮಾಡಲಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

ಶೀಘ್ರದಲ್ಲೇ ಭದ್ರಾವತಿ ಆಕಾಶವಾಣಿಗೆ ಎಫ್.ಎಂ. ರೇಡಿಯೋ ಆರಂಭ -ಸಂಸದ ಬಿ.ವೈ. ರಾಘವೇಂದ್ರ
ಸಂಸದ ಬಿ.ವೈ. ರಾಘವೇಂದ್ರ
Basavaraj Yaraganavi
| Updated By: ಆಯೇಷಾ ಬಾನು|

Updated on: Jul 29, 2023 | 2:48 PM

Share

ಶಿವಮೊಗ್ಗ, ಜುಲೈ 29: ಭದ್ರಾವತಿಯ ಆಕಾಶವಾಣಿ ಕೇಂದ್ರಕ್ಕೆ ಎಫ್​ಎಂ ರೇಡಿಯೋ ಪ್ರಾರಂಭಕ್ಕೆ ಕೇಂದ್ರ ಅನುಮೋದನೆ ನೀಡಿದೆ. ಶೀಘ್ರದಲ್ಲೇ ಎಫ್​ಎಂ ರೇಡಿಯೋವನ್ನು(FM Radio) ಪ್ರಾರಂಭ ಮಾಡಲಾಗುವುದು ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ(BY Raghavendra) ತಿಳಿಸಿದರು.

ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಭದ್ರಾವತಿಯ ಆಕಾಶವಾಣಿಗೆ ಎಫ್.ಎಂ ರೇಡಿಯೋ ತರುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದಂತೆ ಈಗ ತರಲಾಗುತ್ತಿದೆ. ಶಿವಮೊಗ್ಗದ ಚಿತ್ರಣವನ್ನು ಜಗತ್ತಿನ ಮುಂದಿಡಲು ಪ್ರಯತ್ನ ಮಾಡಲಾಗುತ್ತದೆ. ಈ ಮೂಲಕ ನಮ್ಮ‌ ಕ್ಷೇತ್ರವನ್ನು ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಪರಿಚಯಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ಇನ್ನು 10 ಕಿಲೋ ವ್ಯಾಟ್​ ಟ್ರಾನ್ಸ್​ಮೀಟರ್​ ಅಳವಡಿಕೆಗೆ ಪ್ರಸಾರ ಭಾರತಿ ಮಂಜೂರು ನೀಡಿದೆ. ಇದಕ್ಕೆ ಕೇಂದ್ರ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿದೆ. ಎಫ್.ಎಂ ರೇಡಿಯೋ ಕೇಂದ್ರಕ್ಕೆ ಅನುಮೋದನೆ ನೀಡಿದ ಕೇಂದ್ರದ ಸಚಿವರಿಗೆ ಅಭಿನಂದನೆಗಳು.

ಟ್ರಾನ್ಸ್​ಮೀಟರ್​ನ್ನು ಶಿವಮೊಗ್ಗ ನಗರದ ವಿದ್ಯಾನಗರದ ದೂರದರ್ಶನ ಟವರ್ ಮೇಲೆ ಅಳವಡಿಸಲಾಗುತ್ತದೆ. ಇರುವಂತಹ ವ್ಯವಸ್ಥೆ ಬಳಸಿಕೊಂಡು ಟ್ರಾನ್ಸ್​ಮೀಟರ್ ಅಳವಡಿಸಿಕೊಳ್ಳಲಾಗುತ್ತದೆ. ಭದ್ರಾವತಿ ಆಕಾಶವಾಣಿ ಕೇಂದ್ರ ಎಂದಿನಂತೆ ಹಾಗೆ ಇರುತ್ತದೆ. ಪ್ರಸಾರ, ರೆಕಾರ್ಡಿಂಗ್ ಎಲ್ಲವೂ ಭದ್ರಾವತಿಯಲ್ಲಿ ನಡೆಯಲಿದೆ. ಶಿವಮೊಗ್ಗ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯ ವ್ಯಾಪ್ತಿಗೆ ಎಫ್​ಎಂ ರೇಡಿಯೋ ಬರುತ್ತದೆ. ಭದ್ರಾವತಿಯಲ್ಲಿ ಈಗಾಗಲೇ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಮೂರು ನಾಲ್ಕು ಪ್ರದೇಶಕ್ಕೆ ಮಾತ್ರ 10 ಕಿಲೋ ವ್ಯಾಟ್ ಟ್ರಾನ್ಸಮೀಟರ್ ಸಿಕ್ಕಿದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆ ಕೂಡಾ ಸೇರ್ಪಡೆ ಆಗಿದೆ.

ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11 ರಿಂದ ಕಾರ್ಯಾರಂಭ: ಎಂಬಿ ಪಾಟೀಲ್​​

ಕೇಂದ್ರದ ಪ್ರಸಾರ ಭಾರತಿಯ ವರುಣ್ ತ್ರಿವೇದಿ ಅವರಿಗೆ ಮನವಿ ಮಾಡಲಾಗಿದೆ. ಎಫ್ ಎಂ ರೇಡಿಯೋ ಟ್ರಾನ್ಸ್​ ಮೀಟರ್ ಟೆಂಡರ್​ನ್ನು ಡಿಸೆಂಬರ್ ಒಳಗೆ ಕರೆಯಬೇಕಾಗಿ ವಿನಂತಿ ಮಾಡಿಕೊಂಡಿದ್ದೇವೆ. ಟೆಂಡರ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರೆದು ಅಳವಡಿಸಲಾಗುವುದು. ಈಗ ಸಿಬ್ಬಂದಿಗಳನ್ನು ನೇಮಕ ಮಾಡುವ ಕೆಲಸ ಆಗುತ್ತಿದೆ ಎಂದರು.

ಆ. 31ರಿಂದ ಶಿವಮೊಗ್ಗದಲ್ಲಿ ವಿಮಾನ ಹಾರಾಟ ಆರಂಭ

ಇನ್ನು ಶಿವಮೊಗ್ಗ ನೂತನ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸಂಬಂಧ ಸಚಿವ ಎಂ.ಬಿ. ಪಾಟೀಲ ಹೇಳಿಕೆ ನೀಡಿದ್ದಾರೆ. ಬಿಟಿಸಿ ಲೈಸನ್ಸ್ ನೀಡಿದ್ದರು. ಲೈಸನ್ಸ್ ಅವರು ವಾಪಸ್ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಆ. 31ರಿಂದ ಶಿವಮೊಗ್ಗದಲ್ಲಿ ವಿಮಾನ ಹಾರಾಟ ಆರಂಭಿಸಲಿದೆ. ಕೇಂದ್ರ ಸೂಚನೆಯಂತೆ ಈಗ ಕಡ್ಡಾಯವಾಗಿ ಬಾಂಬ್ ಸ್ಕ್ವಾಡ್ ವಿಮಾನ ನಿಲ್ದಾಣದಲ್ಲಿ ಇರಬೇಕು. ಈ ಹಿನ್ನಲೆಯಲ್ಲಿ ವಿಮಾನ ಹಾರಾಟ ವಿಳಂಬ ಆಗಿದೆ. ಆರ್​ಸಿಎಸ್ ರೂಟ್ ಉಡಾನ್ ಯೋಜನೆಯಲ್ಲಿ ತಿರುಪತಿ, ಹೈದರಾಬಾದ್, ಗೋವಾಕ್ಕೆ ಶಿವಮೊಗ್ಗದಿಂದ ವಿಮಾನ ಹಾರಾಡಲಿವೆ. ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ಇಂಡಿಗೋ ಮೊದಲು ವಿಮಾನ ಹಾರಾಟ ಆಗಲಿದೆ. ಶಿವಮೊಗ್ಗ ದಿಂದ ಮುಂಬೈಗೂ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಶಿವಮೊಗ್ಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ