ಹಿಂದುತ್ವದ ಬಗ್ಗೆ ಯಾರು ಅಪಮಾನ ಮಾಡುತ್ತಾರೋ ಅಂತಹವರಿಗೆ ಈ ದೇಶದಲ್ಲಿ ಸ್ಥಾನಮಾನ ಇರಲ್ಲ: ಜಾರಕಿಹೊಳಿ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಸತೀಶ್ ಹೇಳಿಕೆಯನ್ನು ಅವರ ಪಕ್ಷದ ನಾಯಕರೇ ಖಂಡಿಸಿದ್ದಾರೆ. ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದೆ ಎಂದು ಹೇಳಿದ್ದಾರೆಂದರು. ನಿಮ್ಮ ರಾಷ್ಟ್ರೀಯ ನಾಯಕರಿಗಿಂತ ನೀನು ದೊಡ್ಡ ಮನುಷ್ಯನಾ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಶಿವಮೊಗ್ಗ: ಹಿಂದೂ, ಹಿಂದುತ್ವದ ಬಗ್ಗೆ ಯಾರು ಅಪಮಾನ ಮಾಡುತ್ತಾರೋ ಅಂತಹವರಿಗೆ ಈ ದೇಶದಲ್ಲಿ ಸ್ಥಾನಮಾನ ಇರಲ್ಲ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (satish jarkiholi) ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ವಾಗ್ದಾಳಿ ಮಾಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ರಾಮಾಯಣ ಬರೆದು ಪ್ರಪಂಚಕ್ಕೆ ಪ್ರಖ್ಯಾತಿ ಆಗಿದ್ದಾರೆ. ವಾಲ್ಮೀಕಿ ರಕ್ತ ಹಂಚಿಕೊಂಡು ಹುಟ್ಟಿದ ಸತೀಶ್ರಿಂದ ರಾಮಾಯಣ, ಮಹಾಭಾರತಕ್ಕೆ ಅಪಮಾನವಾಗಿದೆ. ಸತೀಶ್ ಹೇಳಿಕೆಯನ್ನು ಅವರ ಪಕ್ಷದ ನಾಯಕರೇ ಖಂಡಿಸಿದ್ದಾರೆ. ಒತ್ತಾಯಕ್ಕೆ ಮಣಿದು ಕ್ಷಮೆ ಕೇಳಿದೆ ಅಂತಾ ಹೇಳಿಕೆ ಕೊಟ್ಟಿದ್ದಾರೆ. ನಿಮ್ಮ ರಾಷ್ಟ್ರೀಯ ನಾಯಕರಿಗಿಂತ ನೀನು ದೊಡ್ಡ ಮನುಷ್ಯನಾ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ. ಕೆಲವರು ಧರ್ಮವನ್ನು ಉಳಿಸುತ್ತಾರೆ. ಧರ್ಮದ ಸಿದ್ದಾಂತ ಸಾಮಾನ್ಯ ಜನರಿಗೆ ತಿಳಿಸುವ ಮೂಲಕ ಪ್ರಖ್ಯಾತಿ ಆಗಿದ್ದಾರೆ. ಇಂದು ಕನಕದಾಸ ಜಯಂತಿ. ಮೊದಲ ಹಿಂದುತ್ವದ ಪ್ರತಿಪಾದಕ ಕನಕದಾಸರು. ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದು ಇಡೀ ಪ್ರಪಂಚಕ್ಕೆ ಪ್ರಖ್ಯಾತಿ ಆಗಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಕೆಂಪೇಗೌಡರ ಪ್ರತಿಮೆ ಉದ್ಘಾಟಿಸಿದ್ದು ಖುಷಿ ವಿಚಾರ
ಇನ್ನು ಬೆಂಗಳೂರಿನಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕೆಂಪೇಗೌಡ ಅತ್ಯಂತ ಒಳ್ಳೆಯ ಆಡಳಿತಗಾರರು. ಕೆಂಪೇಗೌಡರು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಕೆರೆ ಕಟ್ಟೆ ನಿರ್ಮಾಣ, ಪಾರ್ಕ್, ರಸ್ತೆ ನಿರ್ಮಾಣ, ಕುಡಿಯುವ ನೀರು ಹೀಗೆ ನಾಗರೀಕರಿಗೆ ಸಾಮಾನ್ಯ ಸೌಲಭ್ಯ ನೀಡಿದ್ದಾರೆ. ಪರಿಸರವನ್ನು ಕಾಪಾಡಿದ ಆಡಳಿತದ ದಿಗ್ಗಜ ಕೆಂಪೇಗೌಡ. ಅಂತಹ ಆಡಳಿತಗಾರನ ಪ್ರತಿಮೆಯನ್ನು ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿರುವುದು ಬಹಳ ಗೌರವ ಎಂದು ಈಶ್ವರಪ್ಪ ತಿಳಿಸಿದರು.
ಟಿಪ್ಪು ಸುಲ್ತಾನ್ ದೇಶದ್ರೋಹಿ ಎಂಬ ಹೆಸರು ಪಡೆದವರು
ಮೈಸೂರಿನಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂಬ ತನ್ವೀರ್ ಸೇಠ್ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ದೇಶ ಭಕ್ತರ ವಿಚಾರ ಬಹಳ ಬೇಗ ಜನರಿಗೆ ತಲುಪಬಾರದು ಎಂಬ ಉದ್ದೇಶದಿಂದ ಟಿಪ್ಪು ಪ್ರತಿಮೆ ನಿರ್ಮಾಣಕ್ಕೆ ಹೊರಟ್ಟಿದ್ದಾರೆ. ಕೆಂಪೇಗೌಡರು ಇಡಿ ದೇಶಕ್ಕೆ ಆದರ್ಶ. ಟಿಪ್ಪು ಸುಲ್ತಾನ್ ದೇಶದ್ರೋಹಿ ಅಂತಾ ಹೆಸರು ಪಡೆದಿದ್ದಾರೆ. ಕೆಂಪೇಗೌಡರ ಆದರ್ಶ ಜನ ಪರಿಪಾಲನೆ ಮಾಡಬಾರದು ಎಂಬ ಉದ್ದೇಶದಿಂದ ಕೆಲವು ದೇಶದ್ರೋಹಿಗಳು ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.