ಶಿವಮೊಗ್ಗ, ಆ.24: ಅಂಗನವಾಡಿಗೆ ನುಗ್ಗಿದ ಕಳ್ಳನೊಬ್ಬ ಅಂಗನವಾಡಿ ಕಾರ್ಯಕರ್ತೆಯ ಮಾಂಗಲ್ಯ ಸರ ಕಿತ್ತುಕೊಂಡು ಹೋದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ(Hosanagara) ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಬೈಲಿನಲ್ಲಿ ಆಗಸ್ಟ್ 22 ರಂದು ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಖತರ್ನಾಕ್ ಖದೀಮನೊಬ್ಬ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಎಂಬುವರನ್ನು ಬೆದರಿಸಿ 42 ಗ್ರಾಂ ತೂಕದ ಸುಮಾರು 3 ಲಕ್ಷದ 20 ಸಾವಿರ ಮೌಲ್ಯದ ಮಾಂಗಲ್ಯ ಸರವನ್ನು ಎಗರಿಸಿದ್ದಾನೆ. ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಯಶವಂತಪುರ RMC ಯಾರ್ಡ್ನಲ್ಲಿ ಖತರ್ನಾಕ್ ಕಳ್ಳನೊಬ್ಬ ಆಗಸ್ಟ್ 18 ರಂದು ಮಧ್ಯರಾತ್ರಿ ನಾಲ್ಕೈದು ಅಂಗಡಿಗಳಿಗೆ ನುಗ್ಗಿ ಕಳ್ಳ ಮಾಡಿದ್ದಾನೆ. ಹಣದ ಜೊತೆ ಈರುಳ್ಳಿ ಕದ್ದ ಕಳ್ಳ, 300 ರೂ ಚಿಲ್ಲರೆ ಹಣವನ್ನು ಬಿಡದೆ ಎಗರಿಸಿದ್ದಾನೆ. ಜೊತೆಗೆ ಇತರೆ ಅಂಗಡಿಗಳಲ್ಲಿ ಕೈಗೆ ಸಿಕ್ಕಷ್ಟು ಹಣ ದೋಚಿದ್ದಾನೆ. ಈ ಕುರಿತು ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ರಾಯಚೂರು: CCTVಯಲ್ಲಿ ಸೆರೆಯಾಗಿದೆ ಲೋಕಲ್ ಬ್ರ್ಯಾಂಡ್ ಎಣ್ಣೆ ಕಳ್ಳತನ ಕೈಚಳಕ
ಕೊಡಗು: ಮಡಿಕೇರಿ ನಗರದ ಹೃದಯ ಭಾಗದಲ್ಲಿರುವ ಕೋಟೆ ಮಾರಮ್ಮ ದೇವಸ್ಥಾನದಲ್ಲಿ ಆಗಸ್ಟ್ 16ರಂದು ಅಸ್ಸಾಂ ಮೂಲದ ಇಬ್ಬರು ಕಾರ್ಮಿಕರು ಕಳ್ಳತನ ಮಾಡಿದ್ದರು. ಈ ಕುರಿತು ದೂರು ಕೂಡ ದಾಖಲಾಗಿತ್ತು. ಇದೀಗ ಆರೋಪಿಗಳಾದ ಅಲ್ತಾಬ್ ಆಲಿ(27), ಮೀರ್ ಹುಸೇನ್(36) ಎಂಬುವವರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿ ಇದ್ದ 3 ಗ್ರಾಂ ಚಿನ್ನದ ಮಾಂಗಲ್ಯ, 160 ಗ್ರಾಂ ಬೆಳ್ಳಿ ಆಭರಣ, 95 ಸಾವಿರ ನಗದು ಜಪ್ತಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ