ಮುಡಾದ ಮತ್ತಷ್ಟು ಕರ್ಮಕಾಂಡ ಬಯಲಿಗೆ, ಅಧಿಕಾರಗಳ ಕಳ್ಳಾಟದ ದಾಖಲೆ ಬಹಿರಂಗ

ಮುಡಾ ಹಗರಣ ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮೈಸೂರಿನ‌ ಮುಡಾ ಭ್ರಷ್ಟಾಚಾರ ಬಗೆದಷ್ಟು ಹೊರಬರುತ್ತಿದೆ. ‌ಅದರಲ್ಲೂ ಅಧಿಕಾರಿಗಳು ಮಾಡಿರುವ ಕಳ್ಳಾಟ ಗೋಲ್ ಮಾಲ್ ಗಳ ದಾಖಲೆ ಕೂಡ ಸಿಕ್ಕಿದೆ. ಅಷ್ಟಕ್ಕೂ ಈಗ ಸಿಕ್ಕಿರುವ ಗೋಲ್ ಮಾಲ್ ಕೇಸ್ ಏನು ಅಂತೀರಾ? ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಮುಡಾದ ಮತ್ತಷ್ಟು ಕರ್ಮಕಾಂಡ ಬಯಲಿಗೆ, ಅಧಿಕಾರಗಳ ಕಳ್ಳಾಟದ ದಾಖಲೆ ಬಹಿರಂಗ
ಮುಡಾ
Follow us
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on: Aug 22, 2024 | 7:52 PM

ಮೈಸೂರು, (ಆಗಸ್ಟ್ 22): ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕೇಳಿಬಂದಿದೆ. ಅಲ್ಲದೇ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್​ ಅನುಮತಿ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಪ್ರಾಸಿಕ್ಯೂಷನ್ ವಿರುದ್ಧ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸಿದ್ದಾರೆ. ಇನ್ನು ಈ ಮುಡಾದಲ್ಲಿ ನಡೆದ ಹಗರಣ ಒಂದರ ಮೇಲೊಂದು ಆಚೆ ಬರಲಾರಂಭಿಸಿವೆ. ಸಾಮಾಜಿಕ ಹೋರಾಟಗಾರರು, ಆರ್​ಟಿಐ ಕಾರ್ಯಕರ್ತರು ಒಂದೊಂದೇ ದಾಖಲೆಗಳನ್ನು ಬಿಡುಗಡೆಗೊಳಿಸುತ್ತಿದ್ದಾರೆ. ಇವೆಲ್ಲದರ ಮಧ್ಯ ಮುಡಾದಲ್ಲಿ ಅಧಿಕಾರಿಗಳು ಮಾಡಿರುವ ಕಳ್ಳಾಟ ಗೋಲ್ ಮಾಲ್ ಗಳ ದಾಖಲೆ ಕೂಡ ಸಿಕ್ಕಿದೆ.

8ನೇ ವಯಸ್ಸಿನಲ್ಲಿ ಭೂಮಿ ಕಳೆದುಕೊಂಡ. ತನ್ನ 68 ನೇ ವಯಸ್ಸಿನಲ್ಲಿ ಬದಲಿ ನಿವೇಶನಕ್ಕಾಗಿ ಅರ್ಜಿ. ಹೌದು, ಇದು ಸಾಧ್ಯನಾ ಎಂದು ಕೇಳಿದ್ರೆ ಇದೆಲ್ಲ ಮೈಸೂರು ಮುಡಾದಲ್ಲಿ ಸಾಧ್ಯವಿದೆ. ಮೈಸೂರಿನ ಅಬ್ದುಲ್ ವಾಹಿದ್ ವ್ಯಕ್ತಿ ತಮ್ಮ ದಾಖಲೆಗಳ ಪ್ರಕಾರ 1955 ರಲ್ಲಿ ಜನಿಸಿದ್ದಾರೆ. ಆಗಲೇ ಅವರ ಬಳಿ ಮೈಸೂರಿನ ಬೆಲವತ್ತ ಗ್ರಾಮದಲ್ಲಿ 4 ಎಕರೆ 39 ಗುಂಟೆ ಜಮೀನಿದ್ದು ,ಆ ಜಮೀನನ್ನು ಮುಡಾ 1962 ರಲ್ಲಿ ವಶಪಡಿಸಿಕೊಂಡಿತಂತೆ. ಆದ್ರೆ ಅಬ್ದಲ್ ವಾಹಿದ್ ಅಂದಿನಿಂದ ಮುಡಾದಿಂದ ಯಾವುದೇ ಪರಿಹಾರ ಪಡೆದಿರಲಿಲ್ಲವಂತೆ. ಹೀಗಾಗಿ 2023 ರಲ್ಲಿ ಕೋರ್ಟ್ ಮೂಲಕ ಮುಡಾದಲ್ಲಿ ಬದಲಿ ನಿವೇಶ ಪಡೆಯಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ ಬೆಳಕಿಗೆ ಬಂದ ಮೇಲೆ ಸಿಎಂ ಪತ್ನಿ ಬರೆದ ಪತ್ರ ತಿರುಚಿದ್ರಾ ಅಧಿಕಾರಿಗಳು? ಅನುಮಾನಕ್ಕೆ ಇದೆ ಕಾರಣ

ಆದ್ರೆ ನ್ಯಾಯಾಧೀಶರು ಈ ಬಗ್ಗೆ ಅನುಮಾನಗೊಂಡು ಮುಡಾಕ್ಕೆ ಹಾಗೂ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಯಾವಾಗ ನ್ಯಾಯಾಧೀಶರು ಅನುಮಾನಗೊಂಡರು ಆಗಲೇ ಕೋರ್ಟ್ ಗೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಾಪಸ್ಸು ಪಡೆದಿದ್ದಾರೆ. ಆದ್ರೆ ವಾಪಸ್ಸು ಪಡೆದು ಸುಮ್ನನಿದ್ರೆ ಏನಿರಲಿಲ್ಲ, ಮುಡಾದಲ್ಲೇ ಅಂದಿನ ಆಯುಕ್ತ ದಿನೇಶ್ ರಿಂದ 55260 ಚದರ ಅಡಿ ಬದಲಿ ನಿವೇಶನವನ್ನ ಮಂಜೂರು ಮಾಡಿಕೊಂಡಿದ್ದಾರೆ.

ಇನ್ನು ಇದಷ್ಟೆ ಅಲ್ಲದೆ ಈ ವ್ಯಕ್ತಿಯ ಇರುವಿಕೆ ಬಗ್ಗೆಯು ಸಾಕಷ್ಟು ಅನುಮಾನ‌ ಇದೆ. ಈತ ನೀಡಿರುವ ದಾಖಲೆ ಪ್ರಕಾರ ಈತ ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ. ಆದ್ರೆ ಉದಯಗಿರಿ ಪೋಸ್ಟ್ ಎಂದು ಆಧಾರ್ ಕಾರ್ಡಿನಲ್ಲಿ ನಮೂದಾಗಿದೆ. ಇಷ್ಟೆಲ್ಲ ಅನುಮಾನ‌ ಬರುವಂತ ಪ್ರಕರಣ ಇದ್ದರು ಆಯುಕ್ತರು ಬದಲಿ ನಿವೇಶನ ಹೇಗೆ ಮಂಜೂರು ಮಾಡಿದ್ದಾರೆ ಅನ್ನುವುದು ಸಾಕಷ್ಟು ಮೂಡಿಸಿದೆ.

ಅದೇನೆ‌ ಇರಲಿ ಭೂಮಿ ಕಳೆದುಕೊಂಡು 60 ವರ್ಷದ ನಂತರ ಈಗ ಬದಲಿ‌ ನಿವೇಶನ ಕೊಡುತ್ತಾರೆ ಅಂದರೆ ನಿಜಕ್ಕೂ ಅಧಿಕಾರಿಗಳು ಎಷ್ಟರ ಮಟ್ಟಿಗೆ ಗೋಲ್ ಮಾಲ್ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಇನ್ನಾದರೂ ಅಧಿಕಾರಿಗಳ ವಿರುದ್ಧ ಕ್ರಮವಾಗುತ್ತ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ