ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ 50 ರೂ. ವಸೂಲಿ; ಬಿಜೆಪಿ ಅವಧಿಯಲ್ಲೇ ಆರಂಭವಾಗಿದೆ-ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ(Shivamogga)ದಲ್ಲಿ ಮಾತನಾಡಿದ ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ‘ನಾವು ಗೃಹಲಕ್ಷ್ಮಿ 2 ಸಾವಿರ ಕೊಟ್ಟು, ಗೃಹ ಜ್ಯೋತಿ ಕೊಟ್ಟು, ಫ್ರೀಯಾಗಿ ಬಸ್ಸಿನಲ್ಲಿ ಓಡಾಡಿಸುತ್ತೇವೆ. ಈ ಮೊದಲು ಪರೀಕ್ಷಾ ಶುಲ್ಕ 60 ರೂಪಾಯಿ ನಿಗದಿಯಾಗಿತ್ತು. ನಾವು 10 ರೂ. ಕಡಿಮೆ ಮಾಡಿದ್ದೇವೆ. ಮುಂದೆ ಏನಾದರೂ ಇನ್ನೂ ಅನುಕೂಲವಾದ್ರೆ ಕಡಿಮೆ ಮಾಡುತ್ತೇವೆ ಎಂದರು.
ಶಿವಮೊಗ್ಗ, ಫೆ.04: ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ(SSLC Preparatory Exam)ಗೆ 50 ರೂ. ವಸೂಲಿ ವಿಚಾರ ‘ಬಿಜೆಪಿ ಅವಧಿಯಲ್ಲೇ ಪರೀಕ್ಷಾ ಶುಲ್ಕ ವಸೂಲಿ ಆರಂಭವಾಗಿದೆ ಎಂದು ಶಿಕ್ಷಣ ಇಲಾಖೆ ಸಚಿವ ಮಧು ಬಂಗಾರಪ್ಪ(Madhu Bangarappa) ಹೇಳಿದ್ದಾರೆ. ಶಿವಮೊಗ್ಗ(Shivamogga)ದಲ್ಲಿ ಮಾತನಾಡಿದ ಅವರು ‘ನಾವು ಗೃಹಲಕ್ಷ್ಮಿ 2 ಸಾವಿರ ಕೊಟ್ಟು, ಗೃಹ ಜ್ಯೋತಿ ಕೊಟ್ಟು, ಫ್ರೀಯಾಗಿ ಬಸ್ಸಿನಲ್ಲಿ ಓಡಾಡಿಸುತ್ತೇವೆ. ಈ ಮೊದಲು ಪರೀಕ್ಷಾ ಶುಲ್ಕ 60 ರೂಪಾಯಿ ನಿಗದಿಯಾಗಿತ್ತು. ನಾವು 10 ರೂ. ಕಡಿಮೆ ಮಾಡಿದ್ದೇವೆ. ಮುಂದೆ ಏನಾದರೂ ಇನ್ನೂ ಅನುಕೂಲವಾದ್ರೆ ಕಡಿಮೆ ಮಾಡುತ್ತೇವೆ ಎಂದರು.
ವಿರೋಧ ಪಕ್ಷದವರಂತಹ ದಡ್ಡರು ಯಾರೂ ಇಲ್ಲವೆಂದು ವ್ಯಂಗ್ಯ
ಇನ್ನು ಅವರು ಹುಡುಕುವ ಕೆಲಸವನ್ನು ನಿಲ್ಲಿಸಬೇಕು. ಇಲ್ಲದಿರುವುದನ್ನು ಹುಡುಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಇದು ಉಪಯೋಗ ಇಲ್ಲ, ಬಿಜೆಪಿಯವರ ಆರೋಪಗಳಿಗೆ ಉತ್ತರ ಕೊಡದಿರುವುದೇ ಸೂಕ್ತವಾಗಿದೆ. ಇನ್ನು ಕುಮಾರಸ್ವಾಮಿ ಅವರು ಪ್ರಶ್ನೆ ಕೇಳುವ ಮೊದಲು ಸ್ವಲ್ಪ ತಿಳಿದುಕೊಳ್ಳೋದು ಒಳ್ಳೆಯದು, ಇಲ್ಲದಿರುವುದನ್ನು ಹುಡುಕಿ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ವಿರೋಧ ಪಕ್ಷದವರಂತಹ ದಡ್ಡರು ಯಾರೂ ಇಲ್ಲವೆಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಬೆಳಿಗ್ಗೆ ನಮಾಜ್‌ಗೆ ಅನುಕೂಲವಾಗಲು ಪರೀಕ್ಷೆ ವೇಳಾಪಟ್ಟಿಯನ್ನೇ ಶಿಕ್ಷಣ ಇಲಾಖೆ ಬದಲಾಯಿಸಿದೆ-ಹಿಂದೂ ಮುಖಂಡ ಗಂಭೀರ ಆರೋಪ
ಪರೀಕ್ಷೆ ವೇಳಾಪಟ್ಟಿಯಲ್ಲಿ ಸಮಯ ಬದಲಾವಣೆ; ಸ್ಪಷ್ಟನೆ ನೀಡಿದ ಸಚಿವರು
ಇದೇ ವೇಳೆ ಮಾ.1ರ ಮಧ್ಯಾಹ್ನ SSLC ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವ ವಿಚಾರದಲ್ಲಿ ಕೆಲವು ಧರ್ಮಕ್ಕೆ ಒಲವು ತೋರಿಸುವ ಕೆಲಸ ಮಾಡಿದ್ದಾರೆಂಬ ಆರೋಪ ‘ಬಿಜೆಪಿಯವರು ಎಲ್ಲವನ್ನೂ ಜೋಡಣೆ ಮಾಡುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು. ಕಳ್ಳನಿಗೆ ಒಂದು ಸುಳ್ಳು ನೆಪ ಬೇಕು ಅಂತಾರಲ್ಲ ಹಾಗೆ, ಬಿಜೆಪಿಯವರ ಅಂಗ ಸಂಸ್ಥೆ ಆಸ್ಎಸ್ಎಸ್ನವರ ಕೆಲಸ ಇದು. ಮಾರ್ಚ್ 1ರಂದು ಬೆಳಗ್ಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿಯಾಗಿದೆ. SSLC ಪೂರ್ವ ಸಿದ್ದತಾ ಪರೀಕ್ಷೆ ಆಗಿದ್ದರಿಂದ ಮಧ್ಯಾಹ್ನ ಮಾಡ್ತಿದ್ದೇವೆ. ಮಾ.1ರಂದು 3 ಪರೀಕ್ಷೆ ಇರುವುದರಿಂದ ಮುಂದೂಡಿದ್ರೆ ಸಮಸ್ಯೆ ಆಗುತ್ತೆ. ಮಕ್ಕಳಿಗೆ ಅನುಕೂಲವಾಗುವ ರೀತಿ ಆಡಳಿತ ನಡೆಸಲು ನಮಗೆ ಬರುತ್ತದೆ ಎನ್ನುವ ಮೂಲಕ ಸ್ಪಷ್ಟತೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 pm, Sun, 4 February 24