ಶಿವಮೊಗ್ಗದಲ್ಲಿ ಎಟಿಎಂ ದರೋಡೆಗೆ ಜೆಸಿಬಿ ಕದ್ದು ತಂದ ಖದೀಮರು, ಮುಂದೇನಾಯ್ತು?

ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿ ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಯತ್ನ ನಡೆದಿದೆ. ಎಟಿಎಂ ದರೋಡೆಗೆ ಜೆಸಿಬಿಯನ್ನು ಕದ್ದು ತಂದಿದ್ದ ದುಷ್ಕರ್ಮಿಗಳು ಆಕ್ಸಿಸ್ ಬ್ಯಾಂಕಿನ ಎಟಿಎಂ ದರೋಡೆಗೆ ಯತ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಎಟಿಎಂ ದರೋಡೆಗೆ ಜೆಸಿಬಿ ಕದ್ದು ತಂದ ಖದೀಮರು, ಮುಂದೇನಾಯ್ತು?
ಜೆಸಿಬಿ
Follow us
Basavaraj Yaraganavi
| Updated By: ಆಯೇಷಾ ಬಾನು

Updated on:Jul 26, 2023 | 11:19 AM

ಶಿವಮೊಗ್ಗ, ಜುಲೈ 26: ಎಟಿಎಂ ಕಳ್ಳತನ(ATM Robbery) ಅಂದರೆ ಮೊದಲು ನಮ್ಮ ಕಣ್ಣಮುಂದೆ ಬರೋದು ಖದೀಮರು ರಾತ್ರೋರಾತ್ರಿ ಮುಸುಕು ಹಾಕಿಕೊಂಡು ಬಂದು ಗ್ಯಾಸ್ ಕಟ್ಟರ್ ಬಳಸಿ ಎಟಿಎಂ ಯಂತ್ರ ಕೊಂಡೊಯ್ಯುವುದು ಅಥವಾ ಎಟಿಎಂ ಯಂತ್ರವನ್ನು ಬಿಚ್ಚಿ ಅದರಲ್ಲಿನ ಹಣ ತೆಗೆದುಕೊಂಡು ಹೋಗುತ್ತಾರೆ. ಆದರೆ ಈ ಕಳ್ಳರು ಹಾಗಲ್ಲ. ಇವರೇ ಬೇರೆ ಇವರ ಸ್ಟೈಲ್​ ಯೇ ಬೇರೆ. ಕಳ್ಳರು ಸದ್ದು ಮಾಡದೇ ಯಾರ ಕಣ್ಣಿಗೂ ಕಾಣದಂಗೆ ಕಳ್ಳತನ ಮಾಡುದ್ರೆ ಇವರು ಜೆಸಿಬಿ(JCB) ಬಳಸಿ ಎಟಿಎಂ ದರೋಡೆಗೆ ಇಳಿದಿದ್ದಾರೆ. ಜಗತ್ತಿನಲ್ಲಿ ಎಂಥೆಂಥಾ ಕಳ್ಳರು ಇದ್ದಾರೆ ನೋಡಿ. ಎಂಟಿಎಂ ದರೋಡೆ ಮಾಡಲೆಂದೇ ಈ ಖದೀಮರು ಜೆಸಿಬಿಯನ್ನು ಕದ್ದು ತಂದಿದ್ದಾರೆ.

ಶಿವಮೊಗ್ಗದ ವಿನೋಬನಗರ ಬಡಾವಣೆಯಲ್ಲಿ ಜೆಸಿಬಿ ಬಳಸಿ ಎಟಿಎಂ ದರೋಡೆಗೆ ಯತ್ನ ನಡೆದಿದೆ. ಎಟಿಎಂ ದರೋಡೆಗೆ ಜೆಸಿಬಿಯನ್ನು ಕದ್ದು ತಂದಿದ್ದ ದುಷ್ಕರ್ಮಿಗಳು ಆಕ್ಸಿಸ್ ಬ್ಯಾಂಕಿನ ಎಟಿಎಂ ದರೋಡೆಗೆ ಯತ್ನಿಸಿದ್ದಾರೆ. ಆದರೆ ರಾತ್ರಿ ಗಸ್ತು ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲೇ ಜೆಸಿಬಿ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಜೆಸಿಬಿ ವಶಕ್ಕೆ ಪಡೆದಿದ್ದು ಘಟನೆ ಕುರಿತು ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಭೀಮಾ ನದಿಯಲ್ಲಿ ಕಾಲೇಜು ವಿದ್ಯಾರ್ಥಿ ಶವ ಪತ್ತೆ ಪ್ರಕರಣ; ಕೊಟ್ಟ ಹಣ ವಾಪಾಸ್​ ಕೇಳಿದ್ದಕ್ಕೆ ಸ್ನೇಹಿತರಿಂದಲೇ ಕೊಲೆ, ಇಬ್ಬರ ಬಂಧನ

ಭದ್ರಾವತಿ ಯುವಕ ಶರತ್ ಮಿಸ್ಸಿಂಗ್, ಹೆತ್ತವರ ಅಕ್ರಂದನ

ಕೊಲ್ಲೂರು ದೇವಿಯ ದರ್ಶನಕ್ಕೆಂದು ಭಾನುವಾರ ಬೆಳಗ್ಗೆ ಮನೆಯಿಂದ ಹೋಗಿದ್ದ ಯುವಕ ನೀರು ಪಾಲಾಗಿದ್ದಾನೆ. ಕಾಡಿನ ನಡುವೆ ಇರುವ ಫಾಲ್ಸ್ ನೋಡಲು ಹೋದ ಯುವಕನು ಕಾಲು ಜಾರಿ ಬಿದ್ದಿದ್ದಾನೆ. ಕಳೆದ ಮೂರು ದಿನಗಳಿಂದ ಫಾಲ್ಸ್ ನಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಮತ್ತೊಂದಡೆ ಮಗನು ಕಣ್ಮರೆಯ ಆಘಾತ ದಿನೇ ದಿನೇ ಜಾಸ್ತಿಯಾಗುತ್ತಿದೆ. ಹೆತ್ತವರು ಕಣ್ಣೀರು ಹಾಕುತ್ತಿದ್ದಾರೆ.

ಭದ್ರಾವತಿ ತಾಲೂಕಿನ ಕೆ.ಎಚ್. ನಗರ ಗ್ರಾಮದ ನಿವಾಸಿ ಶರತ್ (23). ಬಿ.ಕಾಂ ಮುಗಿಸಿಕೊಂಡಿದ್ದ ಯುವಕನು ತುಂಬಾ ಲವಲವಕಿಯಿಂದ ಊರಿನಲ್ಲಿದ್ದನು. ಒಂದು ಹಿಟಾಕಿ ಖರೀದಿ ಮಾಡಿದ್ದನು. ಇದರ ಜೊತೆಗೆ ತನ್ನ ಮನೆ ಆವರಣದಲ್ಲಿ ಅಡಿಕೆ ತಟ್ಟೆ ತಯಾರಿಸುವ ಘಟಕ ತೆರೆದಿದ್ದನು. ಚಿಕ್ಕ ವಯಸ್ಸಿನಲ್ಲೇ ವ್ಯಾಪಾರ ವಹಿವಾಟಿನ ಮೂಲಕ ಕುಟುಂಬಕ್ಕೆ ದೊಡ್ಡ ಆಸರೆ ಆಗಿದ್ದ ಶರತ್ ಭಾನುವಾರ ಬೆಳಗ್ಗೆ ಆರು ರಿಂದ ಏಳು ಘಂಟೆ ಒಳಗೆ ಸಮಯದಲ್ಲಿ ಕಳೆದ ಎರಡು ತಿಂಗಳ ಹಿಂದೆ ಖರೀದಿಸಿದ ಕಾರ್ ತೆಗೆದುಕೊಂಡು ಸ್ನೇಹಿತನ ಜೊತೆ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನಕ್ಕೆ ತೆರಳುವುದಾಗಿ ಹೆತ್ತವರಿಗೆ ಮತ್ತು ಸ್ನೇಹಿತರಿಗೆ ತಿಳಿಸಿದ್ದನು. ಮಧ್ಯಾಹ್ನ 11 ಘಂಟೆ ಸುಮಾರಿಗೆ ಹೊಸನಗರದಲ್ಲಿರುವೆ ತಿಂಡಿ ಮಾಡಿಕೊಂಡಿರುವೆ ಎಂದು ತಂದೆ ಜೊತೆ ಮಾತನಾಡಿದ್ದೆ ಲಾಸ್ಟ್ ಕಾಲ್. ಬಳಿಕ ಆತ ಪೋಷಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಸಂಜೆಯಾಗುತ್ತಿದ್ದಂತೆ ದೊಡ್ಡ ಆಘಾತದ ಸುದ್ದಿ ಕುಟುಂಬಸ್ಥರಿಗೆ ಎದೆ ಬಡಿತ ನಿಲ್ಲಿಸಿತ್ತು.

ಶರತ್ ಕೊಲ್ಲೂರು ಸಮೀಪದ ಅರಿಶಿನಗುಂಡಿ ಫಾಲ್ಸ್ ನೋಡಲು ನೋಡಿ ಕಾಲು ಜಾರಿ ಬಿದ್ದು ನೀರು ಪಾಲಾಗಿದ್ದಾನೆ. ಈ ಸುದ್ದಿ ಕೇಳಿದ ತಂದೆ ಮುನಿಸ್ವಾಮಿ ಮತ್ತು ತಾಯಿ ರಾಧಾ ಕುಸಿದು ಬಿದ್ದಿದ್ದರು. ಇನ್ನೂ ಇಬ್ಬರು ತಂಗಿಯಂದಿರಿಗೆ ಅಣ್ಣನ ಕಣ್ಮರೆ ಸುದ್ದಿಯು ಸಿಡಿಲು ಬಡಿದಂತಾಗಿತ್ತು. ಕುಟುಂಬಸ್ಥರೆಲ್ಲರೂ ಈಗ ರೋಧಿಸುತ್ತದ್ದಾರೆ. ಏನಾದ್ರೂ ಪವಾಡವಾಗಿ ಶರತ್ ಬದುಕಿ ಬರುತ್ತಾನೆ ಎನ್ನುವ ವಿಶ್ವಾಸದಲ್ಲಿ ಹೆತ್ತವರು ಮತ್ತು ಸಹೋದರಿಯರು ಇದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:40 am, Wed, 26 July 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು