ಅಂತ್ಯಸಂಸ್ಕಾರಕ್ಕೆ ಹೋಗುವಾಗಲೇ ಬಯಲಾಯ್ತು ಮರ್ಡರ್‌ ಮಿಸ್ಟ್ರಿ, ತಂದೆ ಅಂತ್ಯಕ್ರಿಯೆಗೆ ಸಿದ್ದನಾಗಿದ್ದ ಪುತ್ರ ಅರೆಸ್ಟ್‌

TV9 Digital Desk

| Edited By: Ayesha Banu

Updated on: Sep 14, 2021 | 9:32 AM

ಆ ಮನೆಯ ಕುಟಂಬಸ್ಥರು, ಸಂಬಂಧಿಕರು ತೀರಿಹೋಗಿದ್ದ ಮನೆಯ ಯಜಮಾನನ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ರು. ಇನ್ನೇನು ಮೃತದೇಹವನ್ನ ಸ್ಮಶಾನದತ್ತ ತೆಗೆದುಕೊಂಡು ಹೋಗ್ಬೇಕು ಅನ್ನುವಷ್ಟರಲ್ಲಿ.. ಆ ಯಜಮಾನನ ಸಾವಿನ ಸಿಕ್ರೇಟ್ ಬಯಲಾಗಿತ್ತು. ಅಂತ್ಯಸಂಸ್ಕಾರಕ್ಕೆ ಬಂದವರು ಸತ್ಯ ತಿಳಿದು ಶಾಕ್ ಆದ್ರು.

ಅಂತ್ಯಸಂಸ್ಕಾರಕ್ಕೆ ಹೋಗುವಾಗಲೇ ಬಯಲಾಯ್ತು ಮರ್ಡರ್‌ ಮಿಸ್ಟ್ರಿ, ತಂದೆ ಅಂತ್ಯಕ್ರಿಯೆಗೆ ಸಿದ್ದನಾಗಿದ್ದ ಪುತ್ರ ಅರೆಸ್ಟ್‌
ತುಂಗಾ‌ ಪೊಲೀಸ್ ಠಾಣೆ

Follow us on

ಶಿವಮೊಗ್ಗ: ತಾಲೂಕಿನ ಮಂಡೇನಕೊಪ್ಪ ಗ್ರಾಮದಲ್ಲಿ ವಾಸವಾಗಿದ್ದ ಕುಮಾರ್‌ ನಾಯ್ಕ್‌ ಎಂಬಾತ ನಿನ್ನೆ(ಸೆ.13) ಉಸಿರು ನಿಲ್ಲಿಸಿದ್ದ. ಕುಡಿತದ ಚಟ ಹೊಂದಿದ್ದ ಕುಮಾರ್‌ನಾಯ್ಕ್‌, ಕುಡಿತದ ನಶೆಯಲ್ಲಿ ಕೆಳಗೆ ಬಿದ್ದು, ಪ್ರಾಣ ಬಿಟ್ಟಿದ್ದ ಅಂತಾ ಹೇಳಲಾಗಿತ್ತು. ಹೀಗಾಗಿ ಅಪ್ಪನ ಅಂತ್ಯಕ್ರಿಯೆಗೆ ಸಿದ್ದವಾದ ಪುತ್ರ ಮಧುನಾಯ್ಕ್‌, ತಮಟೆಯವರನ್ನ ಕರೆಸಿದ್ದ. ಇನ್ನೇನು ಕುಮಾರ್‌ನಾಯ್ಕ್‌ನ ಬಾಡಿಯನ್ನ ಸ್ಮಶಾನಕ್ಕೆ ಹೊತ್ತೊಯ್ಯಬೇಕು ಅನ್ನೋವಾಗ್ಲೇ ಈ ಸಾವಿನ ಕೇಸ್‌ಗೆ ಟ್ವಿಸ್ಟ್‌ ಸಿಕ್ಕಿತ್ತು.

ತಂದೆಯನ್ನೇ ಕೊಂದು ಕೇಸ್‌ ಮುಚ್ಚಿ ಹಾಕಲು ಹೊರಟ ಮಗ ಅರೆಸ್ಟ್ ಕುಮಾರ್‌ನಾಯ್ಕ್‌ ಹಾಗೂ ಪುತ್ರ ಮಧುನಾಯ್ಕ್‌ ನಡುವೆ ಭಾನುವಾರ ರಾತ್ರಿ ಜಗಳವಾಗಿದೆ. ಕುಡಿದ ನಶೆಯಲ್ಲಿದ್ದ ಇಬ್ಬರು ಬಡಿದಾಡಿಕೊಂಡಿದ್ದಾರೆ. ಈ ವೇಳೆ ದೊಣ್ಣೆಯಿಂದ ಹೊಡೆದ ಮಧು ತಂದೆಯನ್ನೇ ನೆಲಕ್ಕುರುಳಿಸಿದ್ದ. ಆಗ ಕುಮಾರ್‌ನಾಯ್ಕ್‌ನ ಕಿವಿಯಲ್ಲಿ ರಕ್ತ ಕೂಡಾ ಬಂದಿತ್ತು. ಇಲ್ಲೇ ಇದ್ರೆ ಇನ್ನಷ್ಟು ಹೊಡೆತ ಬೀಳುತ್ತೆ ಅನ್ನೋ ಭಯದಿಂದ ರಾತ್ರಿಯೇ ಮನೆ ಬಿಟ್ಟಿದ್ದ ಕುಮಾರ್‌ನಾಯ್ಕ್‌, ತಡರಾತ್ರಿ ಮನೆ ಹೊರಗಿನ ಕಟ್ಟೆ ಮೇಲೆ ಮಲಗಿದ್ದ. ಆದ್ರೆ ಬೆಳಗಾಗ್ತಿದ್ದಂತೆ ಉಸಿರು ನಿಲ್ಲಿಸಿದ್ದಾನೆ.

ಇನ್ನು ತಂದೆಯನ್ನ ಕೊಂದಿದ್ದ ಮಧು, ಕುಡಿದು ಕೆಳಗೆ ಬಿದ್ದು ಸತ್ತಿದ್ದಾನೆ ಅಂತಾ ಊರವರಿಗೆ ಹೇಳಿದ್ದ. ಅಷ್ಟೇ ಅಲ್ಲ ತಮಟೆ ಬಾರಿಸುವವರನ್ನು ಕರೆದುಕೊಂಡು ಬಂದು ಶವಸಂಸ್ಕಾರಕ್ಕೆ ಮುಂದಾಗಿದ್ದ. ಆದ್ರೆ ಕುಮಾರ್‌ನಾಯ್ಕ್‌ ಪುತ್ರಿ ಶಿಲ್ಪಬಾಯಿಗೆ ಅಸಲಿ ವಿಷ್ಯ ಗೊತ್ತಾಗಿತ್ತು. ಹೀಗಾಗಿ ತುಂಗಾ‌ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ಲು.

ಸದ್ಯ ತಂದೆಯನ್ನೇ ಕೊಂದು ಪಾಪಿ ಪುತ್ರ ಮಧುವನ್ನ ಅರೆಸ್ಟ್‌ ಮಾಡಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅದೇನೇ ಇರ್ಲಿ, ಹೆತ್ತ ತಂದೆಯನ್ನ ಪುತ್ರನೇ ಕೊಂದು ಜೈಲು ಸೇರಿದ್ದು ನಿಜಕ್ಕೂ ದುರಂತ.

ಇದನ್ನೂ ಓದಿ: ಕಾನೂನು ಪಾಲಿಸುವವರಿಂದಲೇ ಕಾನೂನು ಉಲ್ಲಂಘನೆ! ಅನುಮತಿ ಪಡೆಯದೆ ಸರ್ಕಾರಿ ನಿವಾಸದಲ್ಲಿದ್ದ ಮರಗಳನ್ನು ಕಡಿದ ಮಂಡ್ಯ ಎಸ್ಪಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada