ಶಿವಮೊಗ್ಗ: ಬಜರಂಗದಳ (Bajrang Dal) ಕಾರ್ಯಕರ್ತ ಹರ್ಷನ ಮನೆಗೆ ಇಂದು (ಫೆ.26) ವಿವಿಧ ಮಠಾಧೀಶರು ಭೇಟಿ ನೀಡಿದ್ದಾರೆ. ಈ ವೇಳೆ ಹರ್ಷನ (Harsha) ಕುಟುಂಬಕ್ಕೆ ಸಾಂತ್ವನ ಹೇಳಿದ ಡಾ.ಶಿವಮೂರ್ತಿ ಮುರಘಾ ಶರಣರು, ದೇಶದಲ್ಲಿ ಎಲ್ಲರೂ ಭಾವೈಕ್ಯತೆ ಹಾಗೂ ರಾಷ್ಟ್ರೀಯತೆಯನ್ನು ಹೊಂದಬೇಕು. ರಾಷ್ಟ್ರ ಉಳಿದರೇ ನಾವು ಉಳಿದಂತೆ ಎಂಬ ಭಾವ ಬೇಕು. ಈ ಸಿಟ್ಟಿನಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಳಿಸುತ್ತಿದ್ದ ಯುವ ಉತ್ಸಾಹಿ ಹರ್ಷ ಹತ್ಯೆಯಾಗಿದ್ದಾನೆ. ಹಿಂಸಾತ್ಮಕ ಸಂಘರ್ಷದಲ್ಲಿ ಹರ್ಷ ಹತ್ಯೆಯಾಗಿದ್ದಾನೆ ಎಂದರು.
ಮುಂದುವರಿದು ಮಾತನಾಡಿದ ಅವರು, ಈ ರೀತಿಯ ಹಿಂಸಾತ್ಮಕ ಸಂಘರ್ಷ ಯಾರಿಗೂ ಭೂಷಣವಲ್ಲ. ಹರ್ಷನನ್ನು ಕಳೆದುಕೊಂಡು ರಾಜ್ಯ ಹಾಗೂ ರಾಷ್ಟ್ರವೇ ದುಃಖದಲ್ಲಿದೆ. ಹಾಗೇಯೇ ಕುಟುಂಬವು ನೋವಿನಲ್ಲಿದ್ದು, ಎಲ್ಲರೂ ಸಾಂತ್ವಾನ ಹೇಳಿದ್ದೇವೆ. ಸಂತರ ನಡೆ ಸಾಂತ್ವಾನದ ಕಡೆ ಎಂಬಂತೆ ನೊಂದವರಿಗೆ ಸಾಂತ್ವಾನ ಹೇಳಿದ್ದೇವೆ ಎಂದು ತಿಳಿಸಿದರು.
ಇನ್ನೂ ಸಿಗದ ಹರ್ಷ ಮೊಬೈಲ್:
ಹರ್ಷ ಕೊಲೆಯಾಗಿ 6 ದಿನ ಕಳೆದರೂ ಆತನ ಮೊಬೈಲ್ ಇನ್ನೂ ಸಿಗಲಿಲ್ಲ. ಹರ್ಷ ಕೊಲೆ ಬಳಿಕ 30 ನಿಮಿಷದವರೆಗೆ ಮೊಬೈಲ್ ಆನ್ ಇತ್ತು. 30 ನಿಮಿಷದ ಬಳಿಕ ಮೃತ ಹರ್ಷ ಮೊಬೈಲ್ ಸ್ವಿಚ್ ಆಫ್ ಆಗಿದೆ. ಕೊಲೆ ನಡೆದ 30 ನಿಮಿಷದ ವರೆಗೆ ಮೊಬೈಲ್ ರಿಂಗ್ ಆಗುತ್ತಿತ್ತು. ಕುಟುಂಬಸ್ಥರು, ಸ್ನೇಹಿತರು ಘಟನೆ ರಾತ್ರಿ ನಿರಂತರ ಕಾಲ್. ಮಾಡುತ್ತಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸದ್ಯ ಮೊಬೈಲ್ಗಾಗಿ ಶಿವಮೊಗ್ಗ ವಿಶೇಷ ಪೊಲೀಸ್ ತಂಡ ಹುಡುಕಾಟ ನಡೆಸಿದೆ.
10 ಕೊಲೆ ಆರೋಪಿಗಳನ್ನು ವಶಕ್ಕೆ
ನಿನ್ನೆ 10 ಕೊಲೆ ಆರೋಪಿಗಳನ್ನು ವಿಶೇಷ ಪೊಲೀಸ್ ತಂಡ ವಶಕ್ಕೆ ಪಡೆದಿದೆ. ನಿನ್ನೆ ರಾತ್ರಿಯಿಂದಲೇ ಕೊಲೆಯ ಕುರಿತು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಕಾರಿನಲ್ಲಿ ಬಂದಿದ್ದು ಎಷ್ಟು ಜನರು? ಅದು ಯಾರು? ಯಾರು? ಹರ್ಷನ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ್ದು ಎಷ್ಟು ಜನರು? ಇವರಿಗೆ ಮಾರಕಾಸ್ತ್ರ ಪೂರೈಕೆ ಮಾಡಿದ್ದು ಯಾರು? ಎಷ್ಟು ದಿನಗಳಿಂದ ಹರ್ಷ ಕೊಲೆಗೆ ಪ್ಲ್ಯಾನ್ ಮಾಡಲಾಗಿತ್ತು? ಹೀಗೆ ಕೊಲೆ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖಾಧಿಕಾರಿ ಗುರುರಾಜ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ
ಬೆಂಗಳೂರಿನಲ್ಲಿ ಹಣ ನೀಡದಕ್ಕೆ ಹೆತ್ತಮ್ಮನ ಕೆನ್ನೆಗೆ ಹೊಡೆದ ಪುತ್ರ! ತಾಯಿ ಸ್ಥಳದಲ್ಲೇ ಕೊನೆಯುಸಿರು
ಉಕ್ರೇನ್- ರಷ್ಯಾ ಧ್ವಜ ಹೊದ್ದು ನಿಂತ ಜೋಡಿಯ ಪೋಟೋ ವೈರಲ್: ಇಲ್ಲಿದೆ ಫೋಟೋ ಹಿಂದಿನ ಅಸಲಿ ಕಹಾನಿ