ಶಿವಮೊಗ್ಗದಲ್ಲಿ ಕರ್ಫ್ಯೂ ಅವಧಿ ಸಡಿಲಿಕೆ, ಶಾಲಾ ಕಾಲೇಜು ರಜೆ ವಿಸ್ತರಣೆ; ಡಾ.ಆರ್.ಸೆಲ್ವಮಣಿ ಆದೇಶ
ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನ ಕೊಲೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಕರ್ಫ್ಯೂ (curfew) ಜಾರಿ ಮಾಡಲಾಗಿತ್ತು. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ನಗರದಲ್ಲಿ ಕರ್ಫ್ಯೂ ಅವಧಿ ಸಡಿಲಿಕೆ ಮಾಡಲು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ. ಫೆ. 26 ಶನಿವಾರ ಬೆಳಿಗ್ಗೆ 6ರಿಂದ ಸಂಜೆ 4ಗಂಟೆವರೆಗೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದ್ದು, ಶಾಲಾ ಕಾಲೇ ಜು ರಜೆ ವಿಸ್ತರಣೆ ಮಾಡಲಾಗಿದೆ. ಶಿವಮೊಗ್ಗ ನಗರದಲ್ಲಿ ಶನಿವಾರ ಸಹ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ […]
ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನ ಕೊಲೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಕರ್ಫ್ಯೂ (curfew) ಜಾರಿ ಮಾಡಲಾಗಿತ್ತು. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ನಗರದಲ್ಲಿ ಕರ್ಫ್ಯೂ ಅವಧಿ ಸಡಿಲಿಕೆ ಮಾಡಲು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದಾರೆ. ಫೆ. 26 ಶನಿವಾರ ಬೆಳಿಗ್ಗೆ 6ರಿಂದ ಸಂಜೆ 4ಗಂಟೆವರೆಗೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದ್ದು, ಶಾಲಾ ಕಾಲೇ ಜು ರಜೆ ವಿಸ್ತರಣೆ ಮಾಡಲಾಗಿದೆ. ಶಿವಮೊಗ್ಗ ನಗರದಲ್ಲಿ ಶನಿವಾರ ಸಹ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಡಿಸಿ ಮನವಿ ಮಾಡಿಕೊಂಡಿದ್ದಾರೆ.
ಇನ್ನೂ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, 10 ಕೊಲೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. 11 ದಿನ ಪೊಲೀಸ್ ಕಸ್ಟಡಿಯಲ್ಲಿ ಕೊಲೆ ಆರೋಪಿಗಳಿದ್ದು, ಶಿವಮೊಗ್ಗದ 2ನೇ ಜೆಎಂಎಫ್ ಸಿ ಕೋರ್ಟ್ ಗೆ ಹಾಜರು ಪಡಿಸುವಂತೆ ನ್ಯಾಯಾಧೀಶೆ ಶ್ರೀಮತಿ ಸನ್ಮತಿ ಆದೇಶಿಸಿದ್ದಾರೆ.
ಹರ್ಷಾ ಕೊಲೆ ಕೇಸ್ಗೆ ಬಳಸಿದ ಸ್ವಿಫ್ಟ್ ಕಾರ್ ಫೆ 20 ರಂದು ಪತ್ತೆಯಾಗಿದೆ. ಕೃತ್ಯಕ್ಕೆ ಬಳಸಿದ ಮತ್ತೊಂದು ಕಾರ್ನ್ನು ವಿಶೇಷ ಪೊಲೀಸ್ ತಂಡ ಸಿಜ್ ಮಾಡಿದ್ದಾರೆ. ಹೊರ ರಾಜ್ಯದ CG 13 C 4496 ನಂಬರಿನ ಕಾರ್ ಬಳಕೆ ಮಾಡಿ ಹಂತಕರು ಕೊಲೆ ಮಾಡಿದ್ದಾರೆ. ಕೊಲೆಯಾದ ಮರುದಿನವೇ ಟಿವಿ9 ಕಾರ್ ನಂಬರ್ ಸಮೇತ ಸುದ್ದಿ ಬ್ರೇಕ್ ಮಾಡಿದ್ದು, ಈಗ ಅದೇ ಕಾರ್ನ್ನು ಶಿವಮೊಗ್ಗ ಪೊಲೀಸ್ ರು ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ:
Actor Chetan: ನಟ ಚೇತನ್ಗೆ ಜಾಮೀನು; ಆಕ್ಷೇಪಾರ್ಹ ಟ್ವೀಟ್ ಪ್ರಕರಣದಲ್ಲಿ ರಿಲೀಫ್
ರಿಷಬ್ ಶೆಟ್ಟಿ ನಿರ್ಮಾಣದ ‘ಪೆದ್ರೊ’ ಟ್ರೇಲರ್ ರಿಲೀಸ್; ನಟೇಶ್ ಹೆಗಡೆ ನಿರ್ದೇಶನಕ್ಕೆ ಮೆಚ್ಚುಗೆ
Published On - 6:44 pm, Fri, 25 February 22