AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab: ಹಿಜಾಬ್ ಪರ-ವಿರೋಧ ವಾದ ಮಂಡನೆ ಮುಕ್ತಾಯ; ತೀರ್ಪು ಕಾಯ್ದಿರಿಸಿದ ಪೂರ್ಣ ಪೀಠ

ಸಮವಸ್ತ್ರದ ಜತೆ ಹಿಜಾಬ್​ಗೆ ಅನುಮತಿ ಕೋರಿ ಅರ್ಜಿ ವಿಚಾರಣೆ, ಇಂದು ಹೈಕೋರ್ಟ್​ನಲ್ಲಿ ವಾದಮಂಡನೆ ಮುಕ್ತಾಯವಾಗಿದ್ದು, ಹೈಕೋರ್ಟ್​ ಪೂರ್ಣಪೀಠ ತೀರ್ಪು ಕಾಯ್ದಿರಿಸಿದೆ.

Hijab: ಹಿಜಾಬ್ ಪರ-ವಿರೋಧ ವಾದ ಮಂಡನೆ ಮುಕ್ತಾಯ; ತೀರ್ಪು ಕಾಯ್ದಿರಿಸಿದ ಪೂರ್ಣ ಪೀಠ
ಕರ್ನಾಟಕ ಹೈಕೋರ್ಟ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Feb 25, 2022 | 5:38 PM

Share

ಹಿಜಾಬ್ (Hijab) ಸಮವಸ್ತ್ರ ಸಮರ ಶುರುವಾಗಿ ಸುಮಾರು ದಿನಗಳೂ ಕಳೆದುಹೋಗಿವೆ. ಸಮವಸ್ತ್ರದ ಜತೆ ಹಿಜಾಬ್​ಗೆ ಅನುಮತಿ ಕೋರಿ ಅರ್ಜಿ ವಿಚಾರಣೆ ಹೈಕೋರ್ಟ್​ ಮೇಟ್ಟಿಲೇರಿ ಇಂದಿಗೆ 11ನೇ ದಿನವಾಗಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ ಅವರನ್ನು ಒಳಗೊಂಡ ಪೂರ್ಣ ಪೀಠ ತೀರ್ಪನ್ನು ಕಾಯ್ದಿರಿಸಿದೆ. ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಈ ತೀರ್ಪನ್ನು ಕೈಗೊಳ್ಳಲಾಗಿದೆ. ಮಧ್ಯಂತರ ಅರ್ಜಿದಾರರು ಬಯಸಿದರೆ ಲಿಖಿತ ವಾದ ಸಲ್ಲಿಸಬಹುದಾಗಿದ್ದು, ವಾದ ಪ್ರತಿವಾದಿಗಳು ಕೂಡ ಲಿಖಿತ ವಾದ ಸಲ್ಲಿಸಬಹುದಾಗಿದೆ.

ಇಂದಿನ ಹಿಜಾಬ್ ಅರ್ಜಿ ವಿಚಾರಣೆಯ ಪ್ರಮುಖ ಅಂಶಗಳು ಹೀಗಿವೆ: 

  1. ಸಮವಸ್ತ್ರದ ಜತೆ ಹಿಜಾಬ್​ಗೆ ಅನುಮತಿ ಕೋರಿ ಅರ್ಜಿ ವಿಚಾರಣೆಯ ವಾದಮಂಡನೆ ಇಂದು ಮುಕ್ತಾಯವಾಗಿದ್ದು, ಹೈಕೋರ್ಟ್ ಪೂರ್ಣಪೀಠ​ ತೀರ್ಪು ಕಾಯ್ದಿರಿಸಿದೆ.
  2. ಹಿಜಾಬ್ ವಿಚಾರದಲ್ಲಿ ಪಿಎಫ್‌ಐ, ಸಿಎಫ್‌ಐ, ಜಮಾತ್ ಇ ಇಸ್ಲಾಮಿಗಳ ಪಾತ್ರವಿದೆ. ಭಾರತವನ್ನು ಇಸ್ಲಾಮೀಕರಣ ಮಾಡಬೇಕೆಂದು ಹಣಕಾಸಿನ ನೆರವು ನೀಡಲಾಗುತ್ತಿದೆ. ಹೀಗಾಗಿ ಸಿಬಿಐ ತನಿಖೆಯಾಗಬೇಕೆಂದು ಅರ್ಜಿದಾರರ ಪರ ಸುಭಾಶ್ ಝಾ ವಾದ ಮಂಡಿಸಿದರು.
  3. ಸಿಬಿಐ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದೀರಾ? ಸಂಘಟನೆಗಳ ಪಾತ್ರವಿದೆ ಎಂದು ಆರೋಪಿಸಿದ್ದೀರಾ? ಇದಕ್ಕೆ ನೀವು ಯಾವ ದಾಖಲೆಗಳನ್ನು ಸಲ್ಲಿಸಿದ್ದೀರಾ ಎಂದು ಸಿಜೆ ಪ್ರಶ್ನೆ ಮಾಡಿದರು.
  4. ಪಿಐಎಲ್ ಅರ್ಜಿದಾರ ಡಾ.ವಿನೋದ್ ಕುಲಕರ್ಣಿ ವಾದಮಂಡನೆ ಮಾಡಿದ್ದು, 1400 ವರ್ಷಗಳಿಂದ ಹಿಜಾಬ್ ಆಚರಣೆ ಮಾಡಲಾಗುತ್ತಿದೆ ಎಂದಿದ್ದಾರೆ.
  5. ಅರ್ಜಿದಾರರ ಪರ ರವಿವರ್ಮಕುಮಾರ್ ವಾದಮಂಡನೆ ಮಾಡಿದರು. ಕಾಲೇಜು ಅಭಿವೃದ್ದಿಗೆ ಶಾಸನಬದ್ಧ ಅಧಿಕಾರವಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಸಿಡಿಸಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಶಾಸಕರಿಗೆ ಕಾಲೇಜಿನ ಆಡಳಿತ ನೀಡುವುದೇ ಕಾನೂನುಬಾಹಿರ ಎಂದಿದ್ದಾರೆ.
  6. ಮುಖವನ್ನು ಬಟ್ಟೆಯಿಂದ ಮುಚ್ಚುವ ಅಗತ್ಯವಿಲ್ಲ. ಹಿಜಾಬ್ ಅತ್ಯಗತ್ಯ ಆಚರಣೆಯಲ್ಲ ಎಂಬ ವಾದ ಸರಿಯಲ್ಲ ಎಂದು ಯೂಸುಫ್ ಮುಕ್ಕಲಾ ವಾದಮಂಡನೆ ಮಾಡಿದರು. ಇದಕ್ಕೆ ಪ್ರತಿಯಾಗಿ ನೀವು ನಿಮ್ಮ ವಾದಗಳ ಒಂದು ಸಣ್ಣ ಟಿಪ್ಪಣಿ ನೀಡಿ ಎಂದು ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿತು.
  7. ಹೈಕೋರ್ಟ್​ನಲ್ಲಿ ಹಿಜಾಬ್ ಪ್ರಕರಣದ ವಿಚಾರಣೆ ಇಂದು 2:30ಕ್ಕೆ ಆರಂಭಗೊಂಡು, 4 ಗಂಟೆವರೆಗೆ ಮಾತ್ರ ವಿಚಾರಣೆ ನಡೆಸಲಾಯಿತು.

ಇದನ್ನೂ ಓದಿ:

Indonesia Earthquake: ಇಂಡೋನೇಷ್ಯಾದಲ್ಲಿ 6.1 ತೀವ್ರತೆಯ ಭೂಕಂಪ; ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

Published On - 5:32 pm, Fri, 25 February 22