Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಬಿಜೆಪಿ ಮುಖಂಡನ ರಾಸಲೀಲೆ ಸದ್ಯದಲ್ಲೇ ಬಿಡುಗಡೆ, ಪೋಸ್ಟ್ ಹಾಕಿದ್ದವರ ವಿರುದ್ಧ ದೂರು ದಾಖಲು

ಬಿಜೆಪಿ ಮುಖಂಡನ ರಾಸಲೀಲೆ ಬಿಡುಗಡೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪೋಸ್ಟ್ ಹಾಕಿದ ವ್ಯಕ್ತಿ ವಿರುದ್ಧ ಕ್ರಮಕೈಗೊಳ್ಳುವಂತೆ ಸಾಗರ ನಗರಸಭೆಯ ಸದಸ್ಯರ, ನಗರ ಬಿಜೆಪಿ ಮಂಡಲ ಅಧ್ಯಕ್ಷ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಸದ್ಯದಲ್ಲೇ ಸಾಗರ ಬಿಜೆಪಿ ಮುಖಂಡನ ರಾಸಲೀಲೆ ಬಿಡುಗಡೆಯಾಗಲಿದೆ ಎನ್ನುವ ಬರಹವನ್ನು ನಾಗರಾಜ ಗುಡ್ಡೆಮನೆ ಎನ್ನುವರ ಫೋನ್​ ನಂಬರ್​ನಿಂದ​ ವಾಟ್ಸಪ್​ ಗ್ರೂಪ್​ವೊಂದಕ್ಕೆ ಹಾಕಲಾಗಿದ್ದು, ಇದೀಗ ಇವರ ವಿರುದ್ಧ ಕಾನೂನು ಕ್ರಮಕ್ಕೆ ಗಣೇಶ್ ಪ್ರಸಾದ್ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಶಿವಮೊಗ್ಗ: ಬಿಜೆಪಿ ಮುಖಂಡನ ರಾಸಲೀಲೆ ಸದ್ಯದಲ್ಲೇ ಬಿಡುಗಡೆ, ಪೋಸ್ಟ್ ಹಾಕಿದ್ದವರ ವಿರುದ್ಧ ದೂರು ದಾಖಲು
ಸಾಗರ ಪೊಲೀಸ್ ಠಾಣೆ
Follow us
Basavaraj Yaraganavi
| Updated By: ರಮೇಶ್ ಬಿ. ಜವಳಗೇರಾ

Updated on:Aug 30, 2023 | 10:25 AM

ಶಿವಮೊಗ್ಗ, (ಆಗಸ್ಟ್, 30): ಬಿಜೆಪಿ ಮುಖಂಡನ (Sagara BJP Leader) ರಾಸಲೀಲೆ ಬಿಡುಗಡೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಿದ್ದವರ ವಿರುದ್ಧ ದೂರು ದಾಖಲಾಗಿದೆ. ಸಾಗರ ಬಿಜೆಪಿ ನಗರ ಮಂಡಲ ಗಣೇಶ್ ಪ್ರಸಾದ್ ಎನ್ನುವರು ದೂರು ನೀಡಿದ್ದಾರೆ. ಬಿಜೆಪಿ ಮುಖಂಡನ ರಾಸಲೀಲೆ ಬಿಡುಗಡೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ(Social Media) ಸುಳ್ಳು ಸುದ್ದಿ (Fake Post) ಹರಡಿದ ನಾಗರಾಜ ಗುಡ್ಡೆಮನೆ ವಿರುದ್ಧ ಕ್ರಮಕೈಗೊಳ್ಳುವಂತೆ ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಅವರಿಗೆ ದೂರು ನೀಡಿದ್ದಾರೆ. ಡಿವೈಎಸ್ಪಿ ಕಚೇರಿಯಿಂದ ಬಂದ ದೂರಿನ ಅರ್ಜಿಯನ್ನು ಪರಿಶೀಲಿಸಿದ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಗಣೇಶ್ ಪ್ರಸಾದ್ ನೀಡಿದ ದೂರಿನಲ್ಲೇನಿದೆ?

ಪ್ರಭಾವಿ ಬಿಜೆಪಿ ಮುಖಂಡನ ರಾಸಲೀಲೆ ಬಿಡುಗಡೆ ಆಗಲಿದೆ ಎಂದು ಸುಳ್ಳು ಸುದ್ದಿಯನ್ನು ಹಾಕಿದ್ದಾರೆ. ಅಲ್ಲದೇ ಸಾಗರ ನಗರ ಮುಖಂಡನ ರಾಸಲೀಲೆ ಸದ್ಯದ್ಲಲೇ ಬಿಡುಗಡೆಯಾಗಲಿದೆ ಎಂದು 25/8/2023ರಂದು ಸಂಜೆ ವಾಟ್ಸಪ್​ ಗ್ರೂಪ್​ನಲ್ಲಿ ಹಾಕಲಾಗಿದೆ. ಇದು ನಾಗರಾಜ ಗುಡ್ಡೆಮನೆಯವರ ವಾಟ್ಸಪ್​ ನಂಬರ್​ನಿಂದ ಗ್ರೂಪಿಗೆ ಹಾಕಲಾಗಿದ್ದು, ಇದರಿಂದ ಸಾಗರದ ಬಿಜೆಪಿ ಮುಖಂಡರು, ಕಾರ್ಯಕರ್ತರ ಪ್ರತಿಷ್ಠೆಗೆ ಮಸಿ ಬಳಿದಂತೆ ಆಗಿದೆ. ಅಲ್ಲದೇ ಪಕ್ಷದ ನಾಯಕರಿಗೆ ಇದು ಮುಜುಗರ ಉಂಟು ಮಾಡಿದ್ದು, ಈ ರೀತಿ ಸುಳ್ಳು ಸುದ್ದಿ ಮತ್ತು ಅವಹೇಳನಕಾರಿ ಪೋಸ್ಟ್ ಹಾಕಿದ ನಾಗರಾಜ ಗುಡ್ಡೆಮನೆ ಹಾಗೂ ಈತನ ದುಷ್ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಗಣೇಶ್ ಪ್ರಸಾದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನಷ್ಟು ಶಿವನೊಗ್ಗ ಜಿಲ್ಲ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:20 am, Wed, 30 August 23

ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಮಾ 22ರಂದು ಶಾಲಾ-ಕಾಲೇಜು​ ರಜೆ ಬಗ್ಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಲಕ್ನೋ ರಸ್ತೆ ಮಧ್ಯೆ ಕುಳಿತು 20 ನಿಮಿಷ ತಲೆ ಅಲ್ಲಾಡಿಸಿದ ಮಹಿಳೆ!
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಪತಿಯೊಂದಿಗೆ ಜಗಳವಾಡಿ ಬೆಂಕಿ ಹಚ್ಚಿಕೊಂಡು ಹೆಂಡತಿ ಆತ್ಮಹತ್ಯೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ಕರ್ನಾಟಕ ಬಂದ್​: ಫಿಲಂ ಚೇಂಬರ್ ತೆಗೆದುಕೊಂಡ ನಿರ್ಣಯಗಳು ಹೀಗಿವೆ
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ವಿಧಾನಸಭೆಯಲ್ಲಿ ಮೊಬೈಲ್ ಬಳಸಿದ್ದಕ್ಕೆ ಕೋಪಗೊಂಡ ಬಿಹಾರ ಸಿಎಂ ನಿತೀಶ್ ಕುಮಾರ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಗೊತ್ತಿರದ ವಿಷಯದ ಬಗ್ಗೆ ಮಾತಾಡುವ ಜಾಯಮಾನ ನನ್ನದಲ್ಲ: ಪಾಟೀಲ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಹರಪನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆ: ವರ್ಷದ ಮೊದಲ ಮಳೆಗೆ ಜನರು ಖುಷ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಯತ್ನಾಳ್​ರನ್ನು ದೇಶದ್ರೋಹಿ ಎಂದು ಜರಿದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ ಕೇಸ್: ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು
ಸದನದಲ್ಲಿ ರೋಷಾವೇಶದಿಂದ ಕೂಗಾಡಿದ ಶಾಸಕ ಮುನಿರತ್ನ ನಾಯ್ಡು