ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಎಸ್​ಡಿಪಿಐ ವಿರೋಧ

| Updated By: ವಿವೇಕ ಬಿರಾದಾರ

Updated on: Jan 21, 2024 | 2:44 PM

ಅಯೋಧ್ಯೆಯಲ್ಲಿ ಭ್ಯವ ರಾಮಮಂದಿರ ನಿರ್ಮಾಣವಾಗಿದೆ. ಮಂದಿರದಲ್ಲಿ ರಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ನಾಳೆ (ಸೋಮವಾರ ಜ.22) ರಂದು ಪ್ರಾಣ ಪ್ರತಿಷ್ಠೆ ನೆರವೇರುತ್ತದೆ. ಇನ್ನು ಈ ರಾಮಮಂದಿರ ನಿರ್ಮಾಣ ಮಾಡಿರುವುದಕ್ಕೆ ಎಸ್​ಡಿಪಿಐ ವಿರೋಧ ವ್ಯಕ್ತಪಡಿಸಿದೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಎಸ್​ಡಿಪಿಐ ವಿರೋಧ
ಎಸ್​​ಡಿಪಿಐ ಪೋಸ್ಟ್​​
Follow us on

ಶಿವಮೊಗ್ಗ, ಜನವರಿ 21: ಅಯೋಧ್ಯೆಯಲ್ಲಿ (Ayodhya) ಭ್ಯವ ರಾಮಮಂದಿರ ನಿರ್ಮಾಣವಾಗಿದೆ. ಮಂದಿರದಲ್ಲಿ ರಮಲಲ್ಲಾ (ಬಾಲರಾಮ)ನ (Ramlalla) ಪ್ರಾಣ ಪ್ರತಿಷ್ಠೆಗೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ನಾಳೆ (ಸೋಮವಾರ ಜ.22) ರಂದು ಪ್ರಾಣ ಪ್ರತಿಷ್ಠೆ ನೆರವೇರುತ್ತದೆ. ಇನ್ನು ಈ ರಾಮಮಂದಿರ (Ram mandir) ನಿರ್ಮಾಣ ಮಾಡಿರುವುದಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವಿರೋಧ ವ್ಯಕ್ತಪಡಿಸಿದೆ.

ಹೌದು, “ರಾಮಮಂದಿರವನ್ನು ಬಾಬ್ರಿ ಮಸೀದಿಯ ಜಾಗದಲ್ಲಿ ನಿರ್ಮಿಸಲಾಗಿದೆ. ನಾವು ಯಾರ ವಿರುದ್ಧವೂ ಇಲ್ಲ. ನಾವು ನ್ಯಾಯ ಕೇಳುತ್ತಿದ್ದೇವೆ ಅಷ್ಟೇ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಲಾಗಿದೆ. ಇನ್ನು ಕೆಲವು ಎಸ್​ಡಿಪಿಐ ಮುಖಂಡರು ತಮ್ಮ ಈ ಸಾಲುಗಳನ್ನು ವಾಟ್ಸಪ್​​ ಸ್ಟೇಟಸ್​ ಇಟ್ಟಿದ್ದಾರೆ.

ಇದನ್ನೂ ಓದಿ: Ram Mandir: ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠೆ ಕುರಿತು ಟೀಕಿಸುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ; ಇಲ್ಲಿದೆ ವಿಡಿಯೋ

ರಾಮಮಂದಿರ ಉದ್ಘಾಟನೆ, ಆ ದಿನ ನೆತ್ತರು ಹರಿಯುವುದು ಗ್ಯಾರಂಟಿ

ನೆಲಮಂಗಲದಲ್ಲಿ ಅನ್ಯಕೋಮಿನ ವ್ಯಕ್ತಿಯಿಂದ ವಿವಾದಾತ್ಮಕ ಹೇಳಿಕೆ ನೀಡಲಾಗಿದೆ. ‘ಆ ದಿನ (ಜನವರಿ22 ರಂದು) ನೆತ್ತರು ಹರಿಯುವುದು ಗ್ಯಾರಂಟಿ. ರಾಮಮಂದಿರ ಉರುಳಿಸಿ ಅದೇ ಜಾಗದಲ್ಲಿ ಮಸೀದಿ ನಿರ್ಮಾಣ ಆಗುತ್ತೆ’ ಬೂದಿಹಾಳ್ ಗ್ರಾಮದಲ್ಲಿರುವ ಅಕ್ಕಪಕ್ಕದ ಅಂಗಡಿಯವರು ಗಲಾಟೆ ಮಾಡಿಕೊಂಡಿದ್ದಾರೆ. ಧರ್ಮೇಂದರ ಪಾಂಡೆ ಹಾಗೂ ಹುಸೇನ್ ನಡುವೆ ಮಾತುಕತೆ ಆರೋಪ ಮಾಡಲಾಗಿದ್ದು, ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ NCR ದಾಖಲು ಮಾಡಲಾಗಿದೆ.

ನೆಲಮಂಗಲ ಭಜರಂಗದಳದಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ಹಿನ್ನೆಲೆ ಹುಸೇನ್ ಹೇಳಿಕೆಯನ್ನು ಪೊಲೀಸರು ಪಡೆಕೊಂಡಿದ್ದಾರೆ. ಇತ್ತ ಮನೆಗೆ ಬಾರದ ಪತಿಯನ್ನ ನೆನದು ಹುಸೇನ್ ಪತ್ನಿ ಮದೀನಾ ಕಣ್ಣೀರು ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ