ಶಿವಮೊಗ್ಗದಲ್ಲಿ ವಿದ್ಯುತ್ ತಂತಿ ಬೇಲಿ ಸ್ಪರ್ಶಸಿ 2 ಗಂಡಾನೆಗಳ ಸಾವು

| Updated By: ವಿವೇಕ ಬಿರಾದಾರ

Updated on: Sep 25, 2022 | 5:02 PM

ವಿದ್ಯುತ್ ತಂತಿ ಸ್ಪರ್ಶವಾಗಿ 2 ಆನೆಗಳ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಚನ್ನಹಳ್ಳಿಯಲ್ಲಿ ನಡೆದಿದೆ.

ಶಿವಮೊಗ್ಗದಲ್ಲಿ ವಿದ್ಯುತ್ ತಂತಿ ಬೇಲಿ ಸ್ಪರ್ಶಸಿ 2 ಗಂಡಾನೆಗಳ ಸಾವು
ಸಾವನ್ನಪ್ಪಿರುವ ಆನೆಗಳು
Follow us on

ಶಿವಮೊಗ್ಗ: ವಿದ್ಯುತ್ ತಂತಿ ಸ್ಪರ್ಶವಾಗಿ 2 ಆನೆಗಳ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಚನ್ನಹಳ್ಳಿಯಲ್ಲಿ ನಡೆದಿದೆ. ಅರಣ್ಯದಂಚಿನ ಭಾಗದ ರೈತರು ಜೋಳದ ಹೊಲಕ್ಕೆ ವಿದ್ಯುತ್​ ತಂತಿ ಬೇಲಿ ಅಳವಡಿಸಿದ್ದಾರೆ. ಜೋಳದ ಹೊಲಕ್ಕೆ ಬಂದ ಕಾಡಾನೆಗಳಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೆ ಮೃತಪಟ್ಟಿವೆ. 20 ಮತ್ತು 22 ವರ್ಷದ ಗಂಡು ಆನೆಗಳು ಮೃತಪಟ್ಟಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡು ಹಂದಿ ಭೇಟೆಯಾಡಲು ವಿದ್ಯತ್​ ತಂತಿ ಹಾಕಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ