Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸುವ ’ಮೊದಲ ಪ್ರಯಾಣಿಕ’ ಪ್ರಧಾನಿ ಮೋದಿ ಸ್ವಾಗತಕ್ಕೆ ಸರ್ವ ಸಜ್ಜು -ಸಂಸದ ಬಿ ವೈ ರಾಘವೇಂದ್ರ
ಫೆ.27ರ ಬೆಳಗ್ಗೆ 11.15 ಕ್ಕೆ ಪ್ರಧಾನಿ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಹೊಸ ರನ್ ವೇಗೆ ವಿಮಾನದಲ್ಲಿ ಬಂದಿಳಿಯಲಿದ್ದಾರೆ. 2 ಗಂಟೆ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಗೆ ತೆರಳಲಿದ್ದಾರೆ ಎಂದು ಸಂಸದ ರಾಘವೇಂದ್ರ ಮಾಹಿತ ನೀಡಿದ್ದಾರೆ.
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ(Narendra Modi) ಫೆ. 27ರ ಸೋಮವಾರ ಶಿವಮೊಗ್ಗ ವಿಮಾನ ನಿಲ್ದಾಣ (Shivamogga Airport) ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆದಿದೆ. ಜಿಲ್ಲಾಡಳಿತ ಮತ್ತು ಸಂಘಟನೆ ತಯಾರಿ ನಡೆಸಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ(BY Raghavendra) ಮಾಹಿತಿ ನೀಡಿದ್ದಾರೆ.
ಫೆ.27ರ ಬೆಳಗ್ಗೆ 11.15 ಕ್ಕೆ ಪ್ರಧಾನಿ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಹೊಸ ರನ್ ವೇಗೆ ವಿಮಾನದಲ್ಲಿ ಬಂದಿಳಿಯಲಿದ್ದಾರೆ. 2 ಗಂಟೆ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 1 ಗಂಟೆಗೆ ಬೆಳಗಾವಿಗೆ ತೆರಳಲಿದ್ದಾರೆ. ಈಗಾಗಲೇ ಡಿಜಿಸಿಎಯಿಂದ ಏರ್ಪೋಟ್ಗೆ ಲೈಸೆನ್ಸ್ ಸಿಕ್ಕಿದೆ. ರಾಜ್ಯದಲ್ಲಿಯೇ ಮೊದಲ ಹಂತದಲ್ಲಿಯೇ ಲೈಸೆನ್ಸ್ ಸಿಕ್ಕ ಮೊದಲ ಏರ್ಪೋಟ್ ಇದಾಗಿದೆ. ಸುಮಾರು 3 ಲಕ್ಷಕ್ಕಿಂತ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 10 ಗಂಟೆಯೊಳಗೆ ಏರ್ಪೋಟ್ ಒಳಗೆ ಸಾರ್ವಜನಿಕರು ಆಗಮಿಸಬೇಕಿದೆ. ಬಳಿಕ ಗೇಟ್ ಮುಚ್ಚಲಾಗುತ್ತದೆ. ಹೀಗಾಗಿ ಮೊದಲೇ ಸಾರ್ವಜನಿಕರು ಏರ್ಪೋಟ್ ಒಳಗೆ ಆಗಮಿಸಬೇಕಾಗಿದೆ ಎಂದು ಸಾರ್ವಜನಿಕರಿಗೆ ಬೇಗ ಬರುವಂತೆ ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿಕೊಂಡಿದ್ದಾರೆ.
ಏರ್ಪೋಟ್ಗೆ ಕುವೆಂಪು ಅವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ನಿನ್ನೆಯ(ಫೆ.20) ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ. ಕೇಂದ್ರಕ್ಕೆ ಈ ಹೆಸರು ಪ್ರಸ್ತಾವನೆಗೆ ಕಳಿಸಲಾಗಿದೆ. ಶಿವಮೊಗ್ಗ, ತಾಳಗುಪ್ಪ, ಸಾಗರ ರೈಲು ನಿಲ್ದಾಣಗಳನ್ನು ಅಪ್ ಗ್ರೇಡ್ ಮಾಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಕೂಡ ಕೇಂದ್ರಕ್ಕೆ ಈ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೋಗಾನೆ ರೈತರಿಗೆ ಆದಷ್ಟು ಬೇಗ ಪರಿಹಾರ ನಿವೇಶನ ನೀಡಲಾಗುತ್ತದೆ. ಏರ್ಪೋಟ್ಗೆ ಭೂಮಿ ನೀಡಿದವರಿಗೆ ನಿವೇಶನ ನೀಡಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರ ನಿನ್ನೆ ಆದೇಶ ಹೊರಡಿಸಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.
ಸಿಎಂಗೆ ಧನ್ಯವಾದ ತಿಳಿಸಿದ ಬಿವೈ ರಾಘವೇಂದ್ರ
ಹೈಟೆಕ್ ಆಗಿ ಮೇಲ್ದರ್ಜೇಗೇರಿಸಿರುವ ಶಿವಮೊಗ್ಗ ರೇಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕ ಅರಸರ ಹೆಸರು ನಾಮಕರಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹೆಸರನ್ನು ಕೇಂದ್ರಕ್ಕೆ ರವಾನಿಸಲಾಗಿದೆ. ಸಾಧಕರನ್ನು ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ಮಾಡಬಾರದು. ಅವರ ಸಾಧನೆಗಳು ಇಂದಿನ ದಿನಕ್ಕೂ ಪ್ರೇರಣೆ ಆಗಬೇಕಿದೆ. ಕುವೆಂಪು, ಕೆಳದಿ ಶಿವಪ್ಪನವರ ಹೆಸರು ಅಂತಿಮ ಮಾಡಿದಕ್ಕೆ ಸಿಎಂ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಒಟ್ಟು ವಿಮಾನ ನಿಲ್ದಾಣಕ್ಕೆ 600 ಕೋಟಿ ರೂ. ವ್ಯಯಿಸಲಾಗಿದೆ. ಇದರಲ್ಲಿ ಕಟ್ಟಡ ಕಾಮಗಾರಿಗೆ 449 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನು ಉಳಿದ ಹಣದಲ್ಲಿ ಭೂ ಖರೀದಿಗೆ ನೀಡಲಾಗಿದೆ. ಭೂಮಿಯನ್ನು ಕಳೆದುಕೊಂಡವರಿಗೆ ಕರ್ನಾಟಕ ಗೃಹ ಮಂಡಳಿ ನಿವೇಶನ ನೀಡಲಿದೆ. ಈಗಾಗಲೇ 320 ಕುಟುಂಬಗಳಿಗೆ ನೀಡಲು ನಿವೇಶನಗಳು ಸಿದ್ದವಾಗಿವೆ ಎಂದರು.
ಹಾಗೇ ವಿಮಾನ ನಿಲ್ದಾಣದ ಪಕ್ಕದಲ್ಲಿ ಪ್ರಧಾನಿ ಮೋದಿ ಅವರು ಹೈವೆ, ಸ್ಮಾರ್ಟ್ ಸಿಟಿ, ರೇಲ್ವೆ ಕಾಮಗಾರಿಗಳನ್ನು ಮತ್ತು ಹಲವು ಗ್ರಾಮಗಳಿಗೆ ನೀರಿನ ಸೌಲಭ್ಯ, ಜನ್ ಜೀವನ್ ಮಿಷನ್ನ್ನು ಉದ್ಘಾಟಿಸಲಿದ್ದಾರೆ. ಮತ್ತು ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:53 pm, Tue, 21 February 23