ಶಿವಮೊಗ್ಗದಲ್ಲಿ ಆತಂಕ ಸೃಷ್ಟಿಸಿದ ದರೋಡೆಕೋರರ ಗ್ಯಾಂಗ್​: ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಓಡಾಟ

ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ಆರು ಜನರ ದರೋಡೆಕೋರರ ಗ್ಯಾಂಗ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಖ ಮುಚ್ಚಿಕೊಂಡು ಶಸ್ತ್ರಾಸ್ತ್ರಗಳೊಂದಿಗೆ ಓಡಾಡುತ್ತಿದ್ದ ದರೋಡೆಕೋರರ ಚಲನವಲನ ಬಡಾವಣೆ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಹೆಚ್ಚುವರಿ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಆತಂಕ ಸೃಷ್ಟಿಸಿದ ದರೋಡೆಕೋರರ ಗ್ಯಾಂಗ್​: ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಓಡಾಟ
ದರೋಡೆಕೋರರ ಗ್ಯಾಂಗ್ ಓಡಾಟ
Edited By:

Updated on: Jul 20, 2025 | 8:00 PM

ಶಿವಮೊಗ್ಗ, ಜುಲೈ 20: ಶಿವಮೊಗ್ಗದಲ್ಲಿ (shivamogga) ಕಳೆದ ಒಂದು ತಿಂಗಳನಿಂದ ಮತ್ತೆ ಕಳ್ಳತನ ಮತ್ತು ದರೋಡೆಕೋರರು (Robbers) ಆಕ್ಟೀವ್ ಆಗಿದ್ದಾರೆ. ಮನೆಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮತ್ತು ದರೋಡೆ ನಡೆಸುತ್ತಿದ್ದಾರೆ. ಕೈಯಲ್ಲಿ ಮಚ್ಚು, ಲಾಂಗ್, ಚಾಕು ಹಿಡಿದುಕೊಂಡಿದ್ದ ಆರು ದರೋಡೆಕೋರರ ಗ್ಯಾಂಗ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಡ್ಡಿನಕೊಪ್ಪದ ಸಮೀಪದ ಪುಟ್ಟಪ್ಪ ಕ್ಯಾಂಪ್‌ ಬಡಾವಣೆಯಲ್ಲಿ ಘಟನೆ ನಡೆದಿದೆ.

ಶಿವಮೊಗ್ಗ ತಾಲೂಕಿನ ವಡ್ಡಿನಕೊಪ್ಪದ ಪುಟ್ಟಪ್ಪ ಕ್ಯಾಂಪ್ ಲೇಔಟ್‌ ಒಂದರಲ್ಲಿ ಶನಿವಾರ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಆರು ದರೋಡೆಕೋರರ ಗ್ಯಾಂಗ್ ಶಸ್ತ್ರಾಸ್ತ್ರ ಹಿಡಿದು ಹೊಂಚು ಹಾಕುವಂತೆ ಓಡಾಡಿದ್ದಾರೆ. ಈ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಡಾವಣೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ವಿಚಿತ್ರ ವೇಷ

ದರೋಡೆಕೋರರು ಜೀನ್ಸ್‌ ಪ್ಯಾಂಟ್‌, ಬನಿಯನ್‌ ಮಾತ್ರ ಧರಿಸಿದ್ದಾರೆ. ಸೊಂಟದಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದಾರೆ. ಗುರುತು ಮರೆ ಮಾಡಲು ಎಲ್ಲರೂ ಮುಖಕ್ಕೆ ಬಟ್ಟೆ ಕೊಟ್ಟಿಕೊಂಡಿದ್ದಾರೆ. ಕೈಯಲ್ಲಿ ಟಾರ್ಚ್‌ ಇದೆ. ಒಬ್ಬಾತ ಕೈಗೆ ಗ್ಲೌಸ್‌ ಧರಿಸಿದ್ದಾನೆ. ಮತ್ತೊಬ್ಬ ಬ್ಯಾಗ್‌ ಹಾಕಿದ್ದಾನೆ.

ಇದನ್ನೂ ಓದಿ
ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಆತ್ಮಹತ್ಯೆ
ಎಲ್ಲ ಬಿ ಖಾತಾದಾರರಿಗೆ ಸಿಗಲಿದೆ ಎ ಖಾತಾ ಮಾನ್ಯತೆ ನೀಡಲು ಸಂಪುಟ ನಿರ್ಧಾರ
ಶುಶ್ರುತಿ ಸಹಕಾರ ಬ್ಯಾಂಕ್ ವಂಚನೆ: ಇಡಿ ತನಿಖೆ ವೇಳೆ ಆಘಾತಕಾರಿ ಅಂಶ ಬಯಲಿಗೆ
ವಿಡಿಯೋ: ಆಟೋ ಡ್ರೈವರ್ ಮೇಲೆ ಬಸ್ ಹರಿಸಲು ಮುಂದಾದ ಬಿಎಂಟಿಸಿ ಚಾಲಕ

ಇದನ್ನೂ ಓದಿ: ಬೆಂಗಳೂರಿನಲ್ಲಿ ಲಕ್ಷಾಂತರ ರೂ. ವಂಚನೆ: ಇಮೇಜ್ ಸರ್ಚ್ ಟೂಲ್​ಗಳನ್ನು ಬಳಸಿ 20 ವರ್ಷಗಳ ನಂತರ ಆರೋಪಿಯ ಬಂಧಿಸಿದ ಸಿಬಿಐ!

ಆರು ಮಂದಿ ಪುಟ್ಟಪ್ಪ ಕ್ಯಾಂಪ್‌ ಬಡಾವಣೆಯ ಎಲ್ಲ ರಸ್ತೆಗಳಲ್ಲಿಯೂ ನಡೆದುಕೊಂಡು ಹೋಗಿದ್ದಾರೆ. ಈ ದೃಶ್ಯ ನೋಡಿದ ಬಳಿಕ ಸ್ಥಳೀಯರೆಲ್ಲರೂ ಬೆಚ್ಚಿಬಿದ್ದಿದ್ದಾರೆ. ಎಲ್ಲರ ಅದೃಷ್ಟ ಚೆನ್ನಾಗಿತ್ತು, ನಿನ್ನೆ ಯಾವುದೇ ಮನೆಯಲ್ಲಿ ಕಳ್ಳತನವಾಗಿಲ್ಲ. ಕಳ್ಳರು ಬಂದು ಹೋಗಿರುವ ಸುದ್ದಿಯಿಂದ ಬಡಾವಣೆಯ ಜನರು ಸದ್ಯ ಭಯಭೀತರಾಗಿದ್ದಾರೆ.

ಬಡಾವಣೆಯ ಜನರು ಬೆಳಗ್ಗೆ ಎದ್ದು ಸಿಸಿ ಕ್ಯಾಮೆರಾ ಗಮನಿಸಿದಾಗ ಈ ದರೋಡೆಕೋರರ ಗ್ಯಾಂಗ್ ಓಡಾಡಿದ್ದು ಪತ್ತೆಯಾಗಿದೆ. ಸದ್ಯ ಈ ಬಗ್ಗೆ ಶಿವಮೊಗ್ಗದ ತುಂಗಾ ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್​​ಪಿ ಕಾರಿಯಪ್ಪ ಹಾಗೂ ತುಂಗಾ ನಗರ ಪಿಐ ಗುರುರಾಜ್ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಶುಶ್ರುತಿ ಸಹಕಾರ ಸೌಹಾರ್ದ ಬ್ಯಾಂಕ್ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಇಡಿ ಎಂಟ್ರಿ: ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಯಲಿಗೆ

ಈ ದರೋಡೆಕೋರರು ಬಂದು ಹೋದ ಬಳಿಕ ಪುಟ್ಟಪ್ಪ ಕ್ಯಾಂಪ್​ನ ನಿವಾಸಿಗಳಿಗೆ ಭಯ ಶುರುವಾಗಿದೆ. ಬಡಾವಣೆಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ. ಒಟ್ಟು 150 ಜನರು ವಾಸವಾಗಿದ್ದಾರೆ. ಸರಕಾರಿ ನೌಕರರು ವಾಸವಾಗಿರುವ ಹೈಟೆಕ್ ಮನೆಗಳಿವೆ. ಕಳ್ಳರು ಮತ್ತು ದರೋಡೆಕೋರರು ಸಿಂಗಲ್ ಮನೆಗಳನ್ನು ನೋಡಿಕೊಂಡು ಟಾರ್ಗೆಟ್​ ಮಾಡಿದ್ದಾರೆ. ಎರಡು ಮನೆಗಳ ಸಿಸಿ ಕ್ಯಾಮೆರಾದಲ್ಲಿ ಈ ಗ್ಯಾಂಗ್ ಚಲನವಲನ ಸೆರೆಯಾಗಿದೆ. ಪೊಲೀಸರು ಈ ಗ್ಯಾಂಗ್​ನ್ನು ಕೂಡಲೇ ಲಾಕ್ ಮಾಡುವಂತೆ ಸ್ಥಳೀಯರಾದ ಸತೀಶ್​ ಎಂಬುವವರು ಒತ್ತಾಯಿಸಿದ್ದಾರೆ.

ದರೋಡೆಕೋರರ ಪತ್ತೆಗೆ ಮುಂದಾದ ಪೊಲೀಸರು

ಸದ್ಯ ಪೊಲೀಸರು  ಸಿಸಿ ಕ್ಯಾಮೆರಾ ವಿಡಿಯೋ ಆಧಾರಿಸಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ನಗರದಲ್ಲಿ ಆತಂಕ ಸೃಷ್ಟಿಸಿರುವ ದರೋಡೆಕೋರರ ಗ್ಯಾಂಗ್​​ ಅನ್ನು ಪೊಲೀಸರು ಪತ್ತೆ ಮಾಡಬೇಕಿದೆ. ಆ ಮೂಲಕ ನಗರದ ಜನರ ಆತಂಕ ಭಯ ದೂರ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:54 pm, Sun, 20 July 25