ಕೊರೊನಾ ಆತಂಕ: ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆ ರದ್ದು ಮಾಡಿದ ದುರ್ಗಿಗುಡಿಯ ಸರ್ಕಾರಿ ಆಂಗ್ಲ ಶಾಲೆ

ಕೊರೊನಾ ಆತಂಕ: ಶಾಲೆಯಲ್ಲಿ ಬೆಳಗಿನ ಪ್ರಾರ್ಥನೆ ರದ್ದು ಮಾಡಿದ ದುರ್ಗಿಗುಡಿಯ ಸರ್ಕಾರಿ ಆಂಗ್ಲ ಶಾಲೆ
ಸಾಂದರ್ಭಿಕ ಚಿತ್ರ

ಶಿವಮೊಗ್ಗದ ದುರ್ಗಿಗುಡಿಯ ಸರ್ಕಾರಿ ಆಂಗ್ಲ ಶಾಲೆ ಪ್ರಾರ್ಥನೆ ರದ್ದುಗೊಳಿಸಿದೆ. ಪ್ರಾರ್ಥನೆ ವೇಳೆ ಮಕ್ಕಳು ಒಂದು ಕಡೆ ಸೇರುವ ಹಿನ್ನೆಲೆ ಅಂತರ ಪಾಲನೆ ಕಷ್ಟವೆಂದು ಪ್ರಾರ್ಥನೆ ರದ್ದುಗೊಳಿಸಿದೆ.

TV9kannada Web Team

| Edited By: Ayesha Banu

Dec 08, 2021 | 1:41 PM

ಶಿವಮೊಗ್ಗ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಶಾಲಾ ಮಕ್ಕಳಲ್ಲಿ ಕೊರೊನಾ ಹೆಚ್ಚಾಗಿ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ದುರ್ಗಿಗುಡಿಯ ಸರ್ಕಾರಿ ಆಂಗ್ಲ ಶಾಲೆ ಪ್ರಾರ್ಥನೆ ರದ್ದುಗೊಳಿಸಿದೆ. ಪ್ರಾರ್ಥನೆ ವೇಳೆ ಮಕ್ಕಳು ಒಂದು ಕಡೆ ಸೇರುವ ಹಿನ್ನೆಲೆ ಅಂತರ ಪಾಲನೆ ಕಷ್ಟವೆಂದು ಪ್ರಾರ್ಥನೆ ರದ್ದುಗೊಳಿಸಿದೆ.

ಮೂರನೇ ಅಲೆ ಭೀತಿ ಹಿನ್ನಲೆ ಶಿಕ್ಷಣದ ಇಲಾಖೆಯಿಂದ ಶಾಲೆಗಳಿಗೆ ಎಸ್ಒಪಿ ನಿಯಮ ಪಾಲನೆಗೆ ಸೂಚನೆ ನೀಡಲಾಗಿದೆ. ಶಿವಮೊಗ್ಗದ ದುರ್ಗಿಗುಡಿ ಸರಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಕುರಿತು ನಿನ್ನೆ ಟಿವಿ9 ವರದಿ ಮಾಡಿತ್ತು. ವರದಿ ಹಿನ್ನಲೆ ಎಚ್ಚೆತ್ತುಕೊಂಡ ಶಾಲೆಯ ಆಡಳಿತ ಮಂಡಳಿ ಕಡ್ಡಾಯ ಮಾಸ್ಕ್, ದೈಹಿಕ ಅಂತರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಸದ್ಯ ಇದೇ ಕಾರಣಕ್ಕೆ ಶಾಲೆಯಲ್ಲಿ ಬೆಳಗ್ಗೆಯ ಪ್ರಾರ್ಥನೆಯನ್ನು ಕೂಡ ರದ್ದುಗೊಳಿಸಿದೆ.

ಶಿವಮೊಗ್ಗದ ಶಾಲೆಗಳಲ್ಲಿ ಕೊವಿಡ್ ನಿಯಮಗಳ ಉಲ್ಲಂಘನೆ ಶಿವಮೊಗ್ಗದ ದುರ್ಗಿಗುಡಿ ಸರಕಾರಿ ಹಿರಿಯ ಪ್ರಾಥಮಿಕ ಅಂಗ್ಲ ಮಾಧ್ಯಮ ಶಾಲೆಗೆ ರಾಜ್ಯದಲ್ಲೇ ಅತ್ಯುತ್ತಮ ಸರಕಾರಿ ಆಂಗ್ಲ ಮಾಧ್ಯಮ ಶಾಲೆ ಎನ್ನುವ ಹೆಗ್ಗಳಿಕೆ ಇದೆ. ಆದ್ರೆ ಶಾಲೆಯಲ್ಲಿ ಅವ್ಯವಸ್ಥೆ, ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದ ಕುರಿತು ನಿನ್ನೆ ಟಿವಿ9 ವರದಿ ಪ್ರಸಾರ ಮಾಡಿತ್ತು. 1 ರಿಂದ 7ನೇ ತರಗತಿ ವರೆಗಿನ 1,124 ವಿದ್ಯಾರ್ಥಿಗಳು ಇಲ್ಲಿ ವಿದ್ಯೆ ಕಲಿಯುತ್ತಿದ್ದಾರೆ. ಕೊಠಡಿಗಳು ಸೇರಿದಂತೆ ಇತರೆ ಸೌಲಭ್ಯಗಳ ಕೊರತೆ ಶಾಲೆಯಲ್ಲಿದೆ. ಈ ಬಗ್ಗೆ ಸರಕಾರಿ ಶಾಲೆಯ ಶಿಕ್ಷಕಿ ಟಿವಿ9 ಬಳಿ ಅಳಲು ತೋರಿಕೊಂಡಿದ್ದರು. ಒಂದು ಕೊಠಡಿಯಲ್ಲಿ 45ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಠ ಕೇಳುತ್ತಾರೆ. ಚಿಕ್ಕ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕೂರಲೂ ಪರದಾಡುವಂತ ಪರಿಸ್ಥಿತಿ ಇದೆ ಎಂದು ಹೇಳಿದ್ದರು.

ಇದನ್ನೂ ಓದಿ: ಹೊಸ ಸೋಫಾದ ಒಳಗೆ ಹೆಬ್ಬಾವು ಪ್ರತ್ಯಕ್ಷ; ಹಾವನ್ನು ರಕ್ಷಿಸಿದ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

Follow us on

Related Stories

Most Read Stories

Click on your DTH Provider to Add TV9 Kannada