AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಸೂರು ದಂಗೆ; ಸ್ವಾತಂತ್ರ್ಯ ಪಡೆದ ದೇಶದ ಮೊದಲ ಗ್ರಾಮ, ಇಲ್ಲಿದೆ ಹೋರಾಟದ ಹಾದಿ

ಬ್ರಿಟಿಷರ ವಿರುದ್ಧ ನಿಂತರವಾಗಿ ಹೋರಾಡಿದ ಪ್ರತಿಫಲವಾಗಿ ಕೊನೆಗೂ ಭಾರತೀಯರಿಗೆ ಸ್ವಾತಂತ್ರ್ಯ ಸಿಕ್ತು. ಲಕ್ಷಾಂತರ ಜನರ ಹೋರಾಟ, ತ್ಯಾಗ ಬಲಿದಾನದ ಬಳಿಕ ನಮಗೆಲ್ಲ ಈ ಸ್ವಾತಂತ್ರ್ಯ ಸಿಕ್ಕಿದೆ. ಇನ್ನೂ ದೇಶದ ಮೊದಲ ಸ್ವತಂತ್ರ ಗ್ರಾಮವೆಂದು ಘೋಷಣೆ ಮಾಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲ ಹೋರಾಟಗಾರರ ಗಮನ ಸೆಳೆದಿದ್ದು ಈಸೂರು ಗ್ರಾಮ. ಈ ಗ್ರಾಮದ ಹೋರಾಟದ ಇತಿಹಾಸ ನೋಡಿದ್ರೆ ಮೈ ರೋಮಾಂಚನಗೊಳ್ಳುತ್ತೆ. ಏಸೂರು ಕೊಟ್ಟರೂ ಈಸೂರು ಕೊಡುವುದಿಲ್ಲ ಎನ್ನುವ ಘೋಷಣೆಯು ದೇಶದಲ್ಲಿ ಸಂಚಲನ ಮೂಡಿಸಿತ್ತು. ಈಸೂರು ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚಿನ ಕುರಿತು ಒಂದು ವರದಿ ಇಲ್ಲಿದೆ.

ಈಸೂರು ದಂಗೆ; ಸ್ವಾತಂತ್ರ್ಯ ಪಡೆದ ದೇಶದ ಮೊದಲ ಗ್ರಾಮ, ಇಲ್ಲಿದೆ ಹೋರಾಟದ ಹಾದಿ
ಈಸೂರು
Basavaraj Yaraganavi
| Updated By: ಆಯೇಷಾ ಬಾನು|

Updated on: Jun 16, 2024 | 1:25 PM

Share

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನಲ್ಲೊಂದು ಈಸೂರು ಗ್ರಾಮವಿದೆ. ಶಿವಮೊಗ್ಗ ಜಿಲ್ಲೆಯ ಈಸೂರು ಅಂದ್ರೆ ಎಲ್ಲರ ಬಾಯಿಯಲ್ಲೂ ಬರುವುದು ಒಂದೇ ಶಬ್ದ ದಂಗೆ ಅಂತಾ. ಸ್ವಾತಂತ್ರ್ಯ ಹೋರಾಟದಲ್ಲಿ ಈ ಇಡೀ ಗ್ರಾಮವೇ ಪಾಲ್ಗೊಂಡಿದ್ದು ವಿಶೇಷ. ಇಂದಿಗೂ ಈ ಗ್ರಾಮವನ್ನು ವೀರಪುತ್ರರ ನಾಡು ಎಂದೇ ಕರೆಯಲಾಗುತ್ತೆ. ಭಾರತದ ಭೂಪಟದಲ್ಲಿ ಈ ಪುಟ್ಟ ಗ್ರಾಮಕ್ಕೆ ವಿಶೇಷ ಸ್ಥಾನವಿದೆ. 1942ರ ಮೊದಲು ಈ ಗ್ರಾಮದಲ್ಲಿ ಪ್ರತಿಯೊಂದು ಮನೆಯಿಂದ ಒಬ್ಬರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುವ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು. ಏನಾದ್ರು ಮಾಡಿ ದೇಶದಿಂದ ಬ್ರಿಟಿಷರನ್ನು ಹೊಡೆದೊಡಿಸಬೇಕೆನ್ನುವ ಛಲವೂ ಈ ಗ್ರಾಮದ ಹೋರಾಟಗಾರಲ್ಲಿತ್ತು. ಇಂದಿಗೂ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಎಲ್ಲ ಇತಿಹಾಸಗಳು ಜೀವಂತವಾಗಿದೆ. ಅದು ಭಾರತದಿಂದ ಬ್ರಿಟಿಷರನ್ನು ತೊಲಗಿಸಬೇಕೆಂದು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ಹೊತ್ತು. ಅದೆಷ್ಟೋ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅಂತಹ ಸಂದರ್ಭದಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವಾತಂತ್ರ್ಯ ಪಡೆದ ಗ್ರಾಮವೆಂದು ಘೋಷಿಸಿಕೊಂಡು ದಿಟ್ಟತನ ತೋರಿದ ನಾಡು ಕುಮುದಿನಿ ನದಿಯ ದಂಡೆಯ ಮೇಲಿರುವ ಈ ಪುಟ್ಟ ಗ್ರಾಮ ಈಸೂರು. 1942ರಲ್ಲಿ ನಡೆದ ಈಸೂರು ಹೋರಾಟದ ಚಳುವಳಿಗಳು ಇಡೀ ರಾಷ್ಟ್ರದ ಗಮನ ಸೆಳೆದಿದ್ದವು. ನೂರಾರು ಸ್ವಾತಂತ್ರ್ಯ ಹೋರಾಟಗಾರರು ಗ್ರಾಮದಲ್ಲಿ ತಮ್ಮ ಜೀವನ ಮುಡುಪಾಗಿ ಇಡುವ ಮೂಲಕ ಜನರಲ್ಲಿ ದೇಶ ಭಕ್ತಿಯ ಕಿಚ್ಚನ್ನು ಹೊತ್ತಿಸಿದರು. ಈಸೂರು ದಂಗೆ ಮೂಲಕ ಬ್ರಿಟಿಷರ ಹುಟ್ಟು ಅಡುಗಿಸಿದರು. ಇಂತಹ ವೀರ ಯೋಧರ ಗ್ರಾಮದ ಸ್ವಾತಂತ್ರ್ಯ ಹೋರಾಟದ ಕೆಲ ಅಚ್ಚರಿ ಸಂಗತಿಗಳನ್ನು ಇಂದಿಗೂ ಹೋರಾಟಗಾರರು ನೆನಪಿಸುವ ಮೂಲಕ ಗದ್ಗರಿತರಾಗುತ್ತಾರೆ. ದೇವಸ್ಥಾನದ ಗಂಟೆ ಬಾರಿಸುವ ಮೂಲಕ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್