ಮಧು ಬಂಗಾರಪ್ಪ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ದೂರು ದಾಖಲು

| Updated By: ವಿವೇಕ ಬಿರಾದಾರ

Updated on: Nov 29, 2024 | 12:14 PM

ಶಿವಮೊಗ್ಗದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಮೋಹಿತ್ ನರಸಿಂಹ ಮೂರ್ತಿ ಎಂಬುವವರ ವಿರುದ್ಧ ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡಿದ ಈ ಪೋಸ್ಟ್‌ನಲ್ಲಿ ಸಚಿವರನ್ನು ಅವಹೇಳನ ಮಾಡಲಾಗಿದೆ ಮತ್ತು ಸರ್ಕಾರದ ವಿರುದ್ಧ ದಂಗೆಯನ್ನು ಉತ್ತೇಜಿಸುವ ಪ್ರಯತ್ನ ನಡೆದಿದೆ ಎಂದು ಪೊಲೀಸರು ದೂರಿನಲ್ಲಿ ದಾಖಲಿಸಿದ್ದಾರೆ.

ಮಧು ಬಂಗಾರಪ್ಪ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ದೂರು ದಾಖಲು
ಮಧು ಬಂಗಾರಪ್ಪ, ಆರೋಪಿ ಮೋಹಿತ್ ನರಸಿಂಹ ಮೂರ್ತಿ
Follow us on

ಶಿವಮೊಗ್ಗ, ನವೆಂಬರ್​ 29: ಸಾಮಾಜಿಕ ಮಾಧ್ಯಮ ಎಕ್ಸ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ವ್ಯಕ್ತಿಯ ವಿರುದ್ಧ ವಿನೋಬನಗರ ಠಾಣೆ ಪೊಲೀಸರು (Police) ಸುಮೋಟೋ ದೂರು ದಾಖಲಿಸಿಕೊಂಡಿದ್ದಾರೆ. ಮೋಹಿತ್ ನರಸಿಂಹ ಮೂರ್ತಿ ಎಂಬುವರ ವಿರುದ್ಧ ದೂರು ದಾಖಲಾಗಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಲು ನಿಮ್ಮಪ್ಪನ ಮನೆ ದುಡ್ಡಲ್ಲಿ ಏನಾದ್ರು ಅವರಿಗೆ ಶಿಕ್ಷಣ ಕೊಡ್ತಿರಿ? ನೀನು ಐಷಾರಾಮಿ ಜೀವನ ನಡೆಸುತ್ತಿರುವುದು ಸಾರ್ವಜನಿಕರ ದುಡ್ಡು ಲೂಟಿ ಮಾಡಿ ಅನ್ನೋದು ಸಾಮಾನ್ಯ ಪರಿಜ್ಞಾನ ಇರ್ಲಿ. ಸಾರ್ವಜನಿಕರ ದುಡ್ಡಲಿ ದರ್ಪ ಮಾಡುತ್ತೀಯನೋ, ಸಾರ್ವಜನಿಕರು ದುಡ್ಡಲಿ ಬದುಕುತ್ತಿದ್ದೀಯ ನಿಮ್ಮಪ್ಪನ ಮನೆ ದುಡ್ಡಲಿ ಅಲ್ಲ ಏನೋ ನಿನ್ನ ದರ್ಪ ನೀನು ನಿನ್ನ ಕುಟುಂಬದವರು ಐಷಾರಾಮಿ ಜೀವನ ನಡೆಸುತ್ತಿರುವುದು ಸಾರ್ವಜನಿಕರ ದುಡ್ಡಲ್ಲಿ. ಲೂಟಿ ಮಾಡಿ ನೀವು ಮಾಜಾ ಮಾಡಿಕೊಂಡು ಸಾರ್ವಜನಿಕರ ಮೇಲೆ ದರ್ಪ ತೋರುಯನೋ? ನೀನೇದಾರು ನಿಮ್ಮಪ್ಪನ ಮನೆಯಿಂದ ತಂದುಕೊಟ್ಟು ಸಾರ್ವಜನಿಕರಿಗೆ ಸೇವೆ ಮಾಡಿದ್ದರೇ ಏನೋ ನಿಂದು ದರ್ಪಲೇ? ಸಾರ್ವಜನಿಕರ ಸೇವೆ ಮಾಡೋಕೆ ಯೋಗ್ಯತೆ ಇಲ್ಲ, ಅಂದರೆ ರಾಜಿನಾಮೆಕೊಟ್ಟು ಹೋಗಿ ಮಜಾ ಮಾಡಲೆ ಮನೇಲಿ. ದರ್ಪ ತೋರಿಸುತ್ತೀಯ ಮೆಟ್ ಮೆಟ್ ನಲ್ಲಿ,, ಹೊಡಿತಾರೆ ರೋಡಲಿ, ಯಾರ ಮೇಲೂ ದರ್ಪ ತೋರಿಸೋದು ಸಾರ್ವಜನಿಕರ ಪರಿಶ್ರಮದಿಂದ ನೀವು ಕೂತುಕೊಂಡಿರೋದು ಅಧಿಕಾರದಲ್ಲಿ ನೆನಪಿರಲಿ. ಸಾರ್ವಜನಿಕರ ಆಸ್ತಿ ಲೂಟಿ ಮಾಡುವುದು ಪುನಃ ಸಾರ್ವಜನಿಕರ ಮೇಲೆ ದರ್ಪ ತೋರಿಸುವುದು ಎನ್ ನಿಮ್ಮಪ್ಪನ ಮನೆಯಿಂದ ತಂದುಕೊಡುತ್ತೀಯೇನೋ? ದೌರ್ಜನ್ಯ ಮಾಡಿರುವ ವಿದ್ಯಾರ್ಥಿಗಳಿಗೆ ಕ್ಷಮೆ ಕೇಳು ಇಲ್ಲಾಂದರೆ ಮೆಟ್ ಮೆಟ್ ಹರಿತಾವ” ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ.

ಇದನ್ನೂ ಓದಿ: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ: ಸ್ಟುಪಿಡ್‌ ಎಂದ ಬಿಜೆಪಿ

ಆರೋಪಿ ಮೋಹಿತ್ ನರಸಿಂಹ ಮೂರ್ತಿ ಸಚಿವರ ವಿರುದ್ಧ ಅವಾಚ್ಯವಾಗಿ ನಿಂದಿಸಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಾದ ಎಕ್ಸ್​​ ಮತ್ತು ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಹಾಕಿದ್ದಾನೆ ಎಂದು ದೂರಿನಲ್ಲಿ ದಾಖಲಾಗಿದೆ.

ಈ ಸಂಬಂಧ ಆರೋಪಿ ಮೋಹಿತ್ ನರಸಿಂಹ ಮೂರ್ತಿ ವಿರುದ್ಧ ಪೊಲೀಸರು ರಾಜ್ಯ ಸರ್ಕಾರದ ಸಚಿವರನ್ನು ಹಾಗೂ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಉದ್ದೇಶಿಸಿ, ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಮತ್ತು ಸರ್ಕಾರದ ಘನತೆಗೆ ಧಕ್ಕೆ ತರುವಂತಹ, ಸರ್ಕಾರದ ಯೋಜನೆಯ ವಿರುದ್ಧವಾಗಿ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿ, ಸಾರ್ವಜನಿಕರನ್ನು ಉದ್ರೇಕಿಸಿ ಸರ್ಕಾರದ ವಿರುದ್ಧ ದಂಗೆ ಏಳಿಸುವ ಹಾಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ