Shivamogga Police: ಮಲೆನಾಡಿನಲ್ಲಿ ರೌಡಿಯ ಕಾಲಿಗೆ ಪೊಲೀಸ್​​ ಗುಂಡೇಟು, ರೌಡಿಗಳಿಗೆ ಖಡಕ್​ ಎಚ್ಚರಿಕೆ ರವಾನೆ

| Updated By: ಸಾಧು ಶ್ರೀನಾಥ್​

Updated on: Mar 26, 2024 | 11:52 AM

ಬೆಳ್ಳಂಬೆಳಗ್ಗೆ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡೇಟು ಹೊಡೆದ ಘಟನೆ ಶಿವಮೊಗ್ಗದ ಹೊರವಲಯದ ಮಲ್ಲಿಗೇನಹಳ್ಳಿ ಬಳಿ ನಡೆದಿದೆ.‌ ರೌಡಿಶೀಟರ್ ಪರ್ವೇಜ್ ಅಲಿಯಾಸ್ ಫಾರು ಪೊಲೀಸರ ಗುಂಡಿನ ದಾಳಿಗೆ ಒಳಗಾದವ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ಫಾರು ಪೊಲೀಸರರಿಗೆ ಬೇಕಾಗಿದ್ದ. ಘಟನೆ ಹಿನ್ನೆಲೆಯಲ್ಲಿ ಎಸ್ ಪಿ ಮಿಥುನ್ ಕುಮಾರ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.

Shivamogga Police: ಮಲೆನಾಡಿನಲ್ಲಿ ರೌಡಿಯ ಕಾಲಿಗೆ ಪೊಲೀಸ್​​ ಗುಂಡೇಟು, ರೌಡಿಗಳಿಗೆ ಖಡಕ್​ ಎಚ್ಚರಿಕೆ ರವಾನೆ
ಮಲೆನಾಡಿನಲ್ಲಿ ಪೊಲೀಸ್​​ ಗುಂಡೇಟು, ರೌಡಿಗಳಿಗೆ ಖಡಕ್​ ಎಚ್ಚರಿಕೆ ರವಾನೆ
Follow us on

ಶಿವಮೊಗ್ಗದಲ್ಲಿ ರೌಡಿಸಂ ಹಾವಳಿ ಜಾಸ್ತಿಯಾಗಿದೆ. ಕೊಲೆ ಪ್ರಕರಣದ ಆರೋಪಿ ರೌಡಿ ಶೀಟರ್ ಗೆ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದಾರೆ. ಈ ಪೊಲೀಸ್ ಫೈರಿಂಗ್ ನಲ್ಲಿ ರೌಡಿ ಶೀಟರ್ (Rowdy) ಗಂಭೀರವಾಗಿ ಗಾಯಗೊಂಡಿದ್ದಾನೆ. ಚುನಾವಣೆ ಸಮೀಪಿಸುತ್ತಿದ್ದಂತೆ ರೌಡಿ ಕಾಲಿಗೆ ಗುಂಡೇಟು (Shoot out) ನೀಡಿದ್ದಾರೆ… ಮಲೆನಾಡಿನಲ್ಲಿ ರೌಡಿಗಳ ಮೇಲೆ ಖಾಕಿ ಖದರ್ (Shivamogga Police) ಕುರಿತು ಒಂದು ವರದಿ ಇಲ್ಲಿದೆ.

ಬೆಳ್ಳಂಬೆಳಗ್ಗೆ ರೌಡಿಶೀಟರ್ ಕಾಲಿಗೆ ಪೊಲೀಸರು ಗುಂಡೇಟು ಹೊಡೆದ ಘಟನೆ ಶಿವಮೊಗ್ಗದ ಹೊರವಲಯದ ಮಲ್ಲಿಗೇನಹಳ್ಳಿ ಬಳಿ ನಡೆದಿದೆ.‌ ರೌಡಿಶೀಟರ್ ಪರ್ವೇಜ್ ಅಲಿಯಾಸ್ ಫಾರು (Farru) ಪೊಲೀಸರ ಗುಂಡಿನ ದಾಳಿಗೆ ಒಳಗಾದವ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ಫಾರು ಪೊಲೀಸರರಿಗೆ ಬೇಕಾಗಿದ್ದ.

ಆದರೆ ಹಲವು ದಿನಗಳಿಂದ ನಾಪತ್ತೆಯಾಗಿದ್ದ. ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಆರೋಪಿ ಫಾರು ನಿನ್ನೆ ಸೋಮವಾರ ಮಲ್ಲಿಗೇನಹಳ್ಳಿ ಸಮೀಪ ಇರುವ ಬಗ್ಗೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿ ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ದಾಳಿ ನಡೆಸಲು ಮುಂದಾದ. ಈ ವೇಳೆ ಶಿವಮೊಗ್ಗ ಗ್ರಾಮಾಂತರ ಠಾಣೆ ಪಿಎಸ್ ಐ ಸತ್ಯನಾರಾಯಣ ಅವರು ಆತ್ಮರಕ್ಷಣೆಗೆ ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದರು.

Also Read:  ಎರಡು ಜಿಲ್ಲೆಗಳ ಒಂದು ಲವ್ ಸ್ಟೋರಿ… ಇನ್ನೋವಾ ಕಾರಿನಲ್ಲಿ ಲವರ್ ಭಸ್ಮ: ಅಣ್ಣಂದಿರಿಂದ ಪ್ರಿಯಕರನ ಅಮಾನುಷ ಹತ್ಯೆ -ಲವ್​ ಟ್ರ್ಯಾಜಿಡಿ!

ಘಟನೆಯಲ್ಲಿ ರೌಡಿಶೀಟರ್ ಫಾರು ಹಾಗು ಪೊಲೀಸ್ ಸಿಬ್ಬಂದಿ ನಾಗಪ್ಪ ಅವರಿಗೆ ಗಾಯವಾಗಿದೆ. ಇಬ್ಬರನ್ನೂ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಎಸ್ ಪಿ ಮಿಥುನ್ ಕುಮಾರ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು. ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಕೆಲವು ತಿಂಗಳನಿಂದ ಮಲೆನಾಡಿನಲ್ಲಿ ರೌಡಿಗಳ ಹಾವಳಿ ಜಾಸ್ತಿಯಾಗಿದೆ. ಕಳೆದ ವಾರವಷ್ಟೇ ಯುವಕರ ಗುಂಪೊಂದು ವ್ಯಕ್ತಿಯ ತಲೆಗೆ ತಲ್ವಾರ್ ನಿಂದ ದಾಳಿ ಮಾಡಿತ್ತು. ಆತನ ತಲೆಯಲ್ಲೇ ತಲ್ವಾರ್ ಬಿಟ್ಟು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದರು. ಈ ಘಟನೆ ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದರು. ಇದರ ಬೆನ್ನಲ್ಲೇ ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ರೌಡಿ ಶೀಟರ್ ಸ್ಯಾಡೋ ಸತೀಶ್ ರೌಡಿಯ ಗ್ಯಾಂಗ್ ಎರಡು ಮನೆ ಮತ್ತು ಕಾರ್ ಬೈಕ್ ಮೆಲೆ ದಾಳಿ ಮಾಡಿತ್ತು.

Also Read: ಶಿವಮೊಗ್ಗದಲ್ಲಿ ಮತ್ತೆ ರೌಡಿಸಂ: ಯುವಕರಿಂದ ಗಾಂಜಾ ಅಮಲಿನಲ್ಲಿ ಮರ್ಡರ್ ಅಟ್ಯಾಕ್.. 4 ಘಂಟೆ ತಲೆಯಲ್ಲಿ ನೇತಾಡಿದ ತಲ್ವಾರ್

ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲು ಆಗಿದೆ. ಹೀಗೆ ನಗರದಲ್ಲಿ ರೌಡಿಸಂ ಮಟ್ಟಹಾಕಬೇಕೆಂದು ಸಾರ್ವಜನಿಕ ವಯಲದಲ್ಲಿ ತುಂಬಾ ಒತ್ತಡ ಕೇಳಿಬರುತ್ತಿತ್ತು. ಇನ್ನು ಲೋಕಸಭೆ ಚುನಾವಣೆ ಕೂಡಾ ಘೋಷಣೆಯಾಗಿದೆ. ಸದ್ಯ ಪೊಲೀಸರು ರೌಡಿಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ವಿವಿಧ ಪ್ರಕರಣದಲ್ಲಿ ಬೇಕಾಗಿದ್ದ ರೌಡಿ ಫಾರು ಮೇಲೆ ಗುಂಡು ಹಾರಿಸುವ ಮೂಲಕ ಮಲೆನಾಡಿನ ರೌಡಿಗಳಿಗೆ ಜಿಲ್ಲಾ ಪೊಲಿಸ್ ಇಲಾಖೆಯು ಖಡಕ್ ಎಚ್ಚರಿಕೆ ನೀಡಿದೆ. ಸದ್ಯ ವಿವಿಧ ಪ್ರಕರಣದಲ್ಲಿ ಬೇಕಾಗಿದ್ದ ರೌಡಿಯನ್ನು ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಈ ಮಧ್ಯೆ, ಹೀಗೆ ನಗರದಲ್ಲಿ ಅಕ್ರಮ ಚಟುವಟಿಕೆಗಳು ಜಾಸ್ತಿ ಆಗುತ್ತಿರುವುದಕ್ಕೆ ಸ್ಥಳೀಯರು ಕೂಡಾ ಕಳವಳ ವ್ಯಕ್ತಪಡಿಸಿದ್ದಾರೆ.

ಮಲೆನಾಡಿನ ರಕ್ತ ಚರಿತ್ರೆಯ ಅಧ್ಯಾಯಗಳು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ರೌಡಿಗಳು ಜೈಲಿನಿಂದ ಬಿಡುಗಡೆ ಬಳಿಕ ಮತ್ತೆ ಅದೇ ರೌಡಿಸಂ ಮೂಲಕ ಕಾನೂನುಬಾಹಿರ ಚಟುಟಕೆಯಲ್ಲಿ ತೊಡಗಿದ್ದಾರೆ. ಈ ರೌಡಿಗಳ ಹಾವಳಿಯಿಂದ ಅಮಾಯಕ ಜನರು ನೆಮ್ಮದಿಯಿಂದ ಬದುಕುವ ಸ್ಥಿತಿಯಲ್ಲಿ ಇಲ್ಲದಂತಾಗಿರುವುದು ಮಾತ್ರ ವಿಪರ್ಯಾಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ