ಎರಡು ಜಿಲ್ಲೆಗಳ ಒಂದು ಲವ್ ಸ್ಟೋರಿ… ಇನ್ನೋವಾ ಕಾರಿನಲ್ಲಿ ಲವರ್ ಭಸ್ಮ: ಅಣ್ಣಂದಿರಿಂದ ಪ್ರಿಯಕರನ ಅಮಾನುಷ ಹತ್ಯೆ -ಲವ್​ ಟ್ರ್ಯಾಜಿಡಿ!

ಪ್ರೀತಿಸಿ ಮದುವೆಯಾಗಬೇಕೆಂದು ನೂರೆಂಟು ಕನಸು ಕಂಡಿದ್ದ ಪ್ರೇಮಿಯ ಹತ್ಯೆ ಆಗಿದೆ. ಅತ್ತ ವಿರೇಶನನ್ನು ಪ್ರೀತಿಸಿದ ತಪ್ಪಿಗೆ ಅಂಕಿತಾ ಕಣ್ಣೀರು ಹಾಕುತ್ತಿದ್ದಾಳೆ. ಇತ್ತ ತಾಯಿ ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಅಕ್ಷರಶಃ ಅನಾಥೆಯಾಗಿದ್ದಾರೆ. ಕೊಲೆ ಮಾಡಿದ ಅಣ್ಣಂದಿರಿಬ್ಬರು ಜೈಲು ಸೇರಿದ್ದಾರೆ. ಮತ್ತೊಂದು ಲವ್ ಸ್ಟೋರಿ ದುರಂತದಲ್ಲಿ ಅಂತ್ಯಗೊಂಡಿದೆ.

ಎರಡು ಜಿಲ್ಲೆಗಳ ಒಂದು ಲವ್ ಸ್ಟೋರಿ... ಇನ್ನೋವಾ ಕಾರಿನಲ್ಲಿ ಲವರ್ ಭಸ್ಮ: ಅಣ್ಣಂದಿರಿಂದ ಪ್ರಿಯಕರನ ಅಮಾನುಷ ಹತ್ಯೆ -ಲವ್​ ಟ್ರ್ಯಾಜಿಡಿ!
ಎರಡು ಜಿಲ್ಲೆಗಳ ಒಂದು ಲವ್ ಟ್ರ್ಯಾಜಿಡಿ... ಇನ್ನೋವಾ ಕಾರಿನಲ್ಲಿ ಪ್ರಿಯಕರನ ಹತ್ಯೆ
Follow us
Basavaraj Yaraganavi
| Updated By: ಸಾಧು ಶ್ರೀನಾಥ್​

Updated on: Mar 23, 2024 | 11:07 AM

ಶಿವಮೊಗ್ಗ-ಹಾವೇರಿ ಎರಡು ಜಿಲ್ಲೆಗಳ ಲವ್ ಸ್ಟೋರಿ ಇದು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಿ ಉತ್ತಮ ಸಂಗಾತಿಯೊಂದಿಗೆ ಜೀವನ ಕಳೆಯಬೇಕೆಂದು ಪ್ರೇಮಿಗಳು ಕನಸು ಕಂಡಿದ್ದರು. ಎಲ್ಲ ಲವ್ ಸ್ಟೋರಿಗಳು ಗೆಲ್ಲುವುದಿಲ್ಲ… ಬಹುತೇಕ ಲವ್ ಸ್ಟೋರಿಗಳು ಫೇಲ್… ಇಡೀ ಮಲೆನಾಡನ್ನೇ ಬೆಚ್ಚಿ ಬೀಳುವಂತೆ ಪ್ರೇಮಿಯನ್ನು ಹತ್ಯೆ ಮಾಡಲಾಗಿದೆ. ಇದು ಲವ್.. ದ್ವೇಷ.. ಹತ್ಯೆ…ಕಥನ.

ಮಲೆನಾಡಿನ ಜನರು ಮಾರ್ಚ್​​ 16 ಶನಿವಾರ ಬೆಳಗ್ಗೆ ಇನ್ನೋವಾ ಕಾರ್ ಸಮೇತ ಓರ್ವ ಯುವಕನನ್ನು ಸುಟ್ಟು ಹಾಕಿದ್ದರು. ಬೆಳಗ್ಗೆ ಎದ್ದು ನೋಡಿದ್ರೆ ಶಿಕಾರಿಪುರ ತಾಲೂಕಿನ ತೋಗರ್ಸೆ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಕಾರ್ ಸಂಪೂರ್ಣವಾಗಿ ಸುಟ್ಟು ಕರಕಲವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ನೋಡಿದ ಜನರಿಗೆ ಗಾಬರಿಯಾಗಿತ್ತು. ಶಿರಾಳಕೊಪ್ಪದ ಪೊಲೀಸರು ಸ್ಥಳಕ್ಕೆ ಹೋಗಿ ಗಮನಿಸುತ್ತಾರೆ. ಇನ್ನೋವಾ ಕಾರ್ ಮಾತ್ರವಲ್ಲ. ಒಳಗೆ ಒಂದು ಮೃತದೇಹ ಕೂಡಾ ಪತ್ತೆಯಾಗಿತ್ತು!

ಪೊಲೀಸರು ಕಾರ್ ಮತ್ತು ಮೃತದೇಹ ಯಾರದ್ದು ಎನ್ನುವ ಪತ್ತೆಗೆ ಮುಂದಾಗುತ್ತಾರೆ. ಕಾರ್ ನ ಒಂದಿಷ್ಟು ಮಾಹಿತಿ ಪಡೆಯುತ್ತಾರೆ. ಇನ್ನೋವಾ ಕಾರ್ ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿ ಸುನೀಲ್ ಎನ್ನುವುದು ಗೊತ್ತಾಗುತ್ತದೆ. ಸುನೀಲ ಮೂಲಕ ಕಾರ್ ನಲ್ಲಿರುವ ವ್ಯಕ್ತಿ ಯಾರು ಎನ್ನುವುದು ಪೊಲೀಸರಿಗೆ ಪತ್ತೆಯಾಗುತ್ತದೆ.

ಕಾರ್ ನಲ್ಲಿ ಸುಟ್ಟು ಭಸ್ಮ ಆಗಿರುವುದು 27 ವರ್ಷದ ವಿರೇಶ್ ಎಂಬ ಯುವಕ. ಈತ ಗಾಡಿಕೊಪ್ಪದ ನಿವಾಸಿ. ವಿರೇಶ ಶಿವಮೊಗ್ಗ ತಾಲೂಕಿನ ಚೋರಡಿಯಲ್ಲಿರುವ ನಮ್ಮ ಅಡಿಕೆ ತೋಟದಲ್ಲಿ ವ್ಯವಸಾಯ ಜೊತೆಗೆ ಡ್ರೈವಿಂಗ್​ ಕೆಲಸ ಮಾಡಿಕೊಂಡಿದ್ದನು. ಎರಡು ವರ್ಷದ ಹಿಂದೆ ವಿರೇಶ್ ಅಕ್ಕ ಕಾವ್ಯ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಳು. ವಿರೇಶ್ ಒಬ್ಬನೇ ಮಗನು.

ಇದ್ದ ಇಬ್ಬರು ಮಕ್ಕಳು ಈಗ ಸಾವಿನ ಮನೆ ಸೇರಿದ್ದಾರೆ. ವಿರೇಶ್ ತಂದೆ ಮಹಾದೇವಪ್ಪ 15 ವರ್ಷಗಳ ಹಿಂದೆ ತುಂಗಾ ಚಾನಲ್ ನಲ್ಲಿ ಮಣ್ಣು ಕುಸಿದು ಬಿದ್ದು ಅದರಲ್ಲಿ ಸಿಲುಕಿ ಮೃತಪಟ್ಟಿದ್ದರು. ಕುಟುಂಬದ ವಾರಸುದಾರನಾಗಿ ಇದ್ದ ಒಬ್ಬ ಮಗನೂ ಈಗ ಅಮಾನುಷವಾಗಿ ಕೊಲೆಯಾಗಿದ್ದಾನೆ. ಇದರಿಂದ ಏಕಾಂಗಿ ತಾಯಿಗೆ ಈಗ ದೊಡ್ಡ ಆಘಾತವಾಗಿದೆ. ಆ ತಾಯಿಯ ನೋವು ಯಾರಿಗೂ ಅರ್ಥವಾಗದು. ಗಂಡ-ಮಗಳು-ಈಗ ಮಗ ಮೃತಪಟ್ಟಿರುವ ದೊಡ್ಡ ಆಘಾತದಲ್ಲಿ ಆ ತಾಯಿ ಮಹಾದೇವಿ ಬೇಯುತ್ತಿದ್ದಾಳೆ.

ವಿರೇಶ ನಮ್ಮ ದೂರದ ಸಂಬಂಧಿ. ಇನ್ನು ಈ ಕತೆಯ ಕಥಾನಾಯಕಿ ಅಂಕಿತಾ 21 ವರ್ಷದ ಫಾರ್ಮಸಿ ವಿದ್ಯಾರ್ಥಿನಿ. ವಿರೇಶನ ಮಾವನ ಮಗಳು. ಆಕೆಯ ವಾಸ ಅಕ್ಕಿಆಲೂರು ಗ್ರಾಮ, ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ. ಇವಳು ಶಿವಮೊಗ್ಗದ ಯಾವುದೋ ಪಿ.ಜಿ. ಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಇವಳು ವಿರೇಶನಿಗೆ ಪರಿಚಯವಿದ್ದಳು. ಈಗ್ಗೆ ಸುಮಾರು 2 ವರ್ಷಗಳಿಂದ ವಿರೇಶ ಮತ್ತು ಅಂಕಿತಾ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು. ಈ ವಿಚಾರವನ್ನು ವಿರೇಶ್ ಯಾರಿಗೂ ಹೇಳಿರಲಿಲ್ಲ. ಸುಮಾರು 8 ದಿನಗಳ ಹಿಂದೆ ವಿರೇಶ ತಾನು ಮತ್ತು ಅಂಕಿತಾ ಒಬ್ಬರಿಗೊಬ್ಬರು ಪ್ರೀತಿಸುತ್ತಿರುವ ವಿಷಯವನ್ನು ತಾಯಿಗೆ ಹೇಳಿದ್ದನು. ಸಂಬಂಧಿಕರಲ್ಲಿ ಮದುವೆ ಬೇಡ ಅಂತಾ ಮಗನಿಗೆ ತಾಯಿ ಬುದ್ದಿ ಹೇಳಿದ್ದರು. ಆದ್ರೆ ಮಗ ಮಾತ್ರ ಅಂಕಿತಾಳನ್ನೇ ಮದುವೆಯಾಗುವುದಕ್ಕೆ ಅಂದು ಡಿಸೈಡ್ ಮಾಡಿದ್ದ.

ಈ ಪ್ರೀತಿಯ ವಿಷಯವನ್ನು ವಿರೇಶ್ ಕುಟುಂಬಸ್ಥರು ಯುವತಿಯ ಸಂಬಂಧಿ ಅಂಬಾರಗೊಪ್ಪದ ಬಸವಣ್ಯಪ್ಪಗೆ ಪೋನ್ ಮಾಡಿ ತಿಳಿಸಿದ್ದರು. ಈ ವಿಚಾರವಾಗಿ ಮಾತಾಡಲು ಬಂದರೆ ನಿಮ್ಮನ್ನು ಬಿಡುವುದಿಲ್ಲ, ಸುಮ್ಮನೆ ನಿಮ್ಮದೆಷ್ಟು ಕೆಲ್ಸ ಇದೆಯೋ ಅಷ್ಟು ಮಾಡಿಕೊಳ್ಳಿ, ನಿಮ್ಮ ಹುಡುಗನಿಗೆ ಪ್ರೀತಿಸೋಕೆ ನನ್ನ ಮೊಮ್ಮಗಳೇ ಬೇಕಾ? ನಾನು ಬಂದರೆ ನಿಮ್ಮ ಗ್ರಹಚಾರನೇ ಬಿಡಿಸಿ ಬಿಡ್ತೀನಿ, ನಿಮ್ಮ ಅಣ್ಣನ ಮಗ ವಿರೇಶನಿಗೂ ತಿಳಿಸು. ಅವನೇನಾದರೂ ಈ ರೀತಿ ಪ್ರೀತಿ-ಗೀತಿ ಅಂತಾ ಬಂದರೆ ಅವನನ್ನು ಬಿಡೋಲ್ಲಾ ನಾನು, ಹುಷಾರಾಗಿರಿ ಎಂದು ಬಸವಣ್ಯಪ್ಪ ಬೆದರಿಕೆ ಹಾಕಿದ್ದನಂತೆ. ಇದನ್ನು ಕೇಳಿಸಿಕೊಂಡ ವಿರೇಶ್​ ಕುಟುಂಬಸ್ಥರು ಸೈಲೆಂಟ್ ಆಗಿದ್ದರು.

ದಿನಾಂಕ-15-03-2024 ರಂದು ಮಧ್ಯಾಹ್ನ 2.30 ಗಂಟೆಯಲ್ಲಿ ನಾನು ಮತ್ತು ನನ್ನ ಮಗ ವಿರೇಶ ಹಾಗೂ ನನ್ನ ಮೈದುನ ರುದ್ರೇಶ್, ನಮ್ಮ ಬಾವ ಈಶ್ವರಪ್ಪ ರವರು ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ನಮ್ಮ ಮನೆಯಲ್ಲಿದ್ದೆವು. ಅಂಕಿತಾಳ ಸಂಬಂಧಿಕರಾದ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಅಕ್ಕಿಆಲೂರು ಗ್ರಾಮದ ವಾಸಿಗಳಾದ 1) ಅಂಕಿತಾ ದೊಡ್ಡಪ್ಪನ ಮಗ ಪ್ರವೀಣ್ 2) ಪ್ರಶಾಂತ್ 3) ಪ್ರಭು ಈ ಮೂವರು ಶಿವಮೊಗ್ಗದ ವಿರೇಶ್ ಮನೆಗೆ ಬಿಳಿ ಬಣ್ಣದ ಟಾಟಾ ನೆಕ್ಸಾನ್ ಕಾರಿನಲ್ಲಿ ಬಂದಿದ್ದರು.

ಅಂಕಿತಾಳ ದೊಡ್ಡಪ್ಪನ ಮಗ (ಅಣ್ಣ) ಪ್ರವೀಣನು ವಿರೇಶ್ ನಿಗೆ ತಿಳಿಯಹೇಳಿ ಅಂಕಿತಾಳ ಫೋಟೋಗಳನ್ನು ಡಿಲಿಟ್ ಮಾಡಿಸಿದ್ದನು. ಇನ್ನು 6 ತಿಂಗಳು ಸುಮ್ಮನಿರು ಆಮೇಲೆ ಮದುವೆ ಬಗ್ಗೆ ಮಾತನಾಡುವುದಾಗಿ ಆತನಿಗೆ ಭರವಸೆ ಕೊಟ್ಟಿದ್ದಾರೆ. ಇವರ ಬಣ್ಣದ ಮಾತು ನಂಬಿದ ವಿರೇಶನು ತನ್ನ ಮೊಬೈಲ್ ನಲ್ಲಿದ್ದ ಇಬ್ಬರ ಫೋಟೋಗಳು ಮತ್ತು ವಿಡಿಯೋ ಡಿಲೀಟ್ ಮಾಡಿದ್ದಾನೆ. ಅಣ್ಣ ಪ್ರವೀಣನು ಇನ್ನು ಮುಂದೆ ಅಂಕಿತಾಳಿಗೆ ಪದೇ ಪದೇ ಫೊನ್ ಮಾಡಬೇಡ ಎಂದೂ ಬುದ್ದಿವಾದ ಹೇಳಿದ್ದಾರೆ.

ಅಂಕಿತಾಳ ಅಣ್ಣ ಮತ್ತು ಆತನ ಸ್ನೇಹಿತರು ಶಿವಮೊಗ್ಗದ ವಿರೇಶ್ ಮನೆಯಿಂದ ಮಧ್ಯಾಹ್ನ ಸುಮಾರು 03:30 ಗಂಟೆಗೆ ತಮ್ಮ ಊರಿಗೆ ಹೋಗುತ್ತೇವೆಂದು ಹೇಳಿ ಹೊರಡುತ್ತಾರೆ. ಅದಾದ ನಂತರ ಸಂಜೆ ಸಮಾರು 05:30 ಗಂಟೆಯ ಸಮಯದಲ್ಲಿ ಅಂಕಿತಾಳ ಅಣ್ಣ ಪ್ರವೀಣನು ವಿರೇಶನಿಗೆ ಕಾಲ್ ಮಾಡಿದ್ದಾನೆ.

ವಿರೇಶನಿಗೆ ಆ ದಿನ ರಾತ್ರಿ ಸುಮಾರು 10:30 ಕ್ಕೆ ನಾನು ಅಂಕಿತಾಳನ್ನು ಹಾನಗಲ್ ನಾಗರ ಕ್ರಾಸ್ ವರೆಗೂ ಕರೆದುಕೊಂಡು ಬರುತ್ತೇನೆ. ನೀನು ಸಹ ಅಲ್ಲಿಗೆ ಹೇಗಾದರೂ ಮಾಡಿ ಬಾ, ಅಲ್ಲಿಂದ ಅಂಕಿತಾಳನ್ನು ಕರೆದುಕೊಂಡು ಹೋಗು, ಬೇಕಾದ್ರೆ ನಾನೇ ಸಿರಸಿಯಲ್ಲಿ ರೂಂ ಮಾಡಿಕೊಡುತ್ತೇನೆಂದು ಹೇಳುತ್ತಾನೆ. ಅದಕ್ಕೆ ವಿರೇಶ್ ಆಯ್ತು ಎಂದು ಒಪ್ಪಿಗೆ ಸೂಚಿಸುತ್ತಾನೆ. ಬಳಿಕ, ವಿರೇಶ ಶಿವಮೊಗ್ಗದ ಮಾರಿಕಾಂಬ ಜಾತ್ರೆಗೆ ಹೋಗಿ ಬಂದಿದ್ದಾನೆ. ವಿರೇಶ್ ರಾತ್ರಿ 09:30 ಕ್ಕೆ ಮನೆಗೆ ಬಂದ್ದಿದ್ದು, ಈ ಮಧ್ಯೆ ಪ್ರವೀಣ ಪದೇ ಪದೇ ಕಾಲ್ ಮಾಡಿದ್ದಾನೆ.

ನಾಗರ ಕ್ರಾಸ್ ಗೆ ಬರುವಂತೆ ಹೇಳುತ್ತಲೇ ಇದ್ದ. ವಿರೇಶ್ ತನ್ನ ತಾಯಿಗೆ ವಿಷಯ ತಿಳಿಸಿ, ಅಲ್ಲಿಗೆ ಹೋಗಿಬರುವೆ ಅಂತಾ ಹೇಳಿದ್ದಾನೆ. ತಾಯಿ ರಾತ್ರಿ ಆಗಿದೆ ಬೇಡ ಅಂತಾ ಎಷ್ಟೇ ಹೇಳಿದರೂ ಮಗ ವಿರೇಶ ಕೇಳಿಲ್ಲ. ಆ ಕಡೆಯಿಂದ… ಅಂಕಿತಾ ಹಠ ಮಾಡುತ್ತಿದ್ದಾಳೆ. ನಿನ್ನ ಭೇಟಿ ಆಗಬೇಕಂತೆ ಎಂದು ಅಣ್ಣ ಪ್ರವೀಣ ಕಥೆ ಕಟ್ಟಿದ್ದಾನೆ. ಇದನ್ನೆಲ್ಲಾ ಆಲಿಸಿ ತಾನು ಪ್ರೀತಿಸಿದ ಹುಡುಗಿ ಎಲ್ಲೋ ಅಪಾಯದಲ್ಲಿದ್ದಾಳೆಂದು ವಿರೇಶ್ ಆತಂಕ್ಕೊಳಗಾಗಿದ್ದನು.

ಪ್ರವೀಣನಿಂದ ಪದೇ ಪದೇ ಬರುವ ಕಾಲ್ ನಿಂದ ವಿರೇಶ್ ಗಲಿಬಿಲಿಗೊಂಡಿದ್ದನು. ಇದಾದಮೇಲೂ ವಿರೇಶನ ತಾಯಿಗೆ ಪ್ರವೀಣ ಕಾಲ್ ಮಾಡಿದ್ದಾನೆ. ವಿರೇಶನನ್ನು ನಾಗರ ಕ್ರಾಸ್ ಗೆ ಕಳಿಸಿ, ನಾನು ಅಂಕಿತಾಳನ್ನು ಕರೆದುಕೊಂಡು ಬಂದು ಹುಡುಗಿಯನ್ನು ವಿರೇಶನ ಬಳಿ ಬಿಟ್ಟು ಹೋಗ್ತಿನಿ, ನನ್ನ ಮೇಲೆ ನಂಬಿಕೆಯಿಟ್ಟು ಕಳಿಸಮ್ಮಾ ಎಂದು ಬೇಡಿಕೊಂಡಿದ್ದಾನೆ. ಹೆತ್ತ ತಾಯಿಯು ಪ್ರವೀಣನ ಮಾತು ನಂಬಿ ಯಾಮಾರುತ್ತಾಳೆ. ಮಗನಿಗೆ ಅಲ್ಲಿಗೆ ಹೋಗಲು ಒಪ್ಪಿಗೆ ಕೊಟ್ಟಿದ್ದಾಳೆ. ಮಗ ವಿರೇಶ ಹೋಗುವಾಗ ತಾಯಿ ಬಳಿಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಹೋಗುತ್ತಾನೆ.

ಅಂಕಿತಾಳನ್ನು ನೋಡಬೇಕು. ಅವಳನ್ನು ಮದುವೆಯಾಗಬೇಕೆನ್ನುವ ಹಂಬಲ ವಿರೇಶನಿಗೆ ಬಲವಾಗಿ ಇತ್ತು. ತುಂಬಾ ಟೆನಶನ್ ನಲ್ಲಿ ವಿರೇಶ್ ಗಾಡಿಕೊಪ್ಪದ ತನ್ನ ಸ್ನೇಹಿತ ಸುನೀಲ್ ಬಳಿಯಿಂದ ಇನ್ನೋವಾ ಕಾರನ್ನು ತೆಗೆದುಕೊಂಡಿದ್ದಾನೆ. ಸ್ನೇಹಿತನಿಗೆ ಅಕ್ಕಿಆಲೂರಿಗೆ ಹೋಗಿ ಬರುವುದಾಗಿ ತಿಳಿಸಿದ್ದನು. ನಂತರ ರಾತ್ರಿ ಸುಮಾರು 12:50 ಕ್ಕೆ ಸುನೀಲ್ ಗೆ ಫೋನ್ ಮಾಡಿ ನಾನು ಹಾನಗಲ್ ನಾಗರ ಕ್ರಾಸ್ ನ ಹತ್ತಿರ ಇರುವ ಭೂತಪ್ಪನ ದೇವಸ್ಥಾನದ ಹತ್ತಿರ ರಸ್ತೆಯಲ್ಲಿ, ನಿಂತುಕೊಂಡಿರುವುದಾಗಿ ತಿಳಿಸಿದ್ದಾನೆ. ಅಂಕಿತಾ ಅಣ್ಣ ಪ್ರವೀಣನಿಗಾಗಿ ಕಾಯುತ್ತಿರುವೆ ಎಂದು ಹೇಳಿರುವುದೇ ವಿರೇಶನ ಲಾಸ್ಟ್ ಕಾಲ್ ಆಗಿತ್ತು.

ನಂತರ ತಾಯಿ ಮಹಾದೇವಿ ಅವರು ಮಗನಿಗೆ ಫೋನ್​ ಮಾಡಿದರೆ ಫೋನ್‌ ನಾಟ್ ರೀಚೆಬಲ್ ಆಗಿತ್ತು. ಮಧ್ಯರಾತ್ರಿ ಸುಮಾರು 01:30 ಗಂಟೆಗೆ ಪ್ರವೀಣನಿಗೆ ಫೋನ್ ಮಾಡಿ ತಾಯಿ ವಿಚಾರಿಸಿದ್ದಾರೆ. ಮಗ ವಿರೇಶ್ ಎಲ್ಲಿದ್ದಾನೆ ಎಂದು ಕೇಳಿದ್ದಕ್ಕೆ ಪ್ರವೀಣನು ನಿನ್ನ ಮಗ ಇದೂವರೆಗೂ ಬಂದಿಲ್ಲ. ನಾನು ಇಷ್ಟೊತ್ತಿನವರೆಗೂ ಕಾದು ಈಗ ಆತ ಬಂದಿಲ್ಲವೆಂದು ಅಂಕಿತಾಳನ್ನು ವಾಪಸ್ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದನು.

ತಾಯಿಯು ಗಾಬರಿಗೊಂಡು ಮಾ. 16 ರ ಬೆಳಿಗ್ಗೆ 08:00 ಗಂಟೆಗೆ ತುಂಗಾ ನಗರದ ಪೊಲೀಸ್‌ ಠಾಣೆಯಲ್ಲಿ ಮಗನ ಮಿಸ್ಸಿಂಗ್ ಕೇಸ್ ದೂರು ನೀಡಿದ್ದಳು. ಇದರ ಬಳಿಕ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಸಮೀಪದ ತೊಗರ್ಸಿ ಬಳಿ ಇನ್ನೊವಾ ಕಾರಿನಲ್ಲಿ, ಒಬ್ಬ ವ್ಯಕ್ತಿಯನ್ನು ಕಾರಿನಲ್ಲಿ ಇಟ್ಟು ಸುಟ್ಟಿರುವ ಮಾಹಿತಿ ಕುಟುಂಬಸ್ಥರಿಗೆ ಬಂದಿತ್ತು.

ಇನ್ನೋವಾ ಕಾರ್ ಗೆ ಬೆಂಕಿ ಹಚ್ಚಿದ್ದರಿಂದ ಸುಟ್ಟು ಕರಕಲಾಗಿರುತ್ತದೆ. ಅದರಲ್ಲಿ ವಿರೇಶ್ ಮೃತ ದೇಹವಿತ್ತು. ಅದು ಕೂಡಾ ಸುಟ್ಟು ಕರಕಲಾಗಿರುತ್ತದೆ. 1) ಪ್ರವೀಣ್ ಅಂಕಿತಾ ದೊಡ್ಡಪಪ್ಪ ಮಗ (ಅಣ್ಣ) 2) ಅಂಕಿತಾ ಸ್ವಂತ ಅಣ್ಣ ಆದರ್ಶ 3) ಪ್ರಶಾಂತ್ 4) ಪ್ರಭು ಇವರೆಲ್ಲರೂ ಸೇರಿ ಆ ದಿನ ರಾತ್ರಿ ವಿರೇಶನನ್ನು ಹಾನಗಲ್ ನಾಗರ ಕ್ರಾಸ್ ಗೆ ಬರಲು ಹೇಳಿ ಆತನನ್ನು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಬುದ್ದಿವಂತಿಕೆಯಿಂದ ಸಾಕ್ಷ್ಯ ನಾಶಪಡಿಸಲು ಕಾರ್ ನಲ್ಲಿ ವೀರೇಶನನ್ನು ಇಟ್ಟು ಕಾರ್ ಸಮೇತ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.

ಇದೀಗ ಶಿಕಾರಿಪುರ ನ್ಯಾಯಾಲಯಕ್ಕೆ ಅಂಕಿತ ಸಹೋದರ ಆದರ್ಶ ಮತ್ತು ಆಕೆಯ ದೊಡ್ಡಪ್ಪನ ಮಗ ಪ್ರವೀಣ್ ಶರಣಾಗಿದ್ದಾರೆ. ಈ ಕೊಲೆಯನ್ನು ತಾವೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ತಮ್ಮ ಸಹೋದರಿಯ ಪ್ರೀತಿ ನಮಗೆ ಒಪ್ಪಿಗೆ ಇರಲಿಲ್ಲ ಈ ಹಿನ್ನೆಲೆಯಲ್ಲಿ ವೀರೇಶನ ಕೊಲೆ ಮಾಡಿದ್ದಾಗಿ ಪೊಲೀಸರಿಗೆ ಹಂತಕರು ಹೇಳಿಕೆಯನ್ನು ಕೊಟ್ಟಿರುವುದಾಗಿ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇತ್ತ ಏಕಾಂಗಿಯಾಗಿದ್ದ ತಾಯಿಯ ದೂರದ ಸಂಬಂಧಿ ಅಂಕಿತಾಳನ್ನು ಪ್ರೀತಿಸಿ ವಿರೇಶ್ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ. ಪ್ರೀತಿಸಿದ ಯುವತಿಯನ್ನು ಮದುವೆ ಆಗಲು ಹೋಗಿದ್ದ ವಿರೇಶನನ್ನು ಮೋಸದಿಂದ ಆಕೆಯ ಅಣ್ಣಂದಿರು ಮತ್ತು ಅತನ ಸ್ನೇಹಿತರು ಮರ್ಡರ್ ಮಾಡಿದ್ದಾರೆ.

ಅಂತಸ್ತಿನಲ್ಲಿ ವಿರೇಶ್ ಕಡಿಮೆ ಇದ್ದಾನೆ. ಯುವತಿಯು ಶ್ರೀಮಂತ ಕುಟುಂಬಕ್ಕೆ ಸೇರಿದವಳು. ಇಂತಹ ಯುವಕನು ತನ್ನ ತಂಗಿಯನ್ನು ಪ್ರೀತಿಸಿದ್ದು ಆಕೆಯ ಸಹೋದರರಿಗೆ ಇಷ್ಟವಾಗಿರಲಿಲ್ಲ. ತಂಗಿ ಮತ್ತು ವಿರೇಶನಿಗೆ ಅಣ್ಣಂದಿರು ಬುದ್ದಿ ಹೇಳಿದ್ದಾರೆ. ಆದರೆ ಅಂಕಿತಾ ವಿರೇಶನನ್ನೇ ಮದುವೆಯಾಗಬೇಕಂದು ಹಠ ಹಿಡಿದ್ದಾಳೆ.

ತನ್ನ ತಂಗಿ ಲವ್ ಮಾಡಿದ ಪ್ರಿಯಕರಿನಿಗೆ ಬುದ್ದಿ ಕಲಿಸಬೇಕೇಂದು ಅಣ್ಣಂದಿರು ಡಿಸೈಡ್ ಮಾಡಿದ್ದರು. ಹೀಗೆ ಮದುವೆ ಮಾಡಿಸುವುದಾಗಿ ಯುವಕನಿಗೆ ನಂಬಿಸಿ ವಂಚನೆಯಿಂದ ಆತನನ್ನು ತಮ್ಮ ಊರಿಗೆ ಕರೆಸಿಕೊಂಡು ಹತ್ಯೆ ಮಾಡಿದ್ದಾರೆ. ಸ್ವತಃ ಸಂಬಂಧಿಯೇ ಆಗಿದ್ದರೂ ಈ ಪ್ರೀತಿಯಲ್ಲಿ ಇಬ್ಬರ ಕುಟುಂಬಗಳ ಅಂತಸ್ತು ಮರ್ಯಾದೆ ಅಡ್ಡಿ ಬಂದಿದೆ. ಶ್ರೀಮಂತಿಕೆಯು ಇಬ್ಬರ ಪ್ರೀತಿಗೆ ಅಡ್ಡಿ ಬಂದಿದೆ. ಕೊನೆಗೆ ವಿರೇಶನನ್ನು ತುಂಬಾ ಅಮಾನುಷವಾಗಿ ಹತ್ಯೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ