ತೀರ್ಥಹಳ್ಳಿ ದಸರಾ: 10 ವರ್ಷಗಳಿಂದ ನಿಂತಿದ್ದ ಜಂಬೂಸವಾರಿಗೆ ಈ ಬಾರಿ ಆನೆ ಕರೆಸುವಂತೆ ಕೇಳಿಬಂದ ಕೂಗು

ಶಿವಮೊಗ್ಗದಂತೆ ಮಲೆನಾಡಿನ ತಿರ್ಥಹಳ್ಳಿಯಲ್ಲೂ ಅದ್ಧೂರಿ ದಸರಾ ಆಚರಣೆ ನಡೆಯುತ್ತಿದೆ. ಆದರೆ ಕಳೆದ 10 ವರ್ಷಗಳಿಂದ ದಸರಾಕ್ಕೆ ಜಂಬೂಸವಾರಿಯು ನಿಂತುಹೋಗಿದೆ. ಹೀಗಾಗಿ ಪ್ರತಿ ದಸರಾ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಆನೆಗಾಗಿ ಸ್ಥಳೀಯರು ಒತ್ತಾಯ ಮಾಡುತ್ತಾರೆ. ಆದ್ರೆ ಸ್ಥಳೀಯರ ಬೇಡಿಕೆಯನ್ನು ಸ್ಥಳೀಯ ಆಡಳಿತ ಇಲ್ಲಿಯ ವರೆಗೂ ಗಮನ ಹರಿಸಿಲ್ಲ. ಈಗ ಮತ್ತೆ ಮುಂದಿನ ತಿಂಗಳು ದಸರಾ ಹಬ್ಬವಿದೆ. ಈ ಹಿನ್ನಲೆಯಲ್ಲಿ ತೀರ್ಥಹಳ್ಳಿ ಪಟ್ಟಣ ಮತ್ತು ತಾಲೂಕಿನಲ್ಲಿ ಆನೆ ಬೇಡಿಕೆ ಶುರುವಾಗಿದೆ.

ತೀರ್ಥಹಳ್ಳಿ ದಸರಾ: 10 ವರ್ಷಗಳಿಂದ ನಿಂತಿದ್ದ ಜಂಬೂಸವಾರಿಗೆ ಈ ಬಾರಿ ಆನೆ ಕರೆಸುವಂತೆ ಕೇಳಿಬಂದ ಕೂಗು
ತೀರ್ಥಹಳ್ಳಿಯಲ್ಲಿ ದಸರಾ ಆನೆಗೆ ಡಿಮ್ಯಾಂಡ್
Follow us
Basavaraj Yaraganavi
| Updated By: ಆಯೇಷಾ ಬಾನು

Updated on: Sep 14, 2023 | 2:23 PM

ಶಿವಮೊಗ್ಗ, ಸೆ.14: ವಿಶ್ವ ವಿಖ್ಯಾತ ಮೈಸೂರು ದಸರಾ(Mysuru Dasara 2023) ಅದ್ಧೂರಿ ಆಚರಣೆ ನೋಡುವುದೇ ಕಣ್ಣಿಗೆ ಹಬ್ಬ. ಮೈಸೂರು ಬಿಟ್ಟರೆ ತುಂಬಾ ಅದ್ಧೂರಿ ದಸರಾ ಆಚರಣೆ ನಡೆಯುವುದು ಮೆಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ(Shivamogga Dasara 2023). ದಶಕಗಳಿಂದ ಶಿವಮೊಗ್ಗದಲ್ಲೂ ಅದ್ಧೂರಿ ಮೈಸೂರು ದಸರಾ ಆಚರಣೆ ನಡೆಯುತ್ತಿದೆ. ಮೈಸೂರಿನಂತೆ ಇಲ್ಲಿಯೂ ಬೆಳ್ಳಿ ಅಂಬಾರಿ ಮೇಲೆ ಜಂಬೂ ಸವಾರಿ ನಡೆಯುತ್ತದೆ. ದಸರಾ ಮೆರವಣಿಗೆ ಮತ್ತು ಬನ್ನಿ ಮುಡಿಯುವುದು, ರಾವಣ ದಹನ, ಸಿಡಿಮದ್ದು ಪ್ರದರ್ಶನದಲ್ಲಿ ಜನೋಸ್ತಮ ಕಂಡು ಬರುತ್ತದೆ.

ಶಿವಮೊಗ್ಗದಂತೆ ಮಲೆನಾಡಿನ ತಿರ್ಥಹಳ್ಳಿಯಲ್ಲೂ ಅದ್ಧೂರಿ ದಸರಾ ಆಚರಣೆ ನಡೆಯುತ್ತಿದೆ. ಆದರೆ ಕಳೆದ 10 ವರ್ಷಗಳಿಂದ ದಸರಾಕ್ಕೆ ಜಂಬೂಸವಾರಿಯು ನಿಂತುಹೋಗಿದೆ. ಹತ್ತು ವರ್ಷಗಳ ಹಿಂದೆ ಪ್ರತಿ ದಸರಾ ಹಬ್ಬದಂದು ಚಿಕ್ಕಮಗಳೂರಿನ ಬಾಳೆಹೊನ್ನೂರಿನಿಂದ ಆನೆಯನ್ನು ದಸರಾಕ್ಕೆ ಕರೆತರಲಾಗುತ್ತಿತ್ತು. 10 ವರ್ಷಗಳ ಹಿಂದೆ ಆನೆಯನ್ನು ವಾಹನದಲ್ಲಿ ತರುವ ಬದಲಿಗೆ ನಡಿಸಿಕೊಂಡು ತೀರ್ಥಹಳ್ಳಿಗೆ ಕರೆತಂದಿದ್ದರಂತೆ. ಆನೆಯು ದಾಹದಿಂದ ತುಂಗಾ ನದಿಗೆ ನೀರು ಕುಡಿಯಲು ಕರೆದುಕೊಂಡು ಹೋದ ಸಮಯದಲ್ಲಿ, ಆನೆಗೆ ಮದ ಬಂದಿತ್ತು. ಹೀಗಾಗಿ ಆನೆಗೆ ಮದ ಬಂದ ಹಿನ್ನಲೆಯಲ್ಲಿ ಅದನ್ನು ನಿಯಂತ್ರಿಸುವುದು ಕಷ್ಟವಾಗಿತ್ತು.

ಆನೆಯನ್ನು ದಸರಾಕ್ಕೆ ಕರೆತಂದ ಬಳಿಕ ಏನಾದ್ರೂ ಅನಾಹುತಗಳಾದ್ರೆ ಹೊಣೆ ಯಾರು ಎನ್ನುವ ಪ್ರಶ್ನೆಗಳು ಆ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದವು. ಇದೇ ಕಾರಣದಿಂದ ಸ್ಥಳೀಯ ಆಡಳಿತ ಮತ್ತು ಅಂದಿನ ದಸರಾ ಸಮಿತಿಯು ಆನೆಯನ್ನು ದಸರಾ ಕರೆತರಲು ಪ್ರತಿಕ್ರಿಯೆಯನ್ನೇ ಕೈಬಿಟ್ಟಿತ್ತು. ಪ್ರತಿ ದಸರಾ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಆನೆಗಾಗಿ ಸ್ಥಳೀಯರು ಒತ್ತಾಯ ಮಾಡುತ್ತಾರೆ. ಆದ್ರೆ ಸ್ಥಳೀಯರ ಬೇಡಿಕೆಯನ್ನು ಸ್ಥಳೀಯ ಆಡಳಿತ ಇಲ್ಲಿಯ ವರೆಗೂ ಗಮನ ಹರಿಸಿಲ್ಲ. ಈಗ ಮತ್ತೆ ಮುಂದಿನ ತಿಂಗಳು ದಸರಾ ಹಬ್ಬವಿದೆ. ಈ ಹಿನ್ನಲೆಯಲ್ಲಿ ತೀರ್ಥಹಳ್ಳಿ ಪಟ್ಟಣ ಮತ್ತು ತಾಲೂಕಿನಲ್ಲಿ ಆನೆ ಬೇಡಿಕೆ ಶುರುವಾಗಿದೆ.

ಇದನ್ನೂ ಓದಿ: Mysuru Dasara 2023: ರಿಲ್ಯಾಕ್ಸ್ ಮೂಡ್‌ನಲ್ಲಿ ದಸರಾ ಗಜಪಡೆ, ಭೀಮನಿಗೆ ಸ್ನಾನ ಮಾಡಿಸಿದ ಮುದ್ದು ಕಂದ

ಸಾಮಾಜಿಕ ಜಾಲತಾಣದಲ್ಲಿ ಬೇಕೇ ಬೇಕು ಆನೆ ಬೇಕು ಟ್ರೋಲ್ ಮತ್ತು ಅಭಿಯಾನ ಸದ್ಯ ಸದ್ದು ಮಾಡುತ್ತಿದೆ. ಶಿವಮೊಗ್ಗ ದಸರಾ ಅಂಬಾರಿಗಿಂತ ಮೊದಲೇ ತೀರ್ಥಹಳ್ಳಿಯಲ್ಲಿ ಆನೆ ಮೇಲೆ ಅಂಬಾರಿ ಹೊರುವ ಆಚರಣೆಗಳಿದ್ದವು. ಕಳೆದ 10 ವರ್ಷಗಳಿಂದ ಆನೆ ಅಂಬಾರಿ ನಿಂತು ಹೋಗಿದೆ. ಸದ್ಯ ಮತ್ತೆ ಆನೆ ಅಂಬಾರಿ ಶುರು ಮಾಡಬೇಕೆಮದು ತೀರ್ಥಹಳ್ಳಿ ತಾಲೂಕಿನಲ್ಲಿ ಹೆಚ್ಚಾಗಿದೆ.

ಹೆಂಗಸರಿಗೆ ಬಸ್ ಫ್ರೀ ಮಾಡಿದ ಹಾಗೆ ತೀರ್ಥಹಳ್ಳಿ ದಸರಕ್ಕೂ ಆನೆ ನೀಡಿ ಎಂದು ಮಲೆನಾಡಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟರ್ಸ್.. ಹರಿದಾಡುತ್ತಿರುವ ಫೋಸ್ಟರ್ಸ್ ಗಳು. ತೀರ್ಥಹಳ್ಳಿಯಲ್ಲಿ ಆನೆ ತರಿಸದೇ ಇದ್ದಕ್ಕೆ ಆರಗ ಮೇಲೆ ಅಸಮಾಧಾನ ಶುರುವಾಗಿದೆ. ತೀರ್ಥಹಳ್ಳಿ ದಸರಾಕ್ಕೆ ಆನೆ ಕರೆಸಲು ಸಾರ್ವಜನಿಕರ ನಿರಂತರವಾಗಿ ಒತ್ತಾಯ ಮಾಡುತ್ತಿದ್ದಾರೆ.

ದಸರಾ ಸಮಿತಿಯು ಕಳೆದ 10 ವರ್ಷಗಳಿಂದ ಆನೆ ಕರೆಸಲು ನಿಲ್ಲಿಸಿದೆ. ಈ ಬಾರಿ ಸಂಪ್ರದಾಯದಂತೆ ಮುಂದುವರೆಸುವಂತೆ ತೀರ್ಥಹಳ್ಳಿ ತಾಲೂಕಿನ ಜನರು ಒತ್ತಾಯಿಸಿದ್ದಾರೆ. ಆನೆಯ ಮೇಲೆ ಜಂಬೂಸವಾರಿ ಮಾಡಬೇಕೆಂದು ದಸರಾ ಸಮಿತಿಯ ಮೇಲೆ ದಿನೇ ದಿನೇ ಒತ್ತಡ ಜಾಸ್ತಿಯಾಗುತ್ತಿದೆ. ಪ್ರಸಿದ್ಧ ರಾಮೇಶ್ವರ ಹಾಗೂ ಚಾಮುಂಡೇಶ್ವರಿ ದೇವರ ಉತ್ಸವವಾಗಿದೆ. ಸಾವಿರಾರು ಜನರು ದಸರಾ ಉತ್ಸವದಲ್ಲಿ ಭಾಗವಹಿಸುತ್ತಾರೆ. ದಸರಾ ಆನೆ ಕರೆಸುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಈಗ ತಿಕ್ಕಾಟ ಸುರುವಾಗಿದೆ. ಬಿಜೆಪಿಯ ಹಾಲಿ ಶಾಸಕ ಆರ್ ಜ್ಷಾನೇಂದ್ರ ಮತ್ತು ಕಾಂಗ್ರಸ್ ನ ಮಾಜಿ ಸಚಿವ ಕಿಮ್ಮನೆ ರತ್ನಕಾರ್ ನಡುವೆ ಶೀತಲ ಸಮರವು ಶುರುವಾಗಿದೆ. ಸದ್ಯ ಹಾಲಿ ಶಾಸಕ ಆರಗ ಜ್ಞಾನೇಂದ್ರ ನಡೆಗೆ ಅಸಮಾಧಾನ ತೀರ್ಥಹಳ್ಳಿ ನಾಗರಿಕರು ಹೊರ ಹಾಕುತ್ತಿದ್ದಾರೆ.

ಆನೆ ಕರೆಸುವ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಎಂಟ್ರಿ

ಆನೆ ಕರೆಸಲು ಮಾಜಿ ಸಚಿವ ಕಿಮ್ಮನೆ – ಕಾಂಗ್ರೆಸ್ ಮುಖಂಡ ಆರ್ ಎಂ ಮಂಜುನಾಥ್ ಗೌಡ ಇಬ್ಬರಿಂದಲೂ ಒಪ್ಪಿಗೆ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಆನೆಯು ತೀರ್ಥಹಳ್ಳಿಗೆ ಬರುತ್ತದೆ ಎನ್ನುವ ವಿಶ್ವಾಸದಲ್ಲಿ ತೀರ್ಥಹಳ್ಳಿಯ ಕ್ಷೇತ್ರದ ಜನರು ಇದ್ದಾರೆ.

ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ